ಕಿಡ್ನಾಪ್ ಕೇಸ್ ಟುಸ್ ಆಯ್ತಾ..?
ನಮ್ಮನ್ನು ಯಾರು ಕಿಡ್ನಾಪ್ ಮಾಡಿಲ್ಲ.
ಗಂಗಾವತಿ ನಗರಸಭೆ ಸದಸ್ಯೆ ಸುಧಾ ಪತಿ ಸೋಮನಾಥ ಸ್ಪಷ್ಟನೆ,
ತುಂಗಾವಾಣಿ.
ಗಂಗಾವತಿ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ತೀರ್ವ ಕುತೂಹಲ ಕೆರಳಿಸಿದ್ದು, ರಾಜಕೀಯ ನಾಟಕೀಯ ಬೆಳವಣಿಗೆ ನಡೆಯುತ್ತಿದ್ದು ಇಂದು ಮತ್ತೊಂದು ಟ್ವಿಸ್ಟ್ ನಡೆದಿದೆ,
ಹೌದು ಗಂಗಾವತಿ ನಗರಸಭೆ 26ನೇ ವಾರ್ಡ್ ನ ಸದಸ್ಯೆ ಸುಧಾ ಸೋಮನಾಥ ಮತ್ತು ಮಗನಾದ ಸೋಮನಾಥನನ್ನು, ನಗರಸಭೆ ಸದಸ್ಯ ಕಾಂಗ್ರೆಸ್ ಮುಖಂಡ ಶಾಮೀದ್ ಮನಿಯಾರ್ ಮನೋಹರ ಸ್ವಾಮಿ ಸೋಮನಾಥ ಭಂಡಾರಿ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸೈಯದ್ ಅಲಿ ಮತ್ತು ಮಲ್ಲಿಕಾರ್ಜುನ ದೇವರಮನಿ ಅವರು ಸೇರಿ ನನ್ನ ಸೊಸೆ ಮತ್ತು ಮಗನನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಸೋಮನಾಥನ ತಾಯಿ ಬಾಲಮ್ಮ ನಗರ ಪೋಲಿಸ್ ಠಾಣೆಯಲ್ಲಿ ಅ-23 ರಂದು ದೂರು ದಾಖಲಿಸಿದ್ದರು,
ಸದಸ್ಯೆ ಸುಧಾ ಪತಿ ಸೋಮನಾಥ ಮಾತನಾಡಿರು ವಿಡಿಯೋ
ಆದರೆ ಸ್ವತಃ ಸೋಮನಾಥ ಅಜ್ಞಾತ ಸ್ಥಳದಿಂದ ವಿಡಿಯೋ ಒಂದರಲ್ಲಿ ಮಾತನಾಡಿದ ಸೋಮನಾಥ ನನ್ನ ಮತ್ತು ನನ್ನ ಧರ್ಮ ಪತ್ನಿಯನ್ನು ಯಾರು ಕಿಡ್ನಾಪ್ ಮಾಡಿಲ್ಲ ನಾವುಗಳು ದೇವಸ್ಥಾನಕ್ಕೆ ಬಂದಿದ್ದೆವೆ, ನಮ್ಮ ವಾರ್ಡ್ ಗೆ ಅನುದಾನ ಮತ್ತು ಅಭಿವೃದ್ಧಿ ಮಾಡುವಲ್ಲಿ ಗಂಗಾವತಿ ಶಾಸಕ ಪರಣ್ಣ ಮನವಳ್ಳಿಯವರು ನಿರ್ಲಕ್ಷ್ಯ ತೋರಿದ್ದಾರೆ, ಅದರಿಂದ ನಾವು ವಯಕ್ತಿಕವಾಗಿಯೂ ಸಹ ನೊಂದಿದ್ದೆವೆ, ಚುನಾವಣೆ ದಿನದಂದು ಕೊಪ್ಪಳ ಎಸ್, ಪಿ, ಯವರ ಜೊತೆಗೆ ಬಂದು ಮತ ಚಲಾಯಿಸಲಾಗುವುದು ಎಂದು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಹೇಗಾದರೂ ಮಾಡಿ ಈ ಬಾರಿ ನಗರಸಭೆ ಬಿಜೆಪಿ ಅಧಿಕಾರಕ್ಕೆ ತೆಗೆದುಕೊಳ್ಳಲು ನಾನಾ ರೀತಿಯ ಕಸರತ್ತುಗಳು ವಿಫಲವಾಗುತ್ತಿದ್ದು ಸ್ಥಳೀಯ ಬಿಜೆಪಿ ಮುಖಂಡರು ಮಜುಗರಕ್ಕೆ ಒಳಗಾಗುತ್ತಿದ್ದಾರೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.!
ಒಟ್ನಲ್ಲಿ ಬಿಜೆಪಿ ಕಾಂಗ್ರೆಸ್ ಪಕ್ಷಗಳು ವಿಭಿನ್ನ ರೀತಿಯ ಪ್ರಯತ್ನಗಳು ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು ಅಂತಿಮವಾಗಿ ಚುನಾವಣೆ ದಿನದಂದು ನಡೆಯುವ ಹೈ ಡ್ರಾಮಗಳು ಇನ್ನಷ್ಟು ರಾಜಕೀಯ ರಂಗು ಪಡೆದುಕೊಳ್ಳುದಂತೂ ಸತ್ಯ..!!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.