ಗಂಗಾವತಿ ನಗರದಲ್ಲಿ ಏಳು ಕರೊನಾ ಪಾಜಿಟಿವ್ ಪತ್ತೆ.!
ಆರು ಕಡೆ ಸೀಲ್ ಡೌನ್.!
ತುಂಗಾವಾಣಿ
ಗಂಗಾವತಿ ಜುಲೈ 05 ಕೊಪ್ಪಳ ಜಿಲ್ಲೆಯಲ್ಲಿ ಇವತ್ತು ಒಟ್ಟು ಹದಿನೇಳು ಕರೋನಾ ಪಾಜಿಟಿವ್ ಪ್ರಕರಣಗಳು ವರದಿಯಾಗಿದ್ದು ಗಂಗಾವತಿ ನಗರ ಒಂದರಲ್ಲೇ ಏಳು ಜನರಿಗೆ ಕರೊನಾ ಸೊಂಕು ದೃಡವಾಗಿದೆ.
ಗಂಗಾವತಿ ನಗರದ ಕನಕಗಿರಿ ರಸ್ತೆಯ ಮಾರುತೇಶ್ವರ ನಗರದ 28 ವರ್ಷದ ಯುವಕ, ಅಗಡಿ ಸಂಗಣ್ಣ ಕ್ಯಾಂಪಿನ ಈರಣ್ಣ ಗುಡಿಯ ಹತ್ತಿರದ 34 ವರ್ಷದ ವ್ಯಕ್ತಿ, ಬಸವಣ್ಣ ವೃತ್ತದ ಹತ್ತಿರ ಇರುವ 23 ವರ್ಷದ ಮಹಿಳೆ, ವಾಲ್ಮೀಕಿ ವೃತ್ತದ ಹತ್ತಿರ ಇರುವ 39 ವರ್ಷದ ವ್ಯಕ್ತಿ, ನೀಲಕಂಠೇಶ್ವರ ನಗರದ 25 ವರ್ಷದ ಯುವತಿ ಮುರಹರಿ ನಗರದ ಒಬ್ಬ ಯುವಕ ಹಾಗು ಕೊಪ್ಪಳದಲ್ಲಿ ವಾಸವಾಗಿದ್ದ ಕಿಲ್ಲಾ ಏರಿಯಾದ ಎರಡು ವರ್ಷದ ಮಗು ಸೇರಿ ಒಟ್ಟು ಏಳು ಜನರಿಗೆ ಸೊಂಕು ತಗುಲಿದ್ದು ಎಲ್ಲರನ್ನೂ ಕೊವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಿಲ್ಲಾಧಿಕಾರಿಗಳ ಆದೇಶದಂತೆ ಸೊಂಕಿತರು ವಾಸವಾಗಿದ್ದ ಮನೆಗಳ ಸುತ್ತಮುತ್ತ 50 ಮೀಟರ್ ವ್ಯಾಪ್ತಿಯನ್ನು ನಗರಸಭೆ ಹಿರಿಯ ನೈರ್ಮಲ್ಯ ನಿರೀಕ್ಷಕ ದತ್ತಾತ್ರೇಯ ಹೆಗ್ಡೆ ಹಾಗು ಸಿಬ್ಬಂದಿ ಸೀಲ್ ಡೌನ್ ಮಾಡುತ್ತಿದ್ದಾರೆ.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.