ಗಂಗಾವತಿ ನಗರಸಭೆ ಅಧ್ಯಕ್ಷೀಯ ಚುನಾವಣೆ ದಿನಾಂಕ ಪ್ರಕಟ.
ತುಂಗಾವಾಣಿ.
ಗಂಗಾವತಿ ಅ 23 ಕುತೂಹಲ ಕೆರಳಿಸಿದ್ದ ಸ್ಥಳೀಯ ಸಂಸ್ಥೆ ಅಧ್ಯಕ್ಷೀಯ ಚುನಾವಣೆಗೆ ಕೊನೆಗೂ ಕಾಲ ಕೂಡಿ ಬಂದಿದ್ದು ಗಂಗಾವತಿ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನವೆಂಬರ್ 2 ರಂದು ಚುನಾವಣೆ ನಿಗದಿ ಪಡಿಸಿ ಕೊಪ್ಪಳ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
2018 ಆಗಷ್ಟ್ ನಲ್ಲಿ ಸ್ಥಳಿಯ ಸಂಸ್ಥೆ ಚುನಾವಣೆ ನಡೆದು 2018 ರ ಸೆಪ್ಟೆಂಬರ್ 6 ರಂದು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿದ್ದ ಬೆನ್ನಲ್ಲೆ ಚುನಾಯಿತ ಸದಸ್ಯರು ಮೀಸಲಾತಿಯನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದು ನ್ಯಾಯಾಲಯವು ಮೀಸಲಾತಿಗೆ ತಡೆಯಾಜ್ಞೆ ನೀಡಿತ್ತು, ಚುನಾವಣೆಯಲ್ಲಿ ಗೆದ್ದರೂ ಯಾವುದೇ ಅಧಿಕಾರವಿಲ್ಲದೇ ಕೈಕಟ್ಟಿ ಕುಳಿತಿದ್ದ ಚುನಾಯಿತ ಸದಸ್ಯರಿಗೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಖುಷಿ ತಂದಿದ್ದು ಕಳೆದ ಎರಡು ವರ್ಷಗಳಿಂದ ಆಡಳಿತಾಧಿಕಾರಿಗಳ ಕೈಯಲ್ಲಿದ್ದ ನಗರಸಭೆ ಆಡಳಿತ ಈಗ ಜನಪ್ರತಿನಿಧಿಗಳ ಕೈಗೆ ಬರಲಿದೆ.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.