Breaking News

ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಲು ಅರ್ಹತೆಗಳೇನು.!?

ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಲು ಅರ್ಹತೆಗಳೇನು.?

ತುಂಗಾವಾಣಿ
ಗಂಗಾವತಿ ನ-13 ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಲು ಯಾವುದೇ ಹೊಸ ಮಾನದಂಡಗಳು ಸರಕಾರ ಆದೇಶ ಅಥವಾ ಸುತ್ತೋಲೆ ಹೊರಡಿಸಿಲ್ಲ ಅಂತ ಬೆಂಗಳೂರಿನ ಮಾಹಿತಿ ಹಕ್ಕು ಕಾರ್ಯಕರ್ತನ ಪ್ರಶ್ನೆಗೆ ಗ್ರಾಮೀಣಾಭಿವೃದ್ಧಿ ಹಾಗು ಪಂ ರಾಜ್ ಇಲಾಖೆ ಉತ್ತರಿಸಿದೆ.

ಮಾಹಿತಿ ಹಕ್ಕು ಕಾರ್ಯಕರ್ತ ವಿಕ್ರಮ್ ವಿ ಅವರಿಗೆ ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿ ಉತ್ತರಿಸುತ್ತಾ ಮೂರು ಮಕ್ಕಳನ್ನು ಹೊಂದಿರುವ ವ್ಯಕ್ತಿ ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸುವಂತಿಲ್ಲವೆಂಬ ಸುಪ್ರಿಮ್ ಕೋರ್ಟ್ ಆದೇಶವನ್ನು ಜಾರಿಗೊಳುಸಲು ರಾಜ್ಯದಲ್ಲಿ ಯಾವುದೇ ಸುತ್ತೋಲೆ/ಸರ್ಕಾರಿ ಆದೇಶ ಹೊರಡಿಸಿರುವುದಿಲ್ಲ. ಪಂಚಾಯತಿ ಚುನಾವಣೆಗೆ ಸ್ಪರ್ಧಿಸಲು ವಿದ್ಯಾರ್ಹತೆಯನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಅಡಿಯಲ್ಲಿ ನಿಗದಿ ಪಡಿಸಿರುವುದಿಲ್ಲ. ಮತ್ತು ಪಂಚಾಯತಿ ಚುನಾವಣೆಗೆ ಸ್ಪರ್ಧಿಸಲು ಅರ್ಹತೆ/ಅರ್ಹತೆಗಳನ್ನು ಅಧಿನಿಯಮ 1993 ರ ಪ್ರಕರಣ 11 ಮತ್ತು 12 ರಡಿಯಲ್ಲಿ ನಿಗದಿಪಡಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ಬಿ ನವೀನ್ ಕುಮಾರ್ ಉತ್ತರ ನೀಡಿದ್ದಾರೆ.

ಹಲವು ದಿನಗಳಿಂದ ಸಾಮಾಜಿಕ ಜಾಲಾತಾಣಗಳಲ್ಲಿ ಪಂಚಾಯತಿ ಚುನಾವಣೆಗೆ ಮೂರು ಮಕ್ಕಳು ಇರುವವರು ಹಾಗು ಅವಿಧ್ಯಾವಂತರು ಸ್ಪರ್ಧಿಸಲು ಬರುವುದಿಲ್ಲ ವೆಂಬ ಸಂದೇಶಗಳ ಫೋಟೊಗಳು ಹರಿದಾಡುತ್ತಿದ್ದವು ಈಗ ಮಾಹಿತಿ ಹಕ್ಕು ಅಧಿನಿಯಮದಡಿ ಯಾವುದೇ ಹೊಸ ಮಾನದಂಡಗಳು ಸರಕಾರ ಹೊರಡಿಸಿಲ್ಲವೆಂಬುದು ಸ್ಪಷ್ಟವಾಗಿದೆ.

ಈ ನಡುವೆ ರಾಜ್ಯ ಉಚ್ಛ ನ್ಯಾಯಾಲಯ (ಹೈಕೋರ್ಟ್) ಮುಂದಿನ ಮೂರು ವಾರಗಳಲ್ಲಿ ಗ್ರಾಮ ಪಂಚಾಯತಿ ಚುನಾವಣಾ ವೇಳಾಪಟ್ಟಿ ಪ್ರಕಟಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸೂಚಿಸಿದೆ.

ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.


ನಾಡಿನ ಜನತೆಗೆ ತುಂಗಾವಾಣಿ ಬಳಗದಿಂದ ಬೆಳಕಿನ ಹಬ್ಬ ದೀಪಾವಳಿಯ ಹಾರ್ಧಿಕ ಶುಭಾಷಯಗಳು.
ದೀಪಾವಳಿಯ ಬೆಳಕಿನಲಿ ಕರೋನಾದ ಅಂದಕಾರ ದೂರವಾಗಲಿ.
ಧನ್ಯವಾದಗಳು

Get Your Own News Portal Website 
Call or WhatsApp - +91 84482 65129

Check Also

ಕಾಂಪೌಂಡ್ ಗೆ ಡಬಲ್ ಡಬಲ್ ಬಿಲ್ ಎತ್ತಕತ್ತಿರಿ.! ಕನಕಗಿರಿ ಜನ ನೋಡಕತ್ತಾರ.!

ಕಾಂಪೌಂಡ್ ಗೆ ಡಬಲ್ ಡಬಲ್ ಬಿಲ್ ಎತ್ತಕತ್ತಿರಿ.! ಕನಕಗಿರಿ ಜನ ನೋಡಕತ್ತಾರ.! ತುಂಗಾವಾಣಿ. ಕನಕಗಿರಿ: ತಾಲ್ಲೂಕಿನ ನವಲಿ ಗ್ರಾಮದಲ್ಲಿ ಬಹಿರಂಗ …