Breaking News

ನಗರಸಭೆ ಸದಸ್ಯೆ ಕಿಡ್ನಾಪ್.! ಶ್ಯಾಮಿದ್ ಮನಿಯಾರ್ ಸೇರಿ ಐವರ ಮೇಲೆ FIR.!

ನಗರಸಭೆ ಸದಸ್ಯೆ ಕಿಡ್ನಾಪ್.!
ಶ್ಯಾಮಿದ್ ಮನಿಯಾರ್ ಸೇರಿ ಐವರ ಮೇಲೆ FIR.!

 

ತುಂಗಾವಾಣಿ
ಗಂಗಾವತಿ ಅ 24 ಭಾರಿ ಕುತೂಹಲ ಕೆರಳಿಸಿರುವ ಗಂಗಾವತಿ ನಗರಸಭೆ ಅಧ್ಯಕ್ಷೀಯ ಚುನಾವಣೆಗೆ ಸಂಬಂದಿಸಿದಂತೆ ಮತ್ತೊಂದು ಟ್ವಿಸ್ಟ್ ಬಂದಿದ್ದು ಬಿಜಿಪಿ ಪಕ್ಷದ ಚಿನ್ಹೆಯಿಂದ ವಾರ್ಡ್ ಸಂಖ್ಯೆ 26 ರಿಂದ ಗೆದ್ದಿರುವ ಸುಧಾ ಸೋಮನಾಥ ಹಾಗು ಸದಸ್ಯೆ ಪತಿ ಸೋಮನಾಥರನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಕಿಡ್ನಾಪ್ ಮಾಡಿದ್ದಾರೆ ಎಂದು ನಗರಸಭೆ ಸದಸ್ಯೆ ಸುಧಾ ಸೋಮನಾಥ ಅವರ ಅತ್ತೆ ಬಾಲಮ್ಮ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


ದಿನಾಂಕ ಅ 11 ರಂದು ಅಂಬೇಡ್ಕರ್ ನಗರದ ಸದಸ್ಯೆಯ ಮನೆಗೆ ಬಂದ ಕಾಂಗ್ರೆಸ್ ಪಕ್ಷದ ನಗರಸಭೆ ಸದಸ್ಯರಾದ ಸೋಮನಾಥ ಭಂಡಾರಿ, ಶ್ಯಾಮಿದ್ ಮನಿಯಾರ, ಮನೋಹರ ಸ್ವಾಮಿ ಹಿರೇಮಠ, ಕಾಂಗ್ರೆಸ್ ಮುಖಂಡರಾದ ಸೈಯದ್ ಅಲಿ ಹಾಗು ಮಲ್ಲಿಕಾರ್ಜುನ ದೇವರಮನಿ ಅವರು ನನ್ನ ಮಗ ಸೋಮನಾಥ ಹಾಗು ಸೊಸೆ ನಗರಸಭೆ ಸದಸ್ಯೆ ಸುಧಾ ಸೋಮನಾಥ ರವರನ್ನು ತಾವು ತಂದಿದ್ದ ಕಾರಿನಲ್ಲಿ ಕರೆದುಕೊಂಡು ಹೋಗಿದ್ದು ಈರ್ವರನ್ನೂ ಕಿಡ್ನಾಪ್ ಮಾಡಿದ್ದಾರೆ ಎಂದು ದೂರಿ ಪ್ರಕರಣ ದಾಖಲಿಸಿದ್ದಾರೆ.


ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ದಿನಾಂಕ ನಿಗದಿಯಾಗಿದ್ದು ಅತಂತ್ರ ಸ್ಥಿತಿಯಲ್ಲಿರುವ ಎರಡೂ ಪಕ್ಷಗಳೂ ನಗರಸಭೆ ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಹರಸಾಹಸ ಮಾಡುತ್ತಿದ್ದು ತಮ್ಮ ತಮ್ಮ ಸದಸ್ಯರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ದಿದ್ದಾರೆ ಆದರೆ ಬಿಜೆಪಿಯ ಸದಸ್ಯೆ ಕೆಲ ದಿನಗಳಿಂದ ಪಕ್ಷದ ಮುಖಂಡರಿಗೆ ಕಾಣದಂತೆ ಮಾಯವಾಗಿದ್ದು ಆಪರೇಷನ್ ಕಾಂಗ್ರೆಸ್ ಆಗಿರಬಹುದಾದ ಸಂಶಯವಿದ್ದು ನಾಪತ್ತೆಯಾಗಿರುವ ಸದಸ್ಯೆಯನ್ನು ಹುಡುಕಿ ತರಲು ಇದೊಂದು ವಿಭಿನ್ನ ಪ್ರಯತ್ನ ಬಿಜೆಪಿ ಯಿಂದ ನಡೆದಿರಬಹುದು ಎಂದು ನಗರದ ನಾಗರೀಕರು ಮಾತನಾಡುತ್ತಿದ್ದಾರೆ.


ನವೆಂಬರ್ 2 ರಂದು ಜಿದ್ದಾಜಿದ್ದಿಯಿಂದ ಕೂಡಿರುವ ಗಂಗಾವತಿ ನಗರಸಭೆ ಅಧ್ಯಕ್ಷೀಯ ಚುನಾವಣೆ ನಿಗದಿಯಾಗಿದ್ದು ಅಧಿಕಾರದ ಚುಕ್ಕಾಣಿ ಹಿಡಿಯಲು ಎರಡು ಪಕ್ಷಗಳೂ ಇನ್ನೂ ಯಾವ ಯಾವ ತಂತ್ರಗಳನ್ನು ಮಾಡಬಹುದು ಎಂದು ಕಾದು ನೋಡಬೇಕಾಗಿದೆ

ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.

Check Also

ಗಂಗಾವತಿ ನಗರಸಭೆ ಸದಸ್ಯನ ಅಪಹರಣ, ಐದು ನಗರಸಭೆ ಸದಸ್ಯರು ಸೇರಿ ಏಳು ಜನರ ಬಂಧನ.!

ಗಂಗಾವತಿ ನಗರಸಭೆ ಸದಸ್ಯನ ಅಪಹರಣ, ಐದು ನಗರಸಭೆ ಸದಸ್ಯರು ಸೇರಿ ಏಳು ಜನರ ಬಂಧನ.! ತುಂಗಾವಾಣಿ. ಗಂಗಾವತಿ: ಅಧಿಕಾರ ಚುಕ್ಕಾಣಿ …