ಗಂಗಾವತಿಯಲ್ಲಿ ಮಗುವಿಗೂ ತಗುಲಿದ ಕ್ರೂರಿ ಕರೋನಾ..!?
ಅಧಿಕೃತ ಘೋಷಣೆ ಬಾಕಿ..!
ತುಂಗಾವಾಣಿ
ಗಂಗಾವತಿ ಜೂ 15 ಗಂಗಾವತಿ ನಗರದಲ್ಲಿ ಇಂದು ಬೆಳಿಗ್ಗೆ ಬಂದ ಮಾಹಿತಿ ಪ್ರಕಾರ ಮೂರನೆ ಕರೋನಾ ಪಾಜಿಟಿವ್ ಕಂಡುಬಂದಿರುವ ಮಾಹಿತಿ ವೈರಲ್ ಆಗಿದೆ.
ಮೂರು ವರ್ಷ ವಯಸ್ಸಿನ ಮಗು ತಮ್ಮ ಪೋಷಕರ ಜೊತೆ ಮುಂಬಯಿ ಮಹಾನಗರದಿಂದ ಗಂಗಾವತಿ ಆಗಮಿಸಿದ್ದು ಮಗುವಿಗೆ ಕರೋನಾ ಪಾಸಿಟಿವ್ ಲಕ್ಷಣ ಕಂಡುಬಂದಿದೆ ಎಂದು ಹೇಳಲಾಗುತ್ತಿದೆ. ಮಗುವಿನಲ್ಲಿ ಕರೋನ ಲಕ್ಷಣಗಳು ಕಂಡುಬಂದಿರುವ ಕಾರಣ ಮಗುವನ್ನು ಕೊಪ್ಪಳದ ಕೊವಿಡ್ ಆಸ್ಪತ್ರೆ ಐಸುಲೇಷನ್ ವಾರ್ಡ್ ಗೆ ಕಳುಹಿಸಿಕೊಡಲಾಗಿದ್ದು ಶಂಕಿತ ಮಗುವಿನ ವಾರ್ಡ್ ಸಂಖ್ಯೆ 3 ಬೆಂಡರವಾಡಿ ಸಮೀಪದ ನಿವಾಸದ ಹತ್ತಿರ ಅಧಿಕಾರಿಗಳ ಜಮಾವಣೆಯಾಗುತ್ತಿದ್ದು ಕಟ್ಟೆಚ್ಚರ ವಹಿಸಲಾಗುತ್ತಿದೆ.
ಹೆಚ್ಚಿನ ಮಾಹಿತಿ ಹೊರಬರಬೇಕಿದೆ.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.