Breaking News

ಗಂಗಾವತಿಯಲ್ಲಿ 144 ಸೆಕ್ಷನ್.! ಯಾವಾಗ.!?

ಗಂಗಾವತಿಯಲ್ಲಿ 144 ಸೆಕ್ಷನ್.!
ಯಾವಾಗ.!?


ತುಂಗಾವಾಣಿ.
ಗಂಗಾವತಿ: ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಕೊಪ್ಪಳ ಜಿಲ್ಲೆಯಲ್ಲೇ ತೀವ್ರ ಕುತೂಹಲ ಜಿದ್ದಾ ಜಿದ್ದಿನಿಂದ ಕೂಡಿದ್ದು,

ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯ ಹಿನ್ನೆಲೆ ಗಂಗಾವತಿ ನಗರ ಮತ್ತು ವಡ್ಡರಹಟ್ಟಿ ಗ್ರಾಮದ ವರೆಗೆ ಸಿ,ಆರ್,ಪಿ,ಸಿ ಕಲಂ ಅಡಿಯಲ್ಲಿ 144 ಸೆಕ್ಷನ್ ಚಾರಿ ಮಾಡಲಾಗಿದೆ,


ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನ-2 ರಂದು ಗಂಗಾವತಿಯ ಮಂಥನ ಸಭಾಂಗಣದಲ್ಲಿ ನಡೆಯಲಿದ್ದು, ಎರಡು ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೇಯಾಗಿದೆ, ಅದನ್ನು ಮನಗಂಡ ತಾಲ್ಲೂಕು ಆಡಳಿತ ನ-02 ರ ಬೆಳಿಗ್ಗೆ 6-ಗಂಟೆಯಿಂದ ಮರು ದಿನ ನ-03 ರ ಬೆಳಿಗ್ಗೆ 06 ರ ವರೆಗೆ 144 ಸೆಕ್ಷನ್ ಜಾರಿ ಮಾಡಲಾಗಿದೆ,


ಯಾವುದೇ ರೀತಿಯ ಅಹಿತಕರ ಘಟನೆಗಳು ಗಂಗಾವತಿ ನಗರದಲ್ಲಿ ನಡೆಯಬಾರದು ಎನ್ನುವ ಉದ್ದೇಶ ತಾಲ್ಲೂಕು ಆಡಳಿತದ್ದು ಹಾಗಾಗಿ ಮುಂಜಾಗ್ರತೆಯಿಂದ ತಾಲ್ಲೂಕು ಆಡಳಿತ 144 ಸೆಕ್ಷನ್ ಜಾರಿ ಮಾಡಿದೆ ಎಂದು ತುಂಗಾವಾಣಿಗೆ ಗಂಗಾವತಿ ತಹಶಿಲ್ದಾರ್ ರೇಣುಕಾ ತಿಳಿಸಿದ್ದಾರೆ,
144 ಜಾರಿಯಾದಾಗ ಷರತ್ತು ಹೀಗಿದೆ.!
ನಾಲ್ಕು ಜನರಿಗಿಂತ ಹೆಚ್ಚು ಜನರು ಗುಂಪಾಗಿರಬಾರದು,
ಮೆರವಣಿಗೆ ಹಾಗು ವಿಜಯೋತ್ಸವ ನಿಷೇಧಿಸಲಾಗಿದೆ,
ಯಾವುದೇ ಸಭೆ ಸಮಾರಂಭಗಳಲ್ಲಿ ಅನುಮತಿ ಇಲ್ಲ,
ಕಲ್ಲು, ಚಾಕು, ಚೂರಿ, ಛತ್ರಿ, ಸ್ಪೋಟಕ ವಸ್ತುಗಳನ್ನು ಹಿಡಿದು ಕೊಂಡು ಹೋಗುವುದಾಗಲಿ ಶೇಖರಿಸುವುದಾಗಲಿ ಅಪರಾಧ,
ಕೂಗಾಟ ಚಿರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲು
ಎಂದು ತಾಲ್ಲೂಕು ಆಡಳಿತ ತಿಳಿಸಿದೆ.

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.