ಚಿರತೆಗೆ ಬಲಿ: ಮೃತ ಕುಟುಂಬಸ್ಥರಿಂದ ಟೈಯರ್ ಗೆ ಬೆಂಕಿ ಹಚ್ಚಿ ಅಹೋ ರಾತ್ರಿ ಧರಣಿ.!
ತುಂಗಾವಾಣಿ
ಗಂಗಾವತಿ ಜ-02 ತಾಲ್ಲೂಕಿನ ವಿರುಪಾಪುರಗಡ್ಡಿಯ ನಿವಾಸಿ ರಾಘವೇಂದ್ರ (19) ದನ ಮೇಯಿಸಲು ಕುರುಚಲ ಗುಡ್ಡಕ್ಕೆ ಹೋಗಿದ್ದ ವ್ಯಕ್ತಿಯನ್ನು ಚಿರತೆ ದಾಳಿ ಮಾಡಿ ಕೊಂದು ಹಾಕಿದೆ, ಚಿರತೆ ಹಾವಳಿಗೆ ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವೆಂದು ಆರೋಪಿಸಿದ ಸಂಬಂಧಿಕರು ಮತ್ತು ಸ್ಥಳಿಯರು ಸ್ಥಳಕ್ಕೆ ಅರಣ್ಯ ಸಚಿವ ಆನಂದಸಿಂಗ್, ಶಾಸಕ ಪರಣ್ಣ ಮನವಳ್ಳಿ ಬರಬೇಕು ಎಂದು ಪಟ್ಟು ಹಿಡಿದ ಘಟನೆ ನಡೆದಿದೆ,
ಪೋಲಿಸರು ಮನವಲಿಸಲು ಮುಂದಾದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಆನೆಗೊಂದಿ ಸಾಣಾಪುರ ಮುಖ್ಯರಸ್ತೆಯ ಮಧ್ಯದಲ್ಲೆ ಟೈಯರ್ ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು, ನಂತರ ಗಂಗಾವತಿ ಉಪವಿಭಾಗದ DYSP ಆರ್, ಉಜ್ಜಿನಕೊಪ್ಪ ಸಂಬಂಧಿಕರಿಗೆ ಸಾಂತ್ವನ ಹೇಳಿ ಸಮಾಧಾನ ಪಡಿಸಿ ವಿರುಪಾಪುರ ಗಡ್ಡೆಯ ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲೆ ಮೃತ ದೇಹವನ್ನು ಇರಿಸಲಾಗಿದೆ.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.