ಗಂಗಾವತಿ ನಗರ ಪಿ,ಐ, ವೆಂಕಟಸ್ವಾಮಿ ಅನಗತ್ಯ ರಾಜಕೀಯ ಮಾಡ್ತಿದ್ದಾರೆ.!
ಶಾಸಕ ರಾಘವೇಂದ್ರ ಹಿಟ್ನಾಳ ಆರೋಪ.!
ತುಂಗಾವಾಣಿ.
ಕೊಪ್ಪಳ: ನಗರದ ಖಾಸಗಿ ಹೋಟೆಲ್ ಒಂದರಲ್ಲಿ ತಂಗಿದ್ದ ಕಾಂಗ್ರೆಸ್ ಮುಖಂಡರ ಕೊಠಡಿಗೆ ಹೋಗಿ ವಿನಾಕಾರಣ ಟಾರ್ಚರ್ ಕೊಡುತ್ತಿದ್ದಾರೆ ಪಿ,ಐ,ವೆಂಕಟಸ್ವಾಮಿ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಆರೋಪ ಮಾಡಿದ್ದಾರೆ,
ಗಂಗಾವತಿ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ತೀರ್ವ ಕುತೂಹಲ ಕೆರಳಿಸಿದೆ, ದಿನಕ್ಕೊಂದು ತಿರುವುಗಳು ಹುಟ್ಟುತ್ತಿವೆ, ಅದರಲ್ಲೂ ಈಗ ಪೋಲಿಸರ ಎಂಟ್ರಿ ಯಿಂದ ರಾಜಕೀಯ ಮುಖಂಡರು ಕೆರಳಿ ಕೆಂಡ ವಾಗಿದ್ದಾರೆ,
ಗಂಗಾವತಿ ನಗರಸಭೆ ಬಿಜೆಪಿ ಸದಸ್ಯೆ ಸುಧಾ ಸೋಮನಾಥ ಹಾಗು ಸೋಮನಾಥ ನನ್ನು ಕಾಂಗ್ರೆಸ್ ಮುಖಂಡರು ಕಿಡ್ನಾಪ್ ಮಾಡಿದ್ದಾರೆ ಎಂದು ಸೋಮನಾಥನ ತಾಯಿ ಬಾಲಮ್ಮ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಅದಕ್ಕೆ ಪ್ರತಿಯಾಗಿ ಸೋಮನಾಥ ಸದಸ್ಯೆ ಸುಧಾ ಸೋಮನಾಥ ಅಜ್ಞಾತ ಸ್ಥಳದಿಂದ ವಿಡಿಯೋ ಮೂಲಕ ನಮ್ಮನ್ನು ಯಾರು ಕಿಡ್ನಾಪ್ ಮಾಡಿಲ್ಲ ನಾವುಗಳು ದೇವಸ್ಥಾನಕ್ಕೆ ಬಂದಿದ್ದೆವೆ, ಚುನಾವಣೆಯ ದಿನದಂದು ಬರುತ್ತೆವೆ ಎಂದು ಹೇಳಿಕೆ ಕೊಟ್ಟಿದ್ದರು.
ಶಾಸಕ ಹಿಟ್ನಾಳ ಮತ್ತು ಪಿಐ ರವರ ವಿಡಿಯೋ
ಪಿ.ಐ. ವೆಂಕಟಸ್ವಾಮಿ ಎಂಟ್ರಿ.!
ಗಂಗಾವತಿ ನಗರ ಪಿ,ಐ,ಯವರು ಇದು ರಾಜಕೀಯ ಪೇರಿತ ಅಂತ ಗೊತ್ತಿದ್ದರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪಿಐ.ವೆಂಕಟಸ್ವಾಮಿ, ಕಾಂಗ್ರೆಸ್ ಮುಖಂಡರು ಕೆಂಗಣ್ಣಿಗೆ ಗುರಿಯಾಗಿದ್ದಾರೆ,
ಕಾಂಗ್ರೆಸ್ ಮುಖಂಡರು ತಂಗಿದ್ದ ಖಾಸಗಿ ಹೋಟೆಲ್ ಮೇಲೆ ದಾಳಿ ಮಾಡಿ ನಮ್ಮಲ್ಲಿ ಸರ್ಚ್ ವಾರೆಂಟ್ ಇದೆ ಪರಿಸಿಲಿಸಬೇಕು, ಎಂದಾಗ ಕಾಂಗ್ರೆಸ್ ಮುಖಂಡರು ಸಹಕರಿಸಿದ್ದಾರೆ, ಆದರೆ ಪಿಐ ವೆಂಕಟಸ್ವಾಮಿ ಪರಿಸಿಲಿಸಿದಾಗ ಯಾರು ಕಾಣದಿದ್ದಾಗ, ಸ್ಥಳಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ ಎಂಟ್ರಿ ಕೊಟ್ಟು ಪಿ,ಐ,ಯವರೆ ನೀವು ಒಂದು ಪಕ್ಷಕ್ಕೆ ಕೆಲಸ ಮಾಡುತ್ತಾಯಿದ್ದಿರಾ.!
ಬಿಜೆಪಿ ಪಕ್ಷದ ಮುಖಂಡರೆ.! ಹೆಂಗೆ ಎಂದು ಅವಾಜ್ ಹಾಕಿದ ತಕ್ಷಣ ಪಿ,ಐ ಯವರು ಇಲ್ಲ ಬಿಡಿ ಸರ್ ಇಲ್ಲಿ ಯಾರು ಇಲ್ಲ ಹೋಗ್ತೆವೆ ಎಂದು ಹೇಳಿ ಹೊರ ನಡೆದ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ.!
ಗಂಗಾವತಿ ಕಾಂಗ್ರೆಸ್ ಹಿರಿಯ ಮುಖಂಡ ಸೈಯದ್ ಅಲಿ ವಿಚಾರಣೆ.
ಗಂಗಾವತಿ ನಗರ ಪೋಲಿಸರು ಅ-25 ಬೆಳಿಗ್ಗೆ 11ಘಂಟೆಯಿಂದ ಸಂಜೆ 7ರ ವರೆಗೆ ಕಾಂಗ್ರೆಸ್ ಮುಖಂಡ ಸೈಯದ್ ಅಲಿ ಯವರನ್ನು ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.!
ಗಂಗಾವತಿ ನಗರಸಭೆ ಬಿಜೆಪಿ ಸುಧಾ ಸೋಮನಾಥ ಪ್ರತ್ಯಕ್ಷ.!
ಅ-25 ರ ಸಂಜೆ 6-30 ರ ಸುಮಾರಿಗೆ ನೇರವಾಗಿ ಕೊಪ್ಪಳ ನಗರ ಪೋಲಿಸ್ ಠಾಣೆಗೆ ಬಂದ ಗಂಗಾವತಿ ನಗರಸಭೆ ಬಿಜೆಪಿ ಸದಸ್ಯೆ ಸುಧಾ ಸೋಮನಾಥ ಮತ್ತು ಪತಿ ಸೋಮನಾಥ ದಂಪತಿ ಗಂಗಾವತಿ ನಗರ ಪಿ,ಐ, ವೆಂಕಟಸ್ವಾಮಿ ರವರಿಗೆ ಮನವರಿಕೆ ಮಾಡಿ ನಾವು ನಮ್ಮ ಸ್ವ ಇಚ್ಛೆಯಿಂದ ಬಂದಿದ್ದೆವೆ, ನಮ್ಮನ್ನು ಯಾರು ಕಿಡ್ನಾಪ್ ಮಾಡಿಲ್ಲ ವಿನಾ ಕಾರಣ ಅನ್ಯ ಪಕ್ಷದವರಿಗೆ ತೊಂದರೆ ಕೊಡಬೇಡಿ, ನಾವುಗಳು ನಮ್ಮ ವಾರ್ಡನ್ನು ಗಂಗಾವತಿ ಶಾಸಕ ಪರಣ್ಣ ಮನವಳ್ಳಿಯವರು ಅಭಿವೃದ್ಧಿ ಮಾಡುತ್ತಿಲ್ಲ ನಿರ್ಲಕ್ಷ್ಯ ತೋರುತ್ತಿದ್ದಾರೆ, ಶಾಸಕರ ಮೇಲೆ ಅಸಮಾಧಾನ ಇದೆ ಅದು ಬಿಟ್ಟರೆ ಬೇರೇನು ಇಲ್ಲ, ಆದರೆ ನಾವುಗಳು ದೇವಸ್ಥಾನಕ್ಕೆ ಬಂದಿದ್ದೆವೆ, ರಾಜಕೀಯದಲ್ಲಿ ಆರೋಪಗಳು ಸಾಮಾನ್ಯ ಅದನ್ನು ಗಂಭೀರವಾಗಿ ಪರಿಗಣಿಸದಿರಿ, ನಮ್ಮನ್ನು ಯಾರು ಅಪಹರಿಸಿಲ್ಲ ಎಂದು ಹೇಳಿಕೆ ಕೊಟ್ಟರು ಎಂದು ತುಂಗಾವಾಣಿಗೆ ಉನ್ನತ ಮೂಲಗಳಿಂದ ಬಂದ ಮಾಹಿತಿ.
ಒಟ್ನಲ್ಲಿ ಈ ರಾಜಕೀಯ ಹೈಡ್ರಾಮಗಳು ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆಯುವುದರಲ್ಲೆ ಇನ್ನೂ ಏನೇನು ನಡೆಯುತ್ತವೆ ಕಾದು ನೋಡ ಬೇಕಿದೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.