ಮತಬಿಕ್ಷೆ ಪಡೆದ ಸದಸ್ಯರ ಮೋಜುಮಸ್ತಿ.
ಈಗಲಾದರೂ ಗೊತ್ತಾಯಿತೇ ಅಮೂಲ್ಯ ಮತದ ಬೆಲೆ.!
ತುಂಗಾವಾಣಿ
ಗಂಗಾವತಿ ಜ-26 ತಿಂಗಳ ಹಿಂದೆ ಗ್ರಾಮದಲ್ಲಿ ಮನೆಮನೆಗೆ ತೆರಳಿ ಮತದಾನ ಮಾಡಿ ಎಂದು ಮತಬಿಕ್ಷೆ ಬೇಡುತ್ತಾ ತಿರುಗುತ್ತಿದ್ದ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದು ತಿಂಗಳು ತುಂಬುವುದರೊಳಗೆ ಗೋವಾ ಮತ್ತು ಇತರೆಡೆ ಮೋಜುಮಸ್ತಿಯಲ್ಲಿ ತೊಡಗಿರುವುದು ನೋಡಿದರೆ ನಮ್ಮ ಒಂದು ಓಟು ಎಷ್ಟು ಅಮೂಲ್ಯವಾಗಿದೆ ಎಂದು ಇವರಿಗೆ ಮತಬಿಕ್ಷೆ ನೀಡಿದವರಿಗೆ ಮನದಟ್ಟಾಗುತ್ತಿದೆ.
ಗಂಗಾವತಿ ತಾಲೂಕಿನ ಕನಕಗಿರಿ ವಿಧಾನಸಭಾ ಕ್ಷೇತ್ರಕ್ಕೆ ಬರುವ ಚಿಕ್ಕ ಜಂತಗಲ್ ಗ್ರಾಮ ಪಂಚಾಯತಿ ಕ್ಷೇತ್ರದಲ್ಲಿ ಗ್ರಾಮಾಭಿವೃದ್ದಿ ಮಾಡುವುದಾಗಿ ಮತದಾರರಲ್ಲಿ ಆಮಿಷ ತೋರಿಸಿ ಮತಬಿಕ್ಷೆ ಪಡೆದು ಗೆದ್ದು ಗ್ರಾಮದ ಸಮಸ್ಯೆಗಳನ್ನು ಬದಿಗೊತ್ತಿ ಗೋವಾದಲ್ಲಿ ಅರೆನಗ್ನಾವಸ್ಥೆಯಲ್ಲಿ ಕುಡಿದು ಕುಣಿಯುತ್ತಿರುವ ವಿಡಿಯೋ ಹರಿದಾಡುತ್ತಿದೆ.
ಚಿಕ್ಕಜಂತಗಲ್ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡ (ST) ಮಹಿಳೆಗೆ ಮೀಸಲಾತಿ ನಿಗದಿಯಾಗಿದ್ದು ನಾಳೆ ದಿನಾಂಕ 27-01-2021 ರಂದು ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಡೆಯಲಿದೆ, ಭಿಕ್ಷೆಯಾಗಿ ಪಡೆದ ಮತಗಳ ಶಕ್ತಿಯನ್ನು ಲಕ್ಷ ಲಕ್ಷ ರೂಗಳಿಗೆ ಮಾರಾಟಕ್ಕಿಟ್ಟು ಸುರಕ್ಷಿತ ಸ್ಥಳಕ್ಕೆ ತೆರಳಿದ್ದೇವೆ ಅಂತ ಪೋಸುಕೊಟ್ಟ ಗ್ರಾಪಂ ನೂತನ ಸದಸ್ಯರು ಗೋವಾದ ರೆಸಾರ್ಟ್ ಗಳಲ್ಲಿ ಮೋಜುಮಸ್ತಿ ಕುಣಿತ ಮಾಡುತ್ತಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.!?
ನಾಳೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯ ಮತದಾನಕ್ಕೆ ಸಮಯಕ್ಕೆ ಸರಿಯಾಗಿ ಬಂದು ಬಿಕ್ಷೆಯಾಗಿ ಪಡೆದ ಒಟ್ಟು ಮತದ ಬಲವನ್ನು ತಮ್ಮ ಹಿತಕಾಯುವ ಅಭ್ಯರ್ಥಿಗಳಿಗೆ ನೀಡಲಿದ್ದಾರೆ.
ಇದನ್ನು ಗಮನಿಸುತ್ತಿರುವ ಗ್ರಾಮಸ್ಥರು ತೆಲೆ ಕೆರೆದುಕೊಳ್ಳುತ್ತಿದ್ದಾರೆ.!?
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.