ಕೋಳಿ ಕಳ್ಳನ ಜಾಲ ಪತ್ತೆ..!
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಚಾಲಾಖಿ ಕಳ್ಳ.!
ತುಂಗಾವಾಣಿ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕೋಳಿ ಎಗ್ಗರಿಸುವ ಚಾಲಾಖಿ ಕಳ್ಳನ ವಿಡಿಯೋ ವೊಂದು ಭಾರೀ ಸದ್ದು ಮಾಡುತ್ತು . ವಿಡಿಯೋ ಎಲ್ಲಿಯದು ಎಂದು ಜನರು ತಲೆ ಯಲ್ಲಿ ಹುಳ ಬಿಟ್ಟು ಕೊಂಡಿದ್ರು.ಆದ್ರೀಗ ಆ ವಿಡಿಯೋ ಬಗ್ಗೆ ಮಾಹಿತಿ ಸಿಕ್ಕಿದೆ.
ಉಡುಪಿ ಜಿಲ್ಲೆಯ ಕಾಪು ಹತ್ತಿರದ ಸಾಂತೂರ್ ಗ್ರಾಮದ ಮುದರಂಗಡಿಯಲ್ಲಿ ಬೇಬಿ ಪೂಜಾರ್ತಿ ಯನ್ನುವವರ ಮನೆಯಲ್ಲಿ ನಡೆದ ಘಟನೆ.
ನಿನ್ನೆ ಬೆಳಗ್ಗೆ ಇಬ್ಬರು ಭಿಕ್ಷುಕರು ಅವರ ಮನೆಗೆ ಬಂದು ಮನೆಯಲ್ಲಿ ಯಾರೂ ಇರದನ್ನ ಕಂಡ ಖತರ್ನಾಕ್ ಕಳ್ಳರು, ಕೋಳಿಗೆ ಕಾಳು ಹಾಕಿ ಕೋಳಿಗೆ ಚಾದು ತರ ಹಿಡಿಯುವ ಈ ದೃಶ್ಯವನ್ನು ಅವರ ಸೊಸೆ ಕಿಟಕಿಗಳು ಮಧ್ಯದಲ್ಲಿ ಮೊಬೈಲ್ ಇಟ್ಟು ವಿಡಿಯೋ ಮಾಡಿದ್ದಾರೆ. ಇನ್ನು ಇವರದ್ದು ಒಂದು ತಂಡವೇ ಇದ್ದು ಕರಾವಳಿಯ ಕಡೆಗಳಲ್ಲಿ ಇದೇ ರೀತಿ ಕೋಳಿಗಳನ್ನು ಕಳ್ಳತನ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.!?
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.