ಬೋನಿಗೆ ಬಿತ್ತು ಮತ್ತೊಂದು ಚಿರತೆ.
ತುಂಗಾವಾಣಿ.
ಗಂಗಾವತಿ: ಜ-31 ತಾಲ್ಲೂಕಿನ ವಿರುಪಾಪುರ ಗಡ್ಡೆಯ ಭಾಗದಲ್ಲಿ ಇಂದು ಎರಡು ವರ್ಷದ ಚಿರತೆ ಬೋನಿಗೆ ಬಿದ್ದಿದೆ, ಅರಣ್ಯ ಇಲಾಖೆಯ ಗೆಸ್ಟ್ ಹೌಸ್ ಹಿಂದೆ ಇರಿಸಲಾದ ಬೋನಿಗೆ ರಾತ್ರಿಯೆ ಚಿರತೆ ಸೆರೆಯಾಗಿದೆ, ಬೆಳಿಗ್ಗೆ ನೋಡಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ, ಸ್ಥಳಕ್ಕೆ ಬಂದ ಹಿರಿಯ ಅಧಿಕಾರಿಗಳು ಚಿರತೆಯನ್ನು ಪಕ್ಕದ ಬಳ್ಳಾರಿ ಜಿಲ್ಲೆಯ ಕಮಲಾಪುರ ಮೃಗಾಲಯಕ್ಕೆ ಸ್ಥಳಾಂತರ ಕಾರ್ಯ ನಡೆದಿದೆ ಎಂದು ತಿಳಿದು ಬಂದಿದೆ.!
ತಾಲ್ಲೂಕಿನ ಆನೆಗೊಂದಿ- ವಿರುಪಾಪುರ ಗಡ್ಡೆಯ ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶದಲ್ಲಿ ಇನ್ನೂ ಅನೇಕ ಚಿರತೆಗಳಿದ್ದು, ಈಗಾಗಲೇ ಇಬ್ಬರನ್ನು ಕೊಂದು ಹಾಕಿರುವ ಚಿರತೆಗಳು, ಹಲವರಿಗೆ ಗಾಯವಾಗಿವೆ, ಹಗಲೀನಲ್ಲಿಯೇ ಪ್ರತ್ಯಕ್ಷವಾಗುತ್ತಿರುವುದು ತಾಲ್ಲೂಕಿನ ಸುತ್ತಮುತ್ತಲಿನ ಜನರ ಜೀವ ಕೈಯಲ್ಲಿ ಹಿಡಿದು ಜೀವನ ನಡೆಸುತ್ತಿದ್ದಾರೆ. ಆದಷ್ಟು ಬೇಗ ಇನ್ನೂಳಿದ ಚಿರತೆಗಳನ್ನು ಸೆರೆ ಹಿಡಿಯಲಿ ಎನ್ನುವುದು ಸ್ಥಳಿಯರ ಒತ್ತಾಯವಾಗಿದೆ.!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.