ಗಂಗಾವತಿ ನಗರಸಭೆ ಸದಸ್ಯನ ಅಪಹರಣ,
ಐದು ನಗರಸಭೆ ಸದಸ್ಯರು ಸೇರಿ ಏಳು ಜನರ ಬಂಧನ.!
ತುಂಗಾವಾಣಿ.
ಗಂಗಾವತಿ: ಅಧಿಕಾರ ಚುಕ್ಕಾಣಿ ಹಿಡಿಯಲು ಏನೇಲ್ಲ ನಡೆಯುತ್ತೆ ಅನ್ನುವುದು ಊಹಿಸಲು ಸಾಧ್ಯವಿಲ್ಲ,ರಾಜಕೀಯ ಅಂದ್ರೇನೆ ಹಾಗೆ.!
ಬಿಜೆಪಿ ಪಕ್ಷದ ನಗರಸಭೆ ಸದಸ್ಯರು ಸೇರಿ ಎಂಟು ಜನರು ಸೇರಿದಂತೆ ಗಂಗಾವತಿ ನಗರಸಭೆ ಸದಸ್ಯ ಮನೋಹರ ಸ್ವಾಮಿ ಯನ್ನು ಕಿಡ್ನಾಪ್ ಮಾಡಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೇರೆಯಾಗಿದೆ, ಗುರುವಾರ ಮಧ್ಯರಾತ್ರಿ ಅಪಹರಣ ಮಾಡಿದ್ದಾರೆ ಎನ್ನಲಾಗುತ್ತಿದೆ,
ಬಹಳ ಜಿದ್ದಾ ಜಿದ್ದಿನಿಂದ ಕೂಡಿರುವ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಶತಾಯ ಗತಾಯ ಅಧಿಕಾರ ಚುಕ್ಕಾಣಿ ಹಿಡಿಯಲು ಎರಡು ಪಕ್ಷಗಳು ಹಪಹಪಿಸುತ್ತಿವೆ ಅದರಲ್ಲಿ ಒಂದು ಹೆಜ್ಜೆ ಮುಂದೆ ಹೋದ ಬಿಜೆಪಿ ಒತ್ತಾಯ ಪೂರ್ವಕವಾಗಿ ಕಿಡ್ನಾಪ್ ಮಾಡಿರುವ ದೃಶ್ಯ ಎಲ್ಲಡೆ ವೈರಲ್ ಆಗಿದೆ,
ಮಧ್ಯರಾತ್ರಿ 12-30 ಕ್ಕೆ ಕಾಂಗ್ರೆಸ್ ಮುಖಂಡ ಸುರೇಶ್ ಗೌರಪ್ಪ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಗಂಗಾವತಿ ನಗರ ಪೋಲಿಸರು,
ಯಾರ ವಿರುದ್ಧ ಪ್ರಕರಣ ದಾಖಲಾಗಿದೆ.ಇಲ್ಲಿದೆ ನೋಡಿ..!
(1) ಅಜೇಯ್ ಬಿಚ್ಚಾಲಿ ನಗರಸಭೆ ಸದಸ್ಯ,
(2) ಪರಶುರಾಮ ಮಡ್ಡೆರ್ ನಗರಸಭೆ ಸದಸ್ಯ,
(3) ನವೀನ ಪಾಟೀಲ್ ನಗರಸಭೆ ಸದಸ್ಯ,
(4) ರಾಚಪ್ಪ ಸಿದ್ದಾಪುರ ನಗರಸಭೆ ಸದಸ್ಯ,
(5) ರಾಘವೇಂದ್ರ ಶೆಟ್ಟಿ ಮಾಜಿ ಅಧ್ಯಕ್ಷ ನಗರಸಭೆ,
(6) ರವಿ ಲಿಂಗರಾಜ ಕ್ಯಾಂಪ್
(7) ಡಬರಿ ಶರಣ ಉರ್ಫ CBS ಶರಣ
ಹಾಗು ಇನ್ನಿತರರು ಏಳು ಜನರು
ಎಂದು ದೂರು ದಾಖಲಾಗಿದೆ,
ಏಳು ಜನರ ಬಂಧನ.!
ಗಂಗಾವತಿ ಪೋಲಿಸರ ಮಿಂಚಿನ ಕಾರ್ಯಚರಣೆ ಯಿಂದ ಗಂಗಾವತಿ ನಗರಸಭೆ ಸದಸ್ಯ ಮನೋಹರ ಸ್ವಾವಿಯನ್ನು ಕಿಡ್ನಾಪ್ ಮಾಡಿರುವ ಏಳು ಜನರು ಹಳಿಯಾಳದ ಪ್ರವಾಸಿ ಮಂದಿರದಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಪೋಲಿಸರು ಬಂಧಿಸಿದ್ದಾರೆ, ಎನ್ನುವ ಮಾಹಿತಿ ಇದೆ..!?
ನ:02 ರಂದು ನಡೆಯಲಿರುವ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆಯಲಿದ್ದು
ಕಾಂಗ್ರೆಸ್-17
ಬಿಜೆಪಿ-14
ಜೆಡಿಎಸ್- 2
ಪಕ್ಷೇತರರು -2
MP -1
MLA -1
ಮ್ಯಾಜಿಕ್ ನಂಬರ್ ಗೆ ಎರಡು ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಯುತ್ತಿದ್ದು ಎಲ್ಲವನ್ನೂ ಸೂಕ್ಷ್ಮವಾಗಿ ಗಂಗಾವತಿ ಜನತೆ ನೋಡ್ತಾಯಿದ್ದರೆ,
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.