ಮತ್ತೆ ನರಭಕ್ಷಕ ಚಿರತೆ ದಾಳಿ.
ಬಾಲಕನಿಗೆ ಗಂಭಿರ ಗಾಯ.
ತುಂಗಾವಾಣಿ
ಗಂಗಾವತಿ ಡಿ 12 ಕಳೆದ ತಿಂಗಳು ಆನೆಗುಂದಿಯ ದುರ್ಗಾದೇವಿ ದೇವಸ್ಥಾನದ ಅಡುಗೆ ಸಿಬ್ಬಂದಿಯನ್ನು ಕೊಂದು ತಿಂದ ನರಭಕ್ಷಕ ಚಿರತೆ ಗಂಗಾವತಿ ಸಮೀಪದ ಸಂಗಾಪುರ ಗ್ರಾಮಕ್ಕೆ ಲಗ್ಗೆ ಹಾಕಿದ್ದು ಇಂದು ಸಂಜೆ ಸಂಗಾಪುರದ ಗುಡ್ಡದ ಹತ್ತಿರ ಹಾಕಿರುವ ಕುರಿ ಹಟ್ಟಿಗೆ ನುಗ್ಗಿ ಹತ್ತು ವರ್ಷದ ಅನೀಲಕುಮಾರ ತಂದೆ ರಾಜು ಎಂಬ ಬಾಲಕನ ಮೇಲೆ ಹಲ್ಲೆ ಮಾಡಿ ಗಂಭಿರ ಗಾಯಗೊಳಿಸಿದೆ.
ಸಂಗಾಪುರ ಗ್ರಾಮದಿಂದ ರಾಂಪುರ ಗ್ರಾಮಕ್ಕೆ ಹೋಗುವ ರಸ್ತೆ ಪಕ್ಕದಲ್ಲಿ ಕುರಿ ಹಟ್ಟಿ ಹಾಕಿ ಗುಡಿಸಲಲ್ಲಿ ವಾಸ ಮಾಡುತ್ತಿರುವ ಬಡ ಕುಟುಂಬದ ಬಾಲಕ ಅನೀಲ್ ಕುಮಾರ ತಮ್ಮ ಕುರಿ ಗಳನ್ನು ಹಟ್ಟಿಯಲ್ಲಿ ಕಟ್ಟುವ ವೇಳೆ ಚಿರತೆ ದಾಳಿ ಮಾಡಿದ್ದು ಬಾಲಕನ ಕೂಗಾಟ ಕೇಳಿ ಅಕ್ಕಪಕ್ಕದ ಜನರು ಬಂದು ಬಾಲಕನನ್ನು ಬಚಾವ್ ನರಬಕ್ಷಕ ಚಿರತೆಯಿಂದ ಮಾಡಿದ್ದಾರೆ.
ದಾಳಿಗೊಳಗಾದ ಬಾಲಕನನ್ನು ಗಂಗಾವತಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳಕ್ಕೆ: ಗಂಗಾವತಿ ತಹಶಿಲ್ದಾರ ರೇಣುಕಾ ಹಾಗು ಶಾಸಕ ಪರಣ್ಣ ಮನವಳ್ಳಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದು ಅರಣ್ಯ ಇಲಾಖೆಯ ಕಾರ್ಯವೈಖರಿ ಬಗ್ಗೆ ಹಾಗು ತಾಲ್ಲೂಕು ಆಡಳಿತ ಮೇಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ..!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.