ಗಂಗಾವತಿ: ನಗರಸಭೆಯಿಂದ ದಿಢೀರ್ ಪುಟ್ ಪಾತ್ ತೆರವು ಕಾರ್ಯಾಚರಣೆ ಪೋಲಿಸ್ ಇಲಾಖೆ ಸಾಥ್.!
ತುಂಗಾವಾಣಿ.
ಇಂದು ನಗರಸಭೆ ಹಾಗು ಪೋಲಿಸ್ ಇಲಾಖೆ ದಿಢೀರ್ ಪುಟ್ ಪಾತ್ ತೆರವು ಕಾರ್ಯಚರಣೆ ಮಾಡಲು ಅಖಾಡಕ್ಕೆ ಇಳಿದರು,
ಗಂಗಾವತಿ ನಗರವು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ, ದಿನಕ್ಕೆ ಲಕ್ಷಾಂತರ ಜನರು ಬರ್ತಾರೆ ಹೊಗ್ತಾರೆ ಆದರೆ ಇಲ್ಲಿ ಪುಟ್ ಪಾತ್ ಸಮಸ್ಯೆ ಕಾಡುತ್ತಿದೆ,
ಅಮೃತ ಸಿಟಿ ಯೋಜನೆಯ ಅಡಿಯಲ್ಲಿ ಕೋಟ್ಯಾಂತರ ರೂಪಾಯಿ ಅನುದಾನ ಬಂದಿತ್ತು ಆದರೆ ಗಂಗಾವತಿ ನಗರಸಭೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ತಮಗೆ ಅನುಕೂಲದಂತೆ ಅವೈಜ್ಞಾನಿಕ ವಾಗಿ ಪುಟ್ ಪಾತ್ ನಿರ್ಮಾಣ ಮಾಡಿದ್ರು ಅದು ಯಾವ ಜನರಿಗೂ ಉಪಯೋಗ ಇಲ್ಲದ ರೀತಿಯಲ್ಲಿ ನಿರ್ಮಾಣ ಮಾಡಿದ್ದಾರೆ,
ಈಗ ಅಖಾಡಕ್ಕೆ ಇಳಿದ ಅಧಿಕಾರಿಗಳು.
ಹೌದು ಗಂಗಾವತಿ ನಗರಸಭೆ ಅಧಿಕಾರಿಗಳು ತೆರವು ಮಾಡಲು ಒಂದು ವಾರ ಗಡುವು ನೀಡುವ ಎಚ್ಚರಿಕೆ ಕೊಟ್ಟಿದ್ದಾರೆ, ಪುಟ್ ಪಾತ್ ಮೂಲಕ ಜನರು ಸಂಚರಿಸಬೇಕು ಪುಟ್ ಪಾತ್ ನಲ್ಲಿ ಯಾವುದೇ ರೀತಿಯ ಅಂಗಡಿ ಮುಂಗಟುಗಳು ಇರಬಾರದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ, ಇದಕ್ಕೆ ಪೋಲಿಸ್ ಇಲಾಖೆಯು ಸಹ ಸಾಥ್ ಕೊಟ್ಟಿದೆ ಗಂಗಾವತಿ DYSP ಉಜ್ಜಿನಕೊಪ್ಪ ಮಾತನಾಡಿ ಜನರಿಗೆ ಪುಟ್ ಪಾತ್ ಮೇಲೆ ನಡೆದಾಡಲು ಅನುಕೂಲ ವಾಗಬೇಕು ಸುಂದರ ನಗರಕ್ಕೆ ತಾವೇಲ್ಲರು ಸಹಕರಿಸಬೇಕು ಎಂದು ಜನರಿಗೆ ಮನವು ಮಾಡಿಕೊಂಡ್ರು,
ಅಧ್ಯಕ್ಷ ಚುನಾವಣೆಯ ನಂತರ ಏನೇನು ನಡೆಯುತ್ತೆ..!?
ತೀರ್ವ ಕುತೂಹಲ ಕೆರಳಿಸಿರುವ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯ ನಂತರ ಈ ಕಾರ್ಯಚರಣೆ ಹೀಗೆ ಮುಂದೊರೆಯುತ್ತಾ..?
ಚುನಾಯಿತ ಪ್ರತಿನಿಧಿಗಳು ಇಂತಹ ಕೆಲಸಕ್ಕೆ ಮುಂದಾಗ್ತಾರಾ..? ಕಾದು ನೋಡಬೇಕಿದೆ.!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.