ಕಳ್ಳನೊಬ್ಬ ಸಖತ್ ಸೌಂಡ್ ಮಾಡ್ತಿದ್ದಾನೆ..!?
ಏನ್ ಟ್ಯಾಲೆಂಟ್ ಗುರು..!?
ತುಂಗಾವಾಣಿ.
ನೀವು ಇದುವರೆಗೆ ಎಂತಥೆಂತ್ತ ಕಳ್ಳತನ ಪ್ರಕರಣಗಳನ್ನು ನೋಡಿರಬಹುದು.ಆದ್ರೆ ಇಲ್ಲೋಬ್ಬನಿದ್ದಾನೆ ಇವನ ಟ್ಯಾಲೆಂಟ್ ಮುಂದೆ ಎಲ್ಲಾ ಹಿಂದೇನೇ.!
ಹೌದು .. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕೋಳಿ ಕಳ್ಳನೊಬ್ಬ ಸಖತ್ ಸೌಂಡ್ ಮಾಡುತ್ತಿದ್ದಾನೆ . ಈ ವಿಡಿಯೋ ನೋಡಿದ್ರೆ ನಿಮಗೆ ಅಚ್ಚರಿ ಆಗುವುದಂತೂ ಗ್ಯಾರಂಟಿ, ಅವನು ಎಂತಹ ಕಲೆಗಾರ ಅನ್ನೋದು ಗೊತ್ತಾಗುತ್ತೆ .
ಈ ವಿಡಿಯೋ ಎಲ್ಲಿಯದ್ದು ಅನ್ನೋ ಬಗ್ಗೆ ಮಾಹಿತಿ ಇಲ್ಲ. ಮನೆಯೊಂದಕ್ಕೆ ತನ್ನ ಪತ್ನಿಯೊಂದಿಗೆ ಬಂದ ಆಗ ವ್ಯಕ್ತಿ ಹೊರಗೆ ಅಂಗಳದಲ್ಲಿ ಕುಳಿತು ಕೋಳಿಗಳಿಗೆ ಕಾಳು ಹಾಕಿ ಮನೆಯವರಿಗೆ ಗೊತ್ತಾಗದಂತೆ ಅದನ್ನು ಹಿಡಿಯುತ್ತಾನೆ . ಅವನ ಹಿಡಿಯೋ ವಿಧಾನ ನೋಡಿದವರು ಮೂಗಿನ ಮೇಲೆ ಬೆರಳಿಡೋದು ಪಕ್ಕಾ…
ನಿಧಾನಕ್ಕೆ ಕೈ ಮುಂದೆ ಮಾಡಿ ಒಮ್ಮೆಲೆ ಒಂದು ಚೂರು ಕೋಳಿಯ ಸೌಂಡ್ ಬಾರದಂತೆ, ಜಾದು ಮಾಡುವ ತರ ಕೋಳಿ ಹಿಡಿದು ತಾನು ತೊಟ್ಟ ಬಟ್ಟೆಯೊಳಗೆ ಹಾಕಿ ಕೊಳ್ಳುತ್ತಾನೆ. ಒಂದರ ಬಳಿಕ ಒಂದರಂತೆ ಇವ ಯಾರಿಗೂ ತಿಳಿಯದಂತೆ ಕೋಳಿ ಹಿಡಿಯೋ ಸ್ಟೈಲ್ ನೋಡಿದವರು ಸುಸ್ತಾಗೋದು ಪಕ್ಕಾ..
ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರುವುದಂತೂ ಸತ್ಯ..!!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.