ಗಂಗಾವತಿ: ರಕ್ಷಣೆ ಕೊಡಿ ಅಂತ ಪೋಲಿಸ್ ಮೊರೆ ಹೋದ ಪಕ್ಷೇತರ ಸದಸ್ಯ.!
ತುಂಗಾವಾಣಿ
ಗಂಗಾವತಿ: ನ-1 ಇದೇ ನವೆಂಬರ್ 2 ರಂದು ಗಂಗಾವತಿ ನಗರಸಭೆಯ ಅಧ್ಯಕ್ಷ ಹಾಗು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದ್ದು ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಬಹುಮತದ ಕೊರತೆ ಇದ್ದು ಅಧ್ಯಕ್ಷ ಗಾದಿ ಪಡೆಯಲು ಪರಸ್ಪರ ಸದಸ್ಯರನ್ನು ಸೆಳೆಯಲು ತಂತ್ರಗಾರಿಕೆ ನಡೆಸಿತ್ತಿರುವುದು ಕಳೆದ ಹತ್ತಾರು ದಿನಗಳಿಂದ ನಡೆಯುತ್ತಿದೆ.
ಬಿಜೆಪಿ ಪಕ್ಷದಿಂದ ಗೆದ್ದಿರುವ ಸದಸ್ಯೆಯನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಅಪಹರಣ ಮಾಡಿದ್ದಾರೆಂದು ದೂರಿ ಸದಸ್ಯೆಯ ಅತ್ತೆ ನಗರ ಠಾಣೆ ಯಲ್ಲಿ ದೂರು ದಾಖಲಿಸಿದ್ದರೆ ಇತ್ತ ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯ ಮನೋಹರ ಸ್ವಾಮಿಯನ್ನು ಬಿಜೆಪಿಯ ಕಾರ್ಯಕರ್ತರು ಅಪಹರಿಸಿಕೊಂಡು ಹೋಗಿ ಹಲ್ಲೆ ಮಾಡಿ ದೂರದ ಹಳಿಯಾಳ ಪೋಲಿಸರ ಕೈಯಲ್ಲಿ ಸಿಕಿಹಾಕಿಕೊಂಡಿದ್ದು ಅಧಿಕಾರದ ಚುಕ್ಕಾಣಿಗಾಗಿ ಏನೆಲ್ಲ ವಿದ್ಯಮಾನಗಳು ನಡೆಯುತ್ತಿವೆ ಕಾಣಬಹುದಾಗಿದೆ.
ಈ ನಡುವೆ ಗಂಗಾವತಿ ನಗರಸಭೆಗೆ ಪಕ್ಷೇತರರಾಗಿ ಗೆದ್ದಿರುವ ಸದಸ್ಯ ಶರಭೋಜಿರಾವ್ ಗಾಯಕವಾಡ್ ಅವರು ನಗರಠಾಣೆಗೆ ತೆರಳಿ ನನಗೆ ರಕ್ಷಣೆ ಕೊಡಿ ಅಂತ ಪೊಲಿಸ್ ಮೊರೆ ಹೊಗಿದ್ದು ನಾಡಿದ್ದು ಚುನಾವಣೆ ಇದೆ ನನಗೆ ಇಷ್ಟ ಬಂದವರಿಗೆ ನಾನು ನನ್ನ ಮತವನ್ನು ನೀಡಲಿದ್ದೇನೆ ಬಿಜೆಪಿ ಹಾಗು ಕಾಂಗ್ರೆಸ್ ಮಧ್ಯೆ ನಡೆಯುತ್ತಿರುವ ನೇರ ಹಣಾಹಣಿಯಲ್ಲಿ ನಾನು ನಲುಗಿ ಹೋಗಿದ್ದು ಅಧಿಕಾರಕ್ಕಾಗಿ ಪಕ್ಷಗಳು ಇನ್ನೂ ಯಾವ ಯಾವ ತಂತ್ರಗಳು ಹಣೆಯಬಹುದೋ ಗೊತ್ತಾಗುತ್ತಿಲ್ಲ ಅದಕ್ಕಾಗಿ ಚುನಾವಣೆ ಮುಗಿಯುವವರೆಗೂ ನನಗೆ ರಕ್ಷಣೆ ಕೊಡಬೇಕು ಎಂದು ಪೋಲಿಸ್ ಇಲಾಖೆಗೆ ಮನವಿ ಮಾಡಿದ್ದಾರೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.