Breaking News

ಗಂಗಾವತಿ ನಗರಸಭೆ ಸದಸ್ಯರು ತಂಗಿದ್ದ ಲಾಡ್ಜ್ ಗೆ ನುಗ್ಗಿದ ಶಾಸಕರು..!? ಕಾಂಗ್ರೆಸ್ ಮುಖಂಡರ ಆರೋಪ.! ರಾತ್ರಿಯಲ್ಲ ಹೈಡ್ರಾಮ..!?

ಗಂಗಾವತಿ ನಗರಸಭೆ ಸದಸ್ಯರು ತಂಗಿದ್ದ ಲಾಡ್ಜ್ ಗೆ ನುಗ್ಗಿದ ಶಾಸಕರು..!?
ಕಾಂಗ್ರೆಸ್ ಮುಖಂಡರ ಆರೋಪ.!
ರಾತ್ರಿಯಲ್ಲ ಹೈಡ್ರಾಮ..!?


ತುಂಗಾವಾಣಿ.
ಕೊಪ್ಪಳ: ಅ-22 ಜಿಲ್ಲೆಯ ಗಂಗಾವತಿ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಹೇಗಾದರೂ ಮಾಡಿ ತಮ್ಮ ವಶಕ್ಕೆ ಅಧಿಕಾರ ಪಡೆಯಬೇಕು ಎನ್ನುವ ಛಲ ಎಲ್ಲಾ ಪಕ್ಕದ ಮುಖಂಡರಿಗೆ ಇರುವುದು ಸಹಜ, ಆದರೆ ಗಂಗಾವತಿ ನಗರಸಭೆ ಮಾತ್ರ ಬಾರಿ ಕುತೂಹಲ ಕೆರಳಿಸಿದೆ,

17 ಸ್ಥಾನ ಗಳಿಸಿರುವ ಕಾಂಗ್ರೆಸ್,
14 ಸ್ಥಾನ ಗಳಿಸಿರುವ ಬಿಜೆಪಿ,
ಇಬ್ಬರು JDC
ಇಬ್ಬರು ಪಕ್ಷೇತರರು,
ಮ್ಯಾಜಿಕ್ ನಂಬರ್ 19,
ತಮ್ಮ ಸದಸ್ಯರನ್ನು ತಮ್ಮ ಹತ್ತಿರ ಇಟ್ಟುಕೊಂಡು ಅವರಿಗೆ ರಕ್ಷಣೆ ಕೊಡುವುದು ಯಾವುದೇ ರೀತಿಯ ಆಸೆ ಆಮಿಷಕ್ಕೆ ಒಳಗಾಗದ ರೀತಿಯಲ್ಲಿ ಪಕ್ಷಕ್ಕೆ ನಿಷ್ಠೆ ತೋರಿಸುವುದು ಸಹಜ,

ಜಾಹೀರಾತು
ಆದರೆ ನಿನ್ನೆ ನಡೆದ ಘಟನೆ ಬಾರಿ ಕುತೂಹಲ ಕೆರಳಿಸಿದೆ, ಬಿಜೆಪಿ ಒಬ್ಬ ಸದಸ್ಯೆ ಕಾಣಿಸುತಿಲ್ಲ ಎಂದು ಗಂಗಾವತಿ ಶಾಸಕ ಪರಣ್ಣ ಮನವಳ್ಳಿ ಮತ್ತು ಕನಕಗಿರಿ ಶಾಸಕ ದಡೆಸೂಗುರು ಅಖಾಡಕ್ಕೆ ಇಳಿಯುವ ಮೂಲಕ ಆಶ್ಚರಿ ಮೂಡಿಸಿದ್ದಾರೆ,

ಹಿಂದಿನ ಸಂಚಿಕೆಯಲ್ಲಿ ತುಂಗಾವಾಣಿ ಪ್ರಕಟಿಸಿತ್ರು.

ಗಂಗಾವತಿ ನಗರಸಭೆ ಯಾರ ಮಡಿಲಿಗೆ..!?

ಜಿಲ್ಲೆಯ ಖಾಸಗಿ ಲಾಡ್ಜ್ ಒಂದರಲ್ಲಿ ನಲ್ಲಿ ತಂಗಿದ್ದ ಗಂಗಾವತಿ ಕಾಂಗ್ರೆಸ್ ನಗರಸಭೆ ಸದಸ್ಯರಾದ ಸೋಮನಾಥ ಬಂಢಾರಿ, ಪಾರ್ವತಮ್ಮ ದುರುಗೇಶ ದೊಡ್ಡಮನಿ, ಹುಲಿಗೇಮ್ಮ ಕಿರಿಕಿರಿ, ಪಾರ್ವತಮ್ಮ ಬಾಲಾಜಿ ಇವರುಗಳು ತಂಗಿದ್ದ ಲಾಡ್ಜ್ ಗೆ ಈರ್ವ ಶಾಸಕರು ಮತ್ತು ಬೆಂಬಲಿಗರು ತೆರಳಿ, ನಮ್ಮ ಪಕ್ಷದ ಒಬ್ಬ ಸದಸ್ಯಣಿ ಕಾಣಿಸುತ್ತಿಲ್ಲ ಎಂದು ವಾದ ಮಾಡಿ ಕಾಂಗ್ರೆಸ್ ಸದಸ್ಯರು ಇರುವ ರೂಮ್ ಗೆ ಹೋಗಿ ಹೈಡ್ರಾಮ ಮಾಡಿದ ಘಟನೆ ನಡೆದಿದೆ..!?

ನಂತರ ಕೊಪ್ಪಳದ ಕಾಂಗ್ರೆಸ್ ಮುಖಂಡರು ಬಂದು ಗಂಗಾವತಿ ಕಾಂಗ್ರೆಸ್ ನಗರಸಭೆ ಸದಸ್ಯರಿಗೆ ಧೈರ್ಯ ಹೇಳಿ ನಂತರ
ಕಾಂಗ್ರೆಸ್ ಪಕ್ಷದ ನಗರಸಭೆ ಸದಸ್ಯರು ಮತ್ತು ಕೊಪ್ಪಳದ ಕಾಂಗ್ರೆಸ್ ಮುಖಂಡರು ಕೊಪ್ಪಳ ಜಿಲ್ಲೆಯ SP ಯವರ ಕಛೇರಿಗೆ ತೆರಳಿ, ನಮ್ಮ ಜೀವಕ್ಕೆ ಹಲ್ಲೆ ಹಾಗೆ ಜೀವ ಬೆದರಿಕೆ ಇದೆ ನಮಗೆ ರಕ್ಷಣೆ ಕೊಡಿ ಎಂದು ದೂರು ಸಹ ಸಲ್ಲಿಸಿದ್ದಾರೆ ಎನ್ನುವ ಮಾಹಿತಿ ಕಾಂಗ್ರೆಸ್ ಪಕ್ಷದ ಉನ್ನತ ಮೂಲದಿಂದ ಬಂದ ಮಾಹಿತಿ, ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ
ಇನ್ನೂ ಕೆಲವೆ ದಿನಗಳು ಬಾಕಿ ಇರುವಾಗಲೆ ಹೈಡ್ರಾಮಗಳು ನಡೆಯುತ್ತಿದ್ದು ಬಾರಿ ಕುತೂಹಲ ಕೆರಳಿಸಿರುವುದಂತೂ ಸತ್ಯ.

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

 

Check Also

ಕಿಡ್ನಾಪ್ ಕೇಸ್ ಟುಸ್ ಆಯ್ತಾ..? ನಮ್ಮನ್ನು ಯಾರು ಕಿಡ್ನಾಪ್ ಮಾಡಿಲ್ಲ. ಗಂಗಾವತಿ ನಗರಸಭೆ ಸದಸ್ಯೆ ಸುಧಾ ಪತಿ ಸೋಮನಾಥ ಸ್ಪಷ್ಟನೆ,

ಕಿಡ್ನಾಪ್ ಕೇಸ್ ಟುಸ್ ಆಯ್ತಾ..? ನಮ್ಮನ್ನು ಯಾರು ಕಿಡ್ನಾಪ್ ಮಾಡಿಲ್ಲ. ಗಂಗಾವತಿ ನಗರಸಭೆ ಸದಸ್ಯೆ ಸುಧಾ ಪತಿ ಸೋಮನಾಥ ಸ್ಪಷ್ಟನೆ, …