ಮಟಮಟ ಮಧ್ಯಾನ್ಹ ಮನೆಗಳ್ಳತನ.
ನಗನಾಣ್ಯ ದೋಚಿದ ಕಳ್ಳರು.!
ತುಂಗಾವಾಣಿ
ಗಂಗಾವತಿ ಜ-28 ಗಂಗಾವತಿ ನಗರದ ಹೃದಯ ಭಾಗದಲ್ಲಿರುವ ಯಾವತ್ತು ಜನನಿಬಿಡವಾಗಿರುವ ರಾಯರ ಓಣಿಯಲ್ಲಿ ಇಂದು ಮಧ್ಯಾನ್ಹ 12 ರ ಸುಮಾರಿಗೆ ಮನೆ ಗಳ್ಳತನವಾಗಿದ್ದು ಸುಮಾರು ಏಳು ತೊಲೆ (70 ಗ್ರಾಂ) ಬಂಗಾರ ಮತ್ತು ಐದು ಸಾವಿರ ರೂ ನಗದನ್ನು ದೋಚಿ ಖದೀಮರು ಪರಾರಿಯಾಗಿದ್ದಾರೆ.
ಸರ್ಕಾರಿ ಶಾಲಾ ಶಿಕ್ಷಕಿಯಾಗಿರುವ ಭಾಗ್ಯಮ್ಮ ಎಂಬವವರ ಮನೆಗೆ ನುಗ್ಗಿದ ಕಳ್ಳರು ಮನೆಯ ಬೀಗ ಹೊಡೆದು ಒಳಹೋಗಿ ಅಲ್ಮೆರಾದ ಬಾಗಿಲನ್ನು ಮಾರಕಾಸ್ತ್ರದಿಂದ ಹೊಡೆದು ಹಾಕಿ ನಗನಾಣ್ಯ ದೋಚಿದ್ದಾರೆ.
ಮಾಹಿತಿ ಪಡೆದ ನಗರಠಾಣೆ ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರೀಶಿಲಿಸಿ ಪೋಲಿಸ್ ಶ್ವಾನ ಪಡೆಯ ಮೂಲಕ ಕಳ್ಳರು ಓಡಿ ಹೊಗಿರುವ ಜಾಡು ಹಿಡಿದು ಪೋಲಿಸ್ ಅಧಿಕಾರಿಗಳು ಕಳ್ಳರ ಪತ್ತೆ ಕಾರ್ಯಚರಣೆ ನಡೆಸಿದರು.
ನಗರ ಪ್ರದೇಶದಲ್ಲಿ ಹಗಲು ಕಳ್ಳತನ ಜಾಸ್ತಿಯಾಗಿದ್ದು ಕಳೆದ ತಿಂಗಳು ವಾರ್ಡ್ ನಂ ಒಂದರ ರಾಂಪುರ ಪೇಟ್ ಓಣಿಯಲ್ಲಿಯೂ ಸಹ ಹಗಲು ಗಳ್ಳತನ ನಡೆದಿತ್ತು ಅದೂ ಕೂಡ ಪ್ರಕರಣ ದಾಖಲಾಗಿ ತನಿಖೆ ಹಂತದಲ್ಲಿರುವಾಗ ನಗರದಲ್ಲಿ ಮತ್ತೆ ಕಳ್ಳತನವಾಗಿರುವುದು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿರುವುದಂತೂ ಸತ್ಯ.!
ಇಂದಿನ ಕಳ್ಳತನದ ಪ್ರಕರಣವು ನಗರಠಾಣೆಯಲ್ಲೆ ದಾಖಲಾಗಿದ್ದು ಪೋಲಿಸರು ತನಿಖೆ ನಡೆಸುತ್ತಿದ್ದಾರೆ.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.