ಶಾಸಕ ದಡೆಸೂಗುರು ಯಾರ ಮೇಲೆ ಹಾಕಿದ್ರು ಆವಾಜ್.!?
ಅಲ್ಲಿ ನಡೆದದ್ದಾದರು ಏನು.!?
ತುಂಗಾವಾಣಿ.
ಕಾರಟಗಿ: ಜಮಾಪುರ ಗ್ರಾಮಕ್ಕೆ ಆಗಮಿಸಿದ ಶಾಸಕ ದಡೆಸೂಗುರು ನೂತನ ಪದವಿಪೂರ್ವ ವಿಜ್ಞಾನ ವಸತಿ ಕಾಲೇಜು ಕಟ್ಟಡ ಲೋಕಾರ್ಪಣೆ ಮಾಡಿದರು, ನಂತರ ಹತ್ತಿರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅವ್ಯವಸ್ಥೆಯ ಬಗ್ಗೆ ಹಲವಾರು ದೂರು ಹಿನ್ನೆಲೆ ಹಾಸ್ಟೆಲ್ ಗೆ ಭೇಟಿ ಕೊಟ್ಟ ಶಾಸಕ, ಪ್ರಾಚಾರ್ಯ ಅಮೀನಸಾಬರ ಮೇಲೆ ತೀವ್ರ ತರಾಟೆಗೆ ತೆಗೆದುಕೊಂಡ ಶಾಸಕ,
ಹಾಸ್ಟೆಲ್ ನ ಪರಿಶೀಲನೆ ಮಾಡಿ ಅಲ್ಲಿನ ವಾಸ್ತವ ಶಾಸಕ ದಡೆಸೂಗುರುಗೆ ಮನದಡ್ಡಾದ ಮೇಲೆ ಹರಿ ಹಾಯ್ದು ” ಏನ್ರೀ ಇದು ಕಿತ್ತೋದ ಬೆಡ್, ಮುರಕಲು ಪ್ಯಾನ್, ಸ್ನಾನಗೃಹದ ದುರ್ವಾಸನೆ, ಛೇ ನೀವು ಮನುಷ್ಯರಾ..!? ಈಗಲೇ ನಿಮ್ಮನ್ನು ಅಮಾನತ್ತು ಮಾಡಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವೆ, ಎಂದು ತಿಳಿಸಿದರು.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.