63 PDO ಗಳು 15 ಕಾರ್ಯದರ್ಶಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಅದೇಶ,
ಕೊಪ್ಪಳ ಜಿಲ್ಲೆಯ ಪಿಡಿಓಗಳು ಯಾರು ಗೊತ್ತೇ…!?
ತುಂಗಾವಾಣಿ.
ಕೊಪ್ಪಳ: ಅ-20. ರಾಜ್ಯಾದ್ಯಂತ 63 ಪಿಡಿಓ ಗಳನ್ನು ಹಾಗು ಹದಿನೈದು ಜನ ಕಾರ್ಯದರ್ಶಿಗಳನ್ನು ಸರ್ಕಾರದ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಡಾಕ್ಟರ್ ಎಮ್,ಆರ್, ಏಕಾಂತಪ್ಪ ನಿರ್ದೇಶಕರು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ,
ಇದು ಅ-14 ರಂದು ಆದೇಶ ಹೊರಡಿಸಿದೆ ಆದರೆ ತಡವಾಗಿ ಬೆಳಕಿಗೆ ಬಂದಿದೆ, ಕೊಪ್ಪಳ ಜಿಲ್ಲೆಯಲ್ಲಿ ಐವರು ಪಿಡಿಓ ಗಳು ಮತ್ತು ಒಬ್ಬ ಕಾರ್ಯದರ್ಶಿ ವರ್ಗಾವಣೆ ಯಾಗಿದ್ದಾರೆ, ಆದರೆ ವರ್ಗಾವಣೆ ಗೊಂಡ PDO ಗಳನ್ನು ಜಿಲ್ಲಾ ಪಂಚಾಯತ ಸಿ ಇ ಓ ರಘುನಂದನ್ ರವರು ಇನ್ನೂ ವರ್ಗ ಮಾಡಿಲ್ಲ.!
ಕೊಪ್ಪಳ ಜಿಲ್ಲೆಯ ವರ್ಗಾವಣೆ ಯಾದವರ ವಿವರ:
ಒಟ್ಟು ಐದು ಜನ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು
ಒಬ್ಬ ಕಾರ್ಯದರ್ಶಿ
1 ಮಹೇಶ್ ಹೆಚ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯಿತಿ ಶ್ರೀರಾಮನಗರ ಇವರನ್ನು,
ಗ್ರಾಮ ಪಂಚಾಯಿತಿ ವಡ್ಡರಹಟ್ಟಿ ವರ್ಗಾವಣೆಗೊಂಡಿದ್ದಾರೆ.
2 ಪ್ರಶಾಂತ್ ಕುಮಾರ್ ಹಿರೇಮಠ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯತ್ ಕ್ಯಾದಿಗುಪ್ಪ ತಾಲೂಕು ಕುಷ್ಟಗಿ, ಇವರನ್ನು ಗ್ರಾಮ ಪಂಚಾಯಿತಿ ಹಿರೇಗೊಣ್ಣಾಗರ ತಾಲೂಕು ಕುಷ್ಟಗಿ ವರ್ಗಾವಣೆ.
3 ನಿಂಗನಗೌಡ ವೀರಪ್ಪ ಹಿರೇಹಾಳ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯತ್ ಕೊರಡಕೇರ್ ತಾಲೂಕು ಕುಷ್ಟಗಿ, ಇವರನ್ನು ಗ್ರಾಮ ಪಂಚಾಯತ್ ಹನುಮನಾಳ ತಾಲೂಕು ಕುಷ್ಟಗಿ ವರ್ಗಾವಣೆ.
4 ಸಿದ್ದವ್ವ ಮಠದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯತ್ ಮಂಡಲಗೇರಿ ತಾಲ್ಲೂಕು ಕುಕನೂರ್, ಇವರನ್ನು ಗ್ರಾಮ ಪಂಚಾಯತ್ ಕೋಳೂರು ತಾಲ್ಲೂಕು ಕೊಪ್ಪಳ ವರ್ಗಾವಣೆ.
5 ನಾಗರಾಜ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯಿತಿ ಬೆಣಕಲ್ ತಾಲ್ಲೂಕು ಕುಕನೂರ್ ಇವರನ್ನು ಗ್ರಾಮ ಪಂಚಾಯತ್ ಉಳೇನೂರ್ ತಾಲೂಕು ಕಾರಟಗಿ.
6 ನೂರ್ ಉಲ್ ಹಕ್ ಕಾರ್ಯದರ್ಶಿ ಗ್ರಾಮ ಪಂಚಾಯತ್ ಸಂಗಾಪುರ ತಾಲೂಕು ಗಂಗಾವತಿ ವರ್ಗಾವಣೆ.ಗೊಂಡ ಅಧಿಕಾರಿಗಳು.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.