ಅಗ್ನಿ ಅವಘಡದಲ್ಲಿ ನೊಂದವರಿಗೆ ವಯಕ್ತಿಕ ಪರಿಹಾರ ನೀಡಿದ ಮನಿಯಾರ್.
ತುಂಗಾವಾಣಿ
ಗಂಗಾವತಿ ಜ 24 ಇಂದು ಬೆಳಗಿನ ಜಾವ ಗಂಗಾವತಿ ನಗರದ ಮುಸ್ಲಿಂ ಖಬರ್‌ಸ್ಥಾನ್ ಏರಿಯಾದ ನಾಲ್ಕು ಅಂಗಡಿ ಮುಂಗಟ್ಟುಗಳು ಅಗ್ನಿಗೆ ಆಹುತವಾಗಿ ಲಕ್ಷಾಂತರ ರೂಪಾಯಿಗಳ ಸರಕು ಸಾಮಾನುಗಳು ಸುಟ್ಟು ಕರಕಲಾಗಿದ್ದವು.
ಸೋಪಾ ಸೆಟ್ ರಿಪೇರಿ, ರಗ್ಜಿನ್ ಸಾಮಾನುಗಳ ಮಾರಾಟ, ಮೆಕಾನಿಕ್ ವರ್ಕ್ ಹಾಗು ಟಿಂಬರ್ (ಬಡಿಗೆಕೆಲಸ್) ಕೆಲಸಗಳ ಮೇಲೆ ಅವಲಂಬಿರಾಗಿದ್ದ ನೊಂದವರಿಗೆ ನಗರಸಭೆ ಮಾಜಿ ಅಧ್ಯಕ್ಷ ಹಾಗು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ಯಾಮಿದ್ ಮನಿಯಾರ್ ಸಾಂತ್ವಾನ ಹೇಳಿ ವಯಕ್ತಿಕ ಸಹಾಯ ಧನ ನೀಡಿ ನಗರಸಭೆ ನಿಧಿಯಿಂದ ಮತ್ತು ಮುಸ್ಲಿಮ್ ಕಮೀಟಿಯಿಂದ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.
ಈ ವೇಳೆ ಹಜರತ್ ಬಿಲಾಲ್ ಮಸೀದಿ ಅಧ್ಯಕ್ಷರಾದ ಫಕೃದ್ದೀನ್‌ಸಾಬ, ನಗರಸಭೆ ಸದಸ್ಯರಾದ ಮೌಲಸಾಬ ಇತರರು ಇದ್ದರು.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.