ಗಂಗಾವತಿ: ನಕಲಿ ಬಂಗಾರ ನೀಡಿ ₹15 ಲಕ್ಷ ವಂಚನೆ ಮಾಡಿ ಪರಾರಿಯಾದ ಖತರ್ನಾಕ್ ಕಳ್ಳರು.!
ತುಂಗಾವಾಣಿ.
ಗಂಗಾವತಿ: ತಾಲ್ಲೂಕಿನ ಶ್ರೀರಾಮನಗರದಲ್ಲಿ (ದೇಸಾಯಿಕ್ಯಾಂಪ್) ಕಿರಾಣಿ ಅಂಗಡಿ ಇಟ್ಟು ಕೊಂಡು ಉಪಜೀವನ ಸಾಗಿಸುತ್ತಿದ್ದ ಶ್ರೀನಿವಾಸ ಎನ್ನುವವರು ಮೂಲತಃ ಗಂಗಾವತಿ ನಿವಾಸಿ, ಶ್ರೀನಿವಾಸ ಅವರು ತಮ್ಮ ಕಿರಾಣಿ ಅಂಗಡಿಯಲ್ಲಿದ್ದಾಗ, ಅಪರಿಚಿತರು ಸುಮಾರು ಇಪ್ಪತೈದು ದಿನಗಳಿಂದ ಕಿರಾಣಿ ಅಂಗಡಿಯಲ್ಲಿ ಸಾಮಾಗ್ರಿ ಖರೀದಿ ಮಾಡುತ್ತಾ ಮಾಡುತ್ತಾ ಸಲಿಗೆ ಬೆಳಸಿ ಕೊಂಡಿರುತ್ತಾರೆ,
ದಿನಾಂಕ 13-10-2020 ರಂದು ಕಿರಾಣಿ ಅಂಗಡಿಗೆ ಬಂದ ಅಪರಿಚಿತ ಖತರ್ನಾಕ್ ಕಳ್ಳರು ನಾವುಗಳು ರೋಡ್ ಕೆಲಸ ಮಾಡ್ತೆವೆ ರೋಡ್ ಕೆಲಸದ ವೇಳೆ ನಮಗೆ ಸುಮಾರು ಒಂದುವರೆ ಕೆಜಿಯಷ್ಟು ಬಂಗಾರ (ಚಿನ್ನ) ಸಿಕ್ಕಿರುತ್ತೆ ಅದನ್ನು ತಗೆದು ಕೊಳ್ತಿರಾ.!
ಎಂದಾಗ ಅನುಮಾನ ಕೊಂಡ ಶ್ರೀನಿವಾಸ ಇವರನ್ನು ಹೇಗೆ ನಂಬುವುದು ಎಂದು ಆಲೋಚನೆ ಮಾಡಿದ ಶ್ರೀನಿವಾಸ,
ಆಗ ಮೋಸ ಮಾಡಲು ಬಂದ ಖತರ್ನಾಕ್ ಕಳ್ಳರು ಬೇಕಿದ್ದರೆ ಬಂಗಾರದ ಅಂಗಡಿಯವರ ಹತ್ರ ತಗೆದು ಕೊಂಡು ಹೋಗಿ ಚಕ್ ಮಾಡಿ ಅದು ಅಸಲಿ ಎಂದಾದ ಮೇಲೆ ನಮಗೆ ಹಣವನ್ನು ಕೊಡಿ ಎಂದು ಎರಡು ಅಸಲಿ ಇರುವ ಬಂಗಾರವನ್ನು (ಗುಂಡುಗಳು) ಕೊಟ್ಟಿದ್ದಾರೆ,
ಆಗ ಶ್ರೀನಿವಾಸ ತಮಗೆ ಪರಿಚಿತರಾದ ಗಂಗಾವತಿಯ ಮಾಳ್ವಿ ಸಾ ಜ್ಯೂವೆಲರ್ಸ್ ನ ಮಾಲೀಕರಾದ ಅಪ್ಪು ಹತ್ತಿರ ತೆಗೆದುಕೊಂಡು ಹೋಗಿ ಚಕ್ ಮಾಡಿಸಿದಾಗ ಅವುಗಳು ಅಸಲಿ ಎಂದು ಬಂಗಾರದ ಅಂಗಡಿ ಮಾಲೀಕರು ತಿಳಿಸಿರುತ್ತಾರೆ,
ನಂತರ ಪುನಃ ದಿ:17-10-2020 ರಂದು ಮತ್ತೆ ಪ್ರತ್ಯಕ್ಷರಾದ ಖತರ್ನಾಕ್ ಕಳ್ಳರು ನಮ್ಮಿಲಿರುವ ಒಂದೂವರೆ 1.50 ಕೆಜಿ ಬಂಗಾರ ಕೊಡುತ್ತೆವೆ ತಾವುಗಳು ನಮಗೆ 18 ಲಕ್ಷ ಕೊಡಬೇಕು ಎಂದು ವ್ಯಾಪಾರ ಶುರು ಹಚ್ಚಿಕೊಳ್ತಾರೆ, ಆಗ ಶ್ರೀನಿವಾಸ ಇಲ್ಲ ಅದು ಬಹಳ ವಾಗುತ್ತೆ ಹದಿನೈದು ಲಕ್ಷ ಕೊಡುವುದಾಗಿ ತಿಳಿಸುತ್ತಾರೆ,
ಅದರಂತೆ ಮಾತುಕತೆ ಮಾಡಿದ ನಂತರ ಸರಿ ಬಿಡಿ ಅಷ್ಟೇ ಕೊಡುವಿರಂತೆ, ಆದರೆ ಅದನ್ನ 21-10-2020 ರಂದು ಕೊಡಿ ಅಂದು ನಾವು ನಿಮಗೆ ಬಂಗಾರ ತಲುಪಿಸುವುದಾಗಿ ಹೇಳ್ತಾರೆ, ಓಕೆ ಎಂದ ಶ್ರೀನಿವಾಸ ಅವರ ದಾರಿಯನ್ನೆ ಕಾಯುತ್ತಾ ಹದಿನೈದು ಲಕ್ಷ ಕೈಯಲ್ಲಿ ಇಟ್ಟುಕೊಂಡು ಕುಳಿತಾಗ ಈ 8605579837 ನಂಬರ್ ನಿಂದ ಒಂದು ಕರೆ ಬರುತ್ತೆ, ಶ್ರೀನಿವಾಸ ರವರೆ ನೀವು ನೇರವಾಗಿ ಸಿದ್ದಾಪುರದ ಹೊರಗಡೆ ಇರುವ ಪೆಟ್ರೋಲ್ ಬಂಕ್ ಹತ್ತಿರ ಗುಂಡೂರು ಲಕ್ಷ್ಮೀ ಕ್ಯಾಂಪ್ ರೋಡಿನಲ್ಲಿ ಬನ್ನಿ ಎಂದಾಗ, ಶ್ರೀನಿವಾಸ ಅವರು ಹೇಳಿದ ಜಾಗಕ್ಕೆ ಹೋದ್ರು ಹದಿನೈದು ಲಕ್ಷ ಕೊಟ್ರು ನಂತರ ಅವರ ಬಳಿ ಇದ್ದ ಒಂದುವರೆ ಕೆಜಿ ಬಂಗಾರ ತಗೆದು ಕೊಂಡು ಬಂದ್ರು,
ನಂತರ ಬಂಗಾರ ಹೌದೋ ಅಲ್ಲವೊ ಎಂದು ಚಕ್ ಮಾಡಿದಾಗ ಅದು ನಕಲಿ ಎಂದು ಗೊತ್ತಾಗುತ್ತದೆ,
ನಕಲಿ ಬಂಗಾರ ಎನ್ನುವುದು ಖಾತ್ರಿಯಾಗಿದೆ. ತಕ್ಷಣ ಶ್ರೀನಿವಾಸ ಗಾಬರಿಗೊಂಡು ಖತರ್ನಾಕ್ ಕಳ್ಳರು ಕೊಟ್ಟ ನಂಬರ್ ಗೆ ಕರೆ ಮಾಡ್ತಾರೆ, ಆಗ ಕಾಲರ್ ಟ್ಯೂನ್ ನಲ್ಲಿ ” ನೀವು ಕರೆ ಮಾಡಿದ ಚಂದಾದಾರರು ಸ್ವಿಚ್ ಆಫ್ ಮಾಡಿದ್ದಾರೆ ನಂತರ ಕರೆ ಮಾಡಿ “ ಎನ್ನುವ ಟ್ಯೂನ್ ಬರುತ್ತೆ,
ಫೋನ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಎಂದು ಗಾಬರಿಗೊಂಡ ಶ್ರೀನಿವಾಸ ನೇರವಾಗಿ ದಿ: 27-10-2020 ರ ಮಂಗಳವಾರ ದಂದು ಗ್ರಾಮೀಣ ಪೋಲಿಸ್ ಠಾಣೆಯ CPI ಉದಯರವಿಯವರನ್ನು ಭೇಟಿಯಾಗಿ ಮಾಹಿತಿ ತಿಳಿಸ್ತಾರೆ, ಆಗ CPI ರವರೂ ನೇರವಾಗಿ ಕಾರಟಗಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿ ಎಂದು ಸೂಚಿಸುತ್ತಾರೆ,
ಅದರಂತೆ ಕಾರಟಗಿಯಲ್ಲಿ ಸದ್ಯ ದೂರು ದಾಖಲಾಗಿದೆ, ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ,
ಏನೆ ಇರಲಿ ಸ್ವಲ್ಪ ಯೋಚಿಸಿ ಇವತ್ತಿನ ದಿನಮಾನದಲ್ಲಿ ಹತ್ತು ಗ್ರಾಮ್ ಬಂಗಾರ ಐವತ್ತು ಸಾವಿರ ಗಡಿ ದಾಟಿದೆ, ಅವರು ಹತ್ತುಸಾವಿರ ರೂಪಾಯಿಗೆ ಹತ್ತು ಗ್ರಾಮ್ ಬಂಗಾರ ಕೊಡ್ತಾರೆ ಎಂದರೆ ಇದರಲ್ಲಿ ಮೋಸ ಇದೆ ಎನ್ನುವ ಸಣ್ಣ ಯೋಚನೇ ಬೇಡ್ವೆ.
ಮೋಸ ಹೋಗುವವರು ಇದ್ದರೆ ಮೋಸ ಮಾಡುವವರು ಇರ್ತಾರೆ,
ಸದ್ಯಕ್ಕೆ ಪೋಲಿಸರು ಖತರ್ನಾಕ ಕಳ್ಳರ ಜಾಡು ಹಿಡಿದು ಹೆಡೆಮುರಿ ಕಟ್ಟಲು ಹೊರಟಿದ್ದಾರೆ, ಮೋಸ ಹೋದ ಶ್ರೀನಿವಾಸಶೆಟ್ರು ನ್ಯಾಯ ಸಿಗುತ್ತೆ ಎನ್ನುವ ಸಣ್ಣ ಆಶಯ ದಿಂದ ದಿನಗಳನ್ನು ಕಳೆಯುತ್ತಿದ್ದಾರೆ..!!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.