ಅಧಿಕಾರಿಗಳ ವರ್ಗಾವಣೆ.!
ಗಣಿ ಹಗರಣಗಳ ನಂಟು.?
ತುಂಗಾವಾಣಿ
ಕೊಪ್ಪಳ ಸೆ 28 ಕೊಪ್ಪಳ ಜಿಲ್ಲೆಯಲ್ಲಿ ಅಧಿಕಾರಿಗಳ ವರ್ಗಾವಣೆಯ ಹಿಂದೆ ಅಕ್ರಮ ಗಣಿಗಾರಿಕೆ ನಂಟು ಇದೇಯೆ ? ಎಂಬ ಪ್ರಶ್ನೆ ಮೂಡುತ್ತಿದೆ.
ಹೌದು ಕಾರಟಗಿ ತಾಲೂಕಿನ ನೂತನ ಮೊದಲ ಮಹಿಳಾ ತಹಶೀಲ್ದಾರ್ ಕವಿತಾ ಆರ್ ವರ್ಗಾವಣೆ ಆದ ಬೆನ್ನಲ್ಲೆ ಕೊಪ್ಪಳ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಿರಿಯ ಭೂ ವಿಜ್ಞಾನಿ ಸೈಯದ್ ಫಾಸಿಲ್ ಕೂಡ ವರ್ಗಾವಣೆ ಯಾಗಿದ್ದು ಸಂಶಯಕ್ಕೆ ಎಡೆ ಮಾಡಿಕೊಡುತ್ತಿದೆ.
ಕಾರಟಗಿ ಹಾಗು ಗಂಗಾವತಿ ತಾಲೂಕಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ಹಾಗು ಕಲ್ಲುಗಣಿಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿ ಒಂದೇ ದಿನ ಅಕ್ರಮವಾಗಿ ಸಾಗಿಸುತ್ತಿದ್ದ 17 ವಾಹನಗಳನ್ನು ಜಪ್ತಿ ಮಾಡಿ ದಂಧೆಕೋರರ ಹೆಡೆ ಮುರಿ ಕಟ್ಟಿದ್ದ ಕವಿತಾಗೆ ವರ್ಗಾವಣೆ ಬಿರುದು,
ಅದರಂತೆ ಗಣಿ ಮತ್ತು ಭೂ ವಿಜ್ಞಾನಿ ಸೈಯದ್ ಫಾಸಿಲ್ ಕೂಡ ಜಿಲ್ಲೆ ಏಳೂ ತಾಲೂಕಿನಲ್ಲಿ ಸುಮಾರು ಐವತ್ತು ಅಕ್ರಮ ಗಣಿಗಾರಿಕೆ ಚಟುವಟಿಕೆ ವಿರುಧ್ದ ವಿವಿಧ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಅಕ್ರಮಗಳಿಗೆ ಕಡಿವಾಣ ಹಾಕಿದ್ದೆ ಈರ್ವರನ್ನೂ ಜಿಲ್ಲೆಯಿಂದ ವರ್ಗಾವಣೆ ಮಾಡಿರಬಹುದಾದ ಸಂಶಯ ಮೂಡುತ್ತಿದೆ.
ಜಿಲ್ಲೆಯಲ್ಲಿ ಅಕ್ರಮ ದಂಧೆಕೋರರ ಜೊತೆ ಹೊಂದಾಣಿಕೆ ಆಗಿ ಅಕ್ರಮಗಳನ್ನು ಕಂಡೂ ಕಾಣದಂತೆ ಇರಬೇಕಾದ ಪರಿಸ್ಥಿತಿ ಜಿಲ್ಲೆಯಲ್ಲಿ ಉದ್ಭವವಾಗಿದೆ.
ಗಂಗಾವತಿ ತಾಲೂಕಿನಲ್ಲಿ ಹೇರಳವಾದ ಕಲ್ಲು ಗುಡ್ಡಗಳು ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕಿನಲ್ಲಿ ಗ್ರಾನೆಟ್ ಕಲ್ಲುಗಳ ನಿಕ್ಷೇಪಗಳು ಹೇರಳವಾಗಿವೆ ಜಿಲ್ಲೆಯ ಏಳು ತಾಲೂಕಿನ ಮರಳು ನಿಕ್ಷೇಪಗಳು ಮತ್ತು ಗಣಿ ನಿಕ್ಷೇಪಗಳ ನಿರ್ಹವಣೆ ಮಾಡಲು ಜಿಲ್ಲೆಯಲ್ಲಿ ಗಣಿ ಇಲಾಖೆಗೆ ಏಳು ಜನ ಭೂ ವಿಜ್ಞಾನಿಗಳು ಬೇಕು ಆದರೆ ಅಲ್ಲಿ ಇರುದು ಕೇವಲ ನಾಲ್ಕು ಜನ ಭೂವಿಜ್ಞಾನಿಗಳು, ಅದರಲ್ಲೂ ಈಗ ಇಬ್ಬರು ಭೂವಿಜ್ಞಾನಿಗಳು ವರ್ಗಾವಣೆಯಾಗಿ ಈಗ ಕೇವಲ ಇಬ್ಬರು ಮಾತ್ರ ಉಳಿದಿದ್ದಾರೆ ಒಬ್ಬ ಅಧಿಕಾರಿ ಇದುವರೆಗೂ ಐವತ್ತು ಕೇಸ್ ದಾಖಲಿಸಿದ ಉದಾಹರಣೆ ಇಲ್ಲ ಅಂತದ್ರಲ್ಲಿ ಇಂತಹ ಕಾರ್ಯದಕ್ಷತೆ ಇರುವ ಅಧಿಕಾರಿಗಳನ್ನು ವರ್ಗಾಯಿಸುತ್ತಿರುವುದು ನಾಚಿಗೇಡಿನ ಸಂಗತಿಯಾಗಿದೆ.ಇನ್ನೂ ಇವರ ಅವಧಿ ಇದ್ದರೂ ಸಹ ವರ್ಗಾಯಿಸಿರುವುದು ಅವರ ಆಟ ಇವರ ಬಳಿ ನಡೆಯಲಿಲ್ಲ ಎಂದರ್ಥವಾಗುತ್ತಿದೆ.
ಒಟ್ಟಿನಲ್ಲಿ ಜಿಲ್ಲೆಯಲ್ಲಿ ಪ್ರಾಮಾಣಿಕ ಅಧಿಕಾರಿ ವರ್ಗಕ್ಕೆ ಉಳಿಗಾಲವಿಲ್ಲದಿರುವುದು ದುರಂತವೇ ಸರಿ.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.
ವಿಶೇಷ ಸೂಚನೆ:
ತುಂಗಾವಾಣಿ ನ್ಯೂಸ್ ನಲ್ಲಿ ಯಾವುದೆ ಸಿಬ್ಬಂದಿ/ಏಜೆಂಟ್ ರನ್ನು ನೇಮಿಸಿಕೊಂಡಿರುವುದಿಲ್ಲ ಯಾರಾದರೂ ತುಂಗಾವಾಣಿ ಪತ್ರಿಕೆ/ನ್ಯೂಸ್ ನವರು ಎಂದು ಹೇಳಿಕೊಂಡು ಬಂದರೆ ಕೂಡಲೇ ಈ ನಂಬರ್ ಗೆ ಮಾಹಿತಿ ಕೊಡಿ.
9164449191
ಧನ್ಯವಾದಗಳು.