ಚಿರತೆದಾಳಿಗೆ ಮತ್ತೋರ್ವ ಯುವಕ ಸಾವು.
ತುಂಗಾವಾಣಿ.
ಗಂಗಾವತಿ ಜ 01 ತಾಲೂಕಿನಲ್ಲಿ ಚಿರತೆ ದಾಳಿ ಮುಂದುವರೆದಿದ್ದು ಇಂದು ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡೆಯ ಸಮೀಪದ ಕುರುಚಲ ಗುಡ್ಡಕ್ಕೆ ದನ ಮೇಯಿಸಲು ತೆರಳಿದ್ದ ಯುವಕನ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿದೆ.
ರಾಘವೇಂದ್ರ ತಂದೆ ವೆಂಕಟೇಶ (19) ಗಡ್ಡಿ ಪ್ರದೇಶದ ಋಷಿಮುಖ ಬೆಟ್ಟದ ಹತ್ತಿರ ವಿರುವ ಕುರಚಲ ಗುಡ್ಡದ ಹತ್ತಿರ ಧನ ಮೇಯಿಸುತ್ತಿದ್ದಾಗ ನರಭಕ್ಷಕ ಚಿರತೆ ದಾಳಿ ಮಾಡಿದ್ದು ತೀರ್ವ ಗಾಯವಾಗಿ ಯುವಕ ಸ್ಥಳದಲ್ಲೆ ಮೃತ ಪಟ್ಟಿದ್ದಾನೆ.
ಅರಣ್ಯ ಇಲಾಖೆಯು ದುರ್ಗಾದೇವಿ ದೇವಸ್ಥಾನದ ಹತ್ತಿರ ಒಂದು ಚಿರತೆಯನ್ನು ಬೋನಿನಲ್ಲಿ ಹಿಡಿದು ಸುರಕ್ಷಿತ ಪ್ರದೇಶಕ್ಕೆ ತೆಗೆದು ಕೊಂಡು ಹೋಗಿದ್ದರು ಆದರೆ ಇಂದು ಮತ್ತೆ ಚಿರತೆ ದಾಳಿ ಮಾಡಿರುವುದು ಈ ಪ್ರದೇಶದಲ್ಲಿ ಹತ್ತಾರು ನರಭಕ್ಷಕ ಚಿರತೆಗಳು ಬೀಡು ಬಿಟ್ಟಿರುವಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಅರಣ್ಯ ಇಲಾಖೆ ಶೀಘ್ರವಾಗಿ ಕಾರ್ಯಾಚರಿಸಿ ನರಭಕ್ಷಕ ಚಿರತೆಗಳನ್ನು ಹಿಡಿಯದಿದ್ದರೆ ಈ ನರಭಕ್ಷಕ ಚಿರತೆಗಳು ಇನ್ನೆಷ್ಟು ಮಾನವ ಬಲಿ ಪಡೆಯುತ್ತವೆಯೋ ಊಹಿಸಲಾಸಾಧ್ಯವಾಗಿದೆ, ಈ ಕೂಡಲೇ ಜಿಲ್ಲಾಡಳಿತ ಚಿರತೆ ಸೆರೆ ಹಿಡಿಯಲು ಗಂಭೀರ ಪ್ರಯತ್ನ ವಾಗಬೇಕಿದೆ ಎಂದು ಸಾರ್ವಜನಿಕರ ಒತ್ತಾಯ.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.