Breaking News

ಕಾರಟಗಿಯ ಮರ್ಯಾದಾ ಹತ್ಯೆಯ ಆರೋಪಿಗಳು ಅರೆಷ್ಟ್.! ಹಂತಕರ ಬಗ್ಗೆ ಎಸ್ ಪಿ ಹೇಳಿದ್ದೇನು.?

ಕಾರಟಗಿಯ ಮರ್ಯಾದಾ ಹತ್ಯೆಯ ಆರೋಪಿಗಳು ಅರೆಷ್ಟ್.!
ಹಂತಕರ ಬಗ್ಗೆ ಎಸ್ ಪಿ ಹೇಳಿದ್ದೇನು.?

ತುಂಗಾವಾಣಿ
ಕೊಪ್ಪಳ ಅ 23 ಕಾರಟಗಿ ಪಟ್ಟಣದ ಚನ್ನಬಸವೇಶ್ವರ ಕಾಲೋನಿಯಲ್ಲಿ ಅ 17 ರಂದು ನಡೆದ ಬರ್ಬರ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿತರನ್ನು ಗಂಗಾವತಿ ಗ್ರಾಮೀಣ ಠಾಣೆ ಸಿಪಿಐ ಉದಯರವಿ ತಂಡ ದಸ್ತಗಿರಿ ಮಾಡಿದ್ದು ಆರೋಪಿಗಳು ಸುಪಾರಿ ಹಂತಕರಾಗಿದ್ದು ಹೆಚ್ಚಿನ ತನಿಖೆ ಮಾಡಲಾಗುತ್ತಿದೆ ಹಾಗು ಇನ್ನಿಬ್ಬರು ಆರೋಪಿಗಳನ್ನು ಪತ್ತೆಹಚ್ಚಿ ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಕೊಪ್ಪಳ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಟಿ ಶಶಿಧರ್ ಮಾಹಿತಿ ನೀಡಿದರು.
ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನವರಾದ ತ್ರಿವೇಣಿ (34) ಹಾಗು ವಿನೋದ್ (31) ಪರಸ್ಪರ ಪ್ರೀತಿಸಿದ್ದರು ಅಂತರ್ಜಾತಿಯ ಕಾರಣ ಮೃತ ತ್ರಿವೇಣಿ ಕುಟುಂಬದಿಂದ ವಿರೋಧ ವ್ಯಕ್ತವಾದ ಕಾರಣ ಇದೇ ಮಾರ್ಚ ತಿಂಗಳಿನಲ್ಲಿ ಗಂಗಾವತಿಗೆ ಆಗಮಿಸಿ ಗಂಗಾವತಿಯ ಉಪನೊಂದಣಾಧಿಕಾರಿಗಳ ಕಾರ್ಯಾಲಯದಲ್ಲಿ ರಿಜಿಸ್ಟರ್ ವಿವಾಹವಾಗಿ ತಾವು ಕೆಲಸ ಮಾಡುತ್ತಿದ್ದ ಜಮಖಂಡಿಯ ಖಾಸಗಿ ಬ್ಯಾಂಕ್ ನಿಂದ ಕಾರಟಗಿ ಹಾಗು ಸಿರುಗುಪ್ಪದ ಖಾಸಗಿ ಬ್ಯಾಂಕುಗಳಿಗೆ ವರ್ಗಾಯಿಸಿಕೊಂಡು ಕಾರಟಗಿ ಪಟ್ಟಣದಲ್ಲಿ ವಾಸವಿದ್ದರು.

ಕಾರಟಗಿ ಪಟ್ಟಣದಲ್ಲಿ ವಾಸವಿರುವ ಬಗ್ಗೆ ಮಾಹಿತಿ ಪಡೆದ ತ್ರಿವೇಣಿ ಯ ಸಹೋದರ ದಂಪತಿಗಳ ಕೊಲೆಗೆ ಸಂಚು ಹೂಡಿ ದುಷ್ಕರ್ಮಿಗಳಿಗೆ ರೂ 50 ಸಾವಿರಕ್ಕೆ ಸುಪಾರಿ ನೀಡಿ ತಮ್ಮೂರಿಗೆ ತೆರಳಿದ್ದಾನೆ ಸುಪಾರಿ ಪಡೆದ ಗುಂಪು ಅ 17ರ ಸಂಜೆ ವಿನೋದ್ ತ್ರಿವೇಣಿ ದಂಪತಿಗಳ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ್ದಾರೆ ಭೀಕರ ಹಲ್ಲೆಗೆ ತ್ರಿವೇಣಿ ಸ್ಥಳದಲ್ಲೆ ಮೃತಪಟ್ಟಿದ್ದು ವಿನೋದ್ ಜೀವನ್ಮರಣದೊಂದಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಆರೋಪಿತರನ್ನು ಪತ್ತೆ ಹಚ್ಚಲು DYSP ಉಜ್ಜಿನಕೊಪ್ಪ ನೇತೃತ್ವದಲ್ಲಿ ಗಂಗಾವತಿ ಗ್ರಾಮೀಣ CPI ಉದಯರವಿ ಅವರನ್ನು ನಿಯೋಜಿಸಲಾಗಿತ್ತು ಇಬ್ಬರು ಆರೋಪಿತರನ್ನು ಪತ್ತೆಹಚ್ಚಿ ನ್ಯಾಯಾಂಗ ತನಿಖೆಗೆ ಒಪ್ಪಿಸಿ ಇನ್ನುಳಿದ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಶೀಘ್ರದಲ್ಲೆ ಆರೋಪಿತರನ್ನು ಹಿಡಿದ CPI ಉದಯರವಿ ತಂಡಕ್ಕೆ ಜಿಲ್ಲೆಯ ಜನತೆ ಶ್ಲಾಘಿಸಿದ್ದಾರೆ.

ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.

Check Also

ಗಂಗಾವತಿ ನಗರಸಭೆ ಸದಸ್ಯನ ಅಪಹರಣ, ಐದು ನಗರಸಭೆ ಸದಸ್ಯರು ಸೇರಿ ಏಳು ಜನರ ಬಂಧನ.!

ಗಂಗಾವತಿ ನಗರಸಭೆ ಸದಸ್ಯನ ಅಪಹರಣ, ಐದು ನಗರಸಭೆ ಸದಸ್ಯರು ಸೇರಿ ಏಳು ಜನರ ಬಂಧನ.! ತುಂಗಾವಾಣಿ. ಗಂಗಾವತಿ: ಅಧಿಕಾರ ಚುಕ್ಕಾಣಿ …