Breaking News

ಕಾರಟಗಿ ತಹಶಿಲ್ದಾರ ಶ್ರೀಮತಿ ಕವಿತಾ ವರ್ಗಾವಣೆ ಹಿಂದೆ ಯಾರ ಕೈವಾಡ.?

ಕಾರಟಗಿ ತಹಶಿಲ್ದಾರ ಶ್ರೀಮತಿ ಕವಿತಾ ವರ್ಗಾವಣೆ ಹಿಂದೆ ಯಾರ ಕೈವಾಡ.?

ತುಂಗಾವಾಣಿ
ಕೊಪ್ಪಳ ಸೆ 27 ಕಾರಟಗಿ ಹಾಗು ಗಂಗಾವತಿ ಎರಡು ತಾಲೂಕಿನ ಕೆಲಸಕಾರ್ಯಗಳನ್ನು ಸಮರ್ಥವಾಗಿ ನಿಭಾಯಿಸಿದ್ದ ಹಾಗು ಎಂತಹುದೇ ದೂರುಗಳು ಬಂದರೂ ತಕ್ಷಣದಲ್ಲಿ ಕಾರ್ಯಪ್ರರುತ್ತರಾಗುತ್ತಿದ್ದ ಲೇಡಿ ಸಿಂಗಮ್ ಎಂದು ಖ್ಯಾತಿ ಹೊಂದಿದ್ದ ತಹಶಿಲ್ದಾರ ಶ್ರೀಮತಿ ಕವಿತಾ ಆರ್ ರವರನ್ನು ಯಾವುದೇ ಸ್ಥಳ ನಿಯುಕ್ತಿಗೊಳಿಸದೇ ವರ್ಗಾಯಿಸುವುದರ ಹಿಂದೆ ಯಾರ ಕೈವಾಡವಿದೆ ಎಂದು ಪ್ರಶ್ನೆ ಮೂಡುತ್ತಿದೆ.


ಕಾರಟಗಿ ಮತ್ತು ಗಂಗಾವತಿ ಎಡದಂಡೆ ಕಾಲುವೆ ಅಕ್ರಮ ಪೈಪುಗಳನ್ನು ತೆಗೆಯಿಸಿದ್ದು ತಾಲೂಕಿನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮರಳು ದಂದೆ, ಕಲ್ಲು ಗಣಿಗಾರಿಕೆ, ರಾಜಧನ ಪಾವತಿಸದೇ ಸಾಗಣೆ ಮಾಡುತ್ತಿದ್ದ ಮರಮು ಸಾಗಣೆಯಂತಹ ಅಕ್ರಮಗಳನ್ನು ತಡೆಗಟ್ಟಿ ದಂದೆಕೋರರಿಗೆ ಮುಳುವಾಗಿದ್ದ ಕವಿತಾರವರ ಈ ನಡೆ ವರ್ಗಾವಣೆಗೆ ಕಾರಣವಾಗಿರಬಹುದಾ ಎಂದು ತಾಲೂಕಿನ ಪ್ರಜ್ಞಾವಂತರ ಸಂಶಯವಾಗಿದೆ.


ಕಾರಟಗಿಗೆ ನೂತನ ತಹಶಿಲ್ದಾರರಾಗಿ ಶಿವಶಂಕ್ರಪ್ಪ ಕಟ್ಟೊಳ್ಳಿ ಯವರನ್ನು ದಿನಾಂಕ ಸೆ 22 ರಂದೇ ವರ್ಗಾಯಿಸಿ ಸರಕಾರ ಆದೇಶ ಹೊರಡಿಸಿದ್ದರೂ ತಡವಾಗಿ ಬೆಳಕಿಗೆ ಬಂದಿದೆ.

ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.

ವಿಶೇಷ ಸೂಚನೆ:
ತುಂಗಾವಾಣಿ ನ್ಯೂಸ್ ನಲ್ಲಿ ಯಾವುದೆ ಸಿಬ್ಬಂದಿ/ಏಜೆಂಟ್ ರನ್ನು ನೇಮಿಸಿಕೊಂಡಿರುವುದಿಲ್ಲ ಯಾರಾದರೂ ತುಂಗಾವಾಣಿ ಪತ್ರಿಕೆ/ನ್ಯೂಸ್ ನವರು ಎಂದು ಹೇಳಿಕೊಂಡು ಬಂದರೆ ಕೂಡಲೇ ಈ ನಂಬರ್ ಗೆ ಮಾಹಿತಿ ಕೊಡಿ.
9164449191
ಧನ್ಯವಾದಗಳು.

Check Also

ಗಂಗಾವತಿಗೆ ನೂತನ ತಹಶಿಲ್ದಾರರಾಗಿ ಎಂ ರೇಣುಕಾ ನೇಮಕ.

ಗಂಗಾವತಿಗೆ ನೂತನ ತಹಶಿಲ್ದಾರರಾಗಿ ಎಂ ರೇಣುಕಾ ನೇಮಕ. ತುಂಗಾವಾಣಿ ಗಂಗಾವತಿ ಸೆ 26 ಈ ಹಿಂದೆ ತಹಶಿಲ್ದಾರರಾಗಿದ್ದ ಎಲ್ ಡಿ …