Breaking News

ಗಂಗಾವತಿಯ ಎರಡನೇ ಪಾಜಿಟಿವ್ ಪ್ರಕರಣ. ಹೆಚ್ಚಿದ ಆತಂಕ..!

ಗಂಗಾವತಿಯ ಎರಡನೇ ಪಾಜಿಟಿವ್ ಪ್ರಕರಣ.
ಹೆಚ್ಚಿದ ಆತಂಕ..!

ಗಂಗಾವತಿ 11-06-2020 ತುಂಗಾವಾಣಿ

ಎರಡು ದಿನಗಳ ಹಿಂದೆ ವರದಿ ಯಾಗಿದ್ದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಕರೋನ ಪಾಜಿಟಿವ್ ಪ್ರಕರಣ ವರದಿಯಾಗಿದ್ದು ಗಂಗಾವತಿ ನಗರದ ಜನತೆಗೆ ಆತಂಕ ಮೂಡಿಸಿದೆ.

ನಗರದ ಹೃದಯಭಾಗವಾದ ಜನನಿಬಿಡ ಪ್ರದೇಶವಾದ ಗಾಂಧಿವೃತ್ತದ ಹತ್ತಿರ ಆದೋನಿ ಮೂಲದ 35 ವರ್ಷದ ವ್ಯಕ್ತಿಗೆ ಸೊಂಕು ಪತ್ತೆಯಾಗಿದ್ದು ಸೊಂಕಿತ ವ್ಯಕ್ತಿಯನ್ನು ಕೊಪ್ಪಳದ ಕೊವಿಡ್ ಆಸ್ಪತ್ರೆಗೆ ಕಳುಹಿಸಿ ಏರಿಯಾ ಸೀಲ್ ಡೌನ್ ಮಾಡಿ ಸ್ಯಾನಿಟೈಜ್ ಮಾಡಲಾಗುತ್ತಿದೆ.

ಸೊಂಕಿತ ವ್ಯಕ್ತಿಯ ನಿವಾಸವು ಡೈಲಿ ಮಾರುಕಟ್ಟೆ ಮತ್ತು ಪ್ರಮುಖ ವಹಿವಾಟು ನಡೆಯುವ ಗಾಂಧಿ ವೃತ್ತದ ಬಳಿಯಿದ್ದು ಮೂರು ತಿಂಗಳುಗಳಿಂದ ವ್ಯಾಪಾರ ವಹಿವಾಟು ಇಲ್ಲದೆ ಕಂಗಾಲಾಗಿದ್ದ ವ್ಯಾಪಾರಿಗಳಿಗೆ ಏರಿಯಾ ಸೀಲ್ ಡೌನ್ ನಿಂದಾಗಿ ಬಹಳಷ್ಟು ಆರ್ಥಿಕ ಹೊಡೆತ ಬೀಳುವ ಆತಂಕ ವ್ಯಾಪಾರಿಗಳಿಗೆ ಕಾಡುತ್ತಿದೆ.

ನಗರಸಭೆ ಪೌರಾಯುಕ್ತರಾದ ಕೆ ಸಿ ಗಂಗಾಧರ್ ರವರು ಕರೋನ ಸೊಂಕಿತ ಏರಿಯಾದಲ್ಲಿ ಗಸ್ತಿನಲ್ಲಿದ್ದು ಆರೋಗ್ಯ ಇಲಾಖೆ , ಪೋಲಿಸ್ ಇಲಾಖೆ ಮತ್ತು ನಗರಸಭೆ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಗಳು ಮತ್ತು ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.

ನೈಜ ಸುದ್ದಿಗಳಿಗಾಗಿ ತುಂಗಾವಾಣಿ ನ್ಯೂಸ್ ಓದಿರಿ

Check Also

ಕೊಪ್ಪಳ ಜಿಲ್ಲೆಯಲ್ಲಿ ಇಂದು ಕರೊನಾಗೆ ಮೂರು ಬಲಿ. 139 ಪಾಜಿಟಿವ್ ಪತ್ತೆಯಾಗಿವೆ.!

ಕೊಪ್ಪಳ ಜಿಲ್ಲೆಯಲ್ಲಿ ಇಂದು ಕರೊನಾಗೆ ಮೂರು ಬಲಿ. 139 ಪಾಜಿಟಿವ್ ಪತ್ತೆಯಾಗಿವೆ.! ತುಂಗಾವಾಣಿ. ಕೊಪ್ಪಳ: ಆ,17, ಜಿಲ್ಲೆಯಲ್ಲಿ, ಮತ್ತೆ ಸಾವಿನ …