72 ನೇ ಗಣರಾಜ್ಯೋತ್ಸವ ಪ್ರಯುಕ್ತ ಖುರೇಶಿ ಗ್ರೂಪಿನಿಂದ ವೃಧ್ದಾಶ್ರಮದಲ್ಲಿ ಊಟದ ವ್ಯವಸ್ಥೆ.
ತುಂಗಾವಾಣಿ
ಗಂಗಾವತಿ ಜ 26 ಇಂದು ಗಂಗಾವತಿ ನಗರದ ಉತ್ಸಾಹಿ ಯುವಕರ ಪಡೆ ” ನ್ಯೂ ಖುರೇಶಿ ಗ್ರೂಪ್ ” ವತಿಯಿಂದ 72 ನೇ ಗಣರಾಜ್ಯೋತ್ಸವದ ನಿಮಿತ್ಯ ವೃಧ್ದಾಶ್ರಮದ ವೃದ್ದರಿಗೆ ಪೌಷ್ಟಿಕ ಆಹಾರ ಮತ್ತು ಊಟದ ವ್ಯವಸ್ಥೆ ಮಾಡಿ ಗಣರಾಜ್ಯೋತ್ಸವ ಅರ್ಥಪೂರ್ಣವಾಗಿ ಆಚರಿಸಿದರು,
ವಿವಿದ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿರುವ ಖುರೇಷಿ ಗ್ರೂಪಿನ ಯುವಕರು ಲಾಕ್‌ಡೌನ್ ಸಮಯದಲ್ಲಿಯೂ ಕೂಡ ನಗರದ ಬಡವರು ನಿರ್ಗತಿಕರಿಗೆ ಪ್ರತಿದಿನ ಊಟ ಉಪಹಾರವನ್ನು ನೀಡಿ ಹೆಸರು ಗಳಿಸಿದ್ದಾರೆ.
ನಗರದ ಕಂಪ್ಲಿ ರಸ್ಥೆಯಲ್ಲಿರುವ ನವಜೀವನ ವೃಧ್ದಾಶ್ರಮದಲ್ಲಿ ಸುಮಾರು ಮೂವತ್ತೈದು ಪುರುಷ ಮತ್ತು ಮಹಿಳಾ ವೃಧ್ದರು ಹಿರಿ ಜೀವಗಳು ಜೀವನ ಸಾಗಿಸುತ್ತಿದ್ದು ಮರನಾಥ ಟ್ರಷ್ಟ್ ವೃಧ್ದಾಶ್ರಮವನ್ನು ನಿರ್ವಹಿಸುತ್ತಿದೆ.
ಈ ವೇಳೆ ವೃಧ್ದಾಶ್ರಮದ ಟ್ರಷ್ಟಿ ಆನಂದರಾವ್, ಖುರೇಶಿ ಗ್ರೂಪಿನ ಮುಖಂಡರಾದ ಮುಸ್ಥಫಾ ಖುರೇಷಿ, ಸಲೀಮ್ ಬಾಗವನ್ ಜಾವಿದ್ ಖುರೇಷಿ, ಅಬ್ಬಾಸ್ ಖುರೇಷಿ, ಸೋಹೇಲ್ ಖುರೇಷಿ, ಷಾಕೀರ್ ಖುರೇಷಿ ಮತ್ತು ಇತರರು ಇದ್ದರು.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.