Breaking News

ಗಂಗಾವತಿ: ಉದ್ಯೋಗ ಕೊಡಿಸುವುದಾಗಿ 20 ಲಕ್ಷ ಪಡೆದು ವಂಚನೆ, ದೂರು ದಾಖಲು ತುಂಗಾವಾಣಿ.

ಗಂಗಾವತಿ: ಉದ್ಯೋಗ ಕೊಡಿಸುವುದಾಗಿ 20 ಲಕ್ಷ ಪಡೆದು ವಂಚನೆ, ದೂರು ದಾಖಲು.!

ತುಂಗಾವಾಣಿ.
ಗಂಗಾವತಿ: ಜಗತ್ತಿನಲ್ಲಿ ಎಲ್ಲಿಯವರೆಗೆ ಮೋಸ ಹೋಗುವವರು ಇರುತ್ತಾರೋ, ಅಲ್ಲಿಯವರೆಗೂ ವಂಚಕ ಜನರು ಮೋಸ ಮಾಡುತ್ತಲೇ ಇರುತ್ತಾರೆ. ನಂಬಿಸಿ ಮೋಸ ಮಾಡುವ ಅದೆಷ್ಟೋ ಮಂದಿ ನಮ್ಮ ಕಣ್ಣ ಮುಂದೆಯೇ ಕಾಣ ಸಿಗುತ್ತಾರೆ. ಇಂತಹದ್ದೇ ಒಂದು ಘಟನೆ ಗಂಗಾವತಿ ತಾಲ್ಲೂಕಿನಲ್ಲಿ ನಡೆದಿದ್ದು, ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ, ಮೂಲತಃ ಕಾರಟಗಿ ತಾಲ್ಲೂಕಿನ ಬೂದುಗುಂಪಾ ಗ್ರಾಮದ ಮಹಮ್ಮದ್ ಅಸರ್, ಎಂಬುವವರ 13-04-2018 ರಿಂದ 20-03-2020 ರ ವರೆಗೆ ₹11,25,000-00 ರೂ, ಪಡೆದು ಕೊಂಡು ದಾವಣಗೆರೆ ಖಾಸಗಿ ITI ಕಾಲೇಜ್ ಒಂದರಲ್ಲಿ ಉಪನ್ಯಾಸಕ ಕೆಲಸ ಕೊಡಿಸುವುದಾಗಿ ಹಾಗೆಯೇ ಅಸರ್ ತಮ್ಮನಿಗೆ ಸರ್ಕಾರಿ ಅನುದಾನಿತ ಖಾಸಗಿ ಕಾಲೇಜ್ ನಲ್ಲಿ ಲ್ಯಾಬ್ ಅಸಿಸ್ಟೆಂಟ್ ಹುದ್ದೆಗೆ ₹7,00000-ರೂ,
ಇವರಿಬ್ಬರಲ್ಲದೆ ಬಸಾಪಟ್ಟಣ ಗ್ರಾಮದ ಫಾರುಕ್ ಎಂಬುವವರಿಗೆ ಕೆಲಸ ಕೊಡಿಸುವುದಾಗಿ ₹2,00000- ನಂಬಿಸಿ ಒಟ್ಟು ₹20,25000- ದುಡ್ಡು ಪಡೆದು ಕೊಂಡು ಕೆಲಸವು ಇಲ್ಲದೆ ದುಡ್ಡು ಇಲ್ಲದೆ ಪರದಾಡುತ್ತಿದ್ದಾರೆ,


ಸದ್ರಿ ಹಣದಲ್ಲಿ ₹6,80,000-ರೂ, ವಾಪಸ್ಸು ಕೊಟ್ಟಿರುತ್ತಾರೆ, ಆದರೆ ಇನ್ನೂಳಿದ ₹13,45,000-ರೂ, ಕೊಡದೆ ಇದ್ದಾಗ ಪ್ರಕರಣ ದಾಖಲು ಮಾಡಿರುತ್ತಾರೆ,
ಮೋಸ ಮಾಡಿದವ ಬೇರೆ ಯಾರು ಅಲ್ಲ ಮಹಮ್ಮದ್ ಅಸರ್ ನ ಸೋದರ ಮಾವ ಮಹಮ್ಮದ್ ಫರ್ವಜ್ ಅಜೀಮ್ ಪಾಷ ವಡ್ಡರಹಟ್ಟಿ ಕ್ಯಾಂಪ್ ಇವರು ಸರ್ಕಾರಿ ಉದ್ಯೋಗಿ, ಎರಡನೇ ವ್ಯಕ್ತಿ ಮಲ್ಲಿಕಾರ್ಜುನ ಗೌಡ ಬಸವನಗೌಡ ಸಿಂಧನೂರು,
ಮೂರನೇ ವ್ಯಕ್ತಿ ಬೆಂಗಳೂರಿನ ನಾಗರಾಜ ಈ ಮೂವರು ಸೇರಿ ಈ ಮೂರು ಜನರಿಗೆ ಮೋಸ ಮಾಡಿರುದಾಗಿ ಮಹಮ್ಮದ್ ಅಸರ್ ಗಂಗಾವತಿ ನಗರ ಪೋಲಿಸ್ ಠಾಣೆಯಲ್ಲಿ 406 420 ಅಡಿಯಲ್ಲಿ ಕೇಸ್ ದಾಖಲು ಮಾಡಿದ್ದಾರೆ,
ಏನೆ ಇರಲಿ ಸ್ವತಃ ಸೋದರ ಸಂಬಂಧಿ ಇತರ ಮೋಸ ಮಾಡಿರುವುದು ಯಾರನ್ನ ನಂಬಬೇಕು ಯಾರನ್ನು ನಂಬಬಾರದು ತಿಳಿಯದ ಸ್ಥಿತಿಯಲ್ಲಿ ಮಹಮ್ಮದ್ ಅಸರ್ ಅಲೆದಾಡುತ್ತಿದ್ದಾರೆ,

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Check Also

ಗಂಗಾವತಿ ನಗರಸಭೆ ಸದಸ್ಯನ ಅಪಹರಣ, ಐದು ನಗರಸಭೆ ಸದಸ್ಯರು ಸೇರಿ ಏಳು ಜನರ ಬಂಧನ.!

ಗಂಗಾವತಿ ನಗರಸಭೆ ಸದಸ್ಯನ ಅಪಹರಣ, ಐದು ನಗರಸಭೆ ಸದಸ್ಯರು ಸೇರಿ ಏಳು ಜನರ ಬಂಧನ.! ತುಂಗಾವಾಣಿ. ಗಂಗಾವತಿ: ಅಧಿಕಾರ ಚುಕ್ಕಾಣಿ …