ಸ್ಪ್ರೇ.. ಹೊಡೆದು ಕಿಡ್ನ್ಯಾಪ್ ಮಾಡಿದ್ರಂತೆ..!!
ತುಂಗಾವಾಣಿ.
ಹಳಿಯಾಳ: ಗಂಗಾವತಿ ನಗರಸಭೆ ಸದಸ್ಯ ಕಿಡ್ನ್ಯಾಪ್ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿವೆ, ಉನ್ನತ ಮೂಲಗಳ ಮಾಹಿತಿ ಪ್ರಕಾರ, ಗಂಗಾವತಿ ನಗರಸಭೆ ಸದಸ್ಯ ಮನೋಹರ ಸ್ವಾಮಿ ಯನ್ನು ಗಂಗಾವತಿ ನಗರದ ಕೊಪ್ಪಳ ರಸ್ತೆಯಲ್ಲಿ ಬರುವ ನಕ್ಷತ್ರ ಕನ್ಪರ್ಟ್ ನಲ್ಲಿ ಊಟಕ್ಕೆ ಕುಳಿತಾಗ ಸ್ಥಳೀಯ ನಗರಸಭೆ ಸದಸ್ಯರು ಮನೋಹರ ಸ್ವಾಮಿ ಮುಖಕ್ಕೆ ಸ್ಪ್ರೇ…ಹೊಡೆದು ಜ್ಞಾನ ತಪ್ಪಿಸಿ ಕಾರ್ ನಲ್ಲಿ ಹಾಕಿಕೊಂಡು ಹೊಗಿದ್ದಾರೆ,
ಊಟ ಮಾಡುವ ಸಂದರ್ಭದಲ್ಲಿ ಏಕಾಏಕಿ ಬಂದ ಗಂಗಾವತಿ ಸದಸ್ಯರು ನನ್ನ ಮೇಲೆ ಹಲ್ಲೇ ಮಾಡಿ ಬಾರ್ ನಿಂದ ಹೊರ ಕರೆದುಕೊಂಡು ಬಂದು ಸ್ಪ್ರೇ…ಹೊಡೆದು ಜ್ಞಾನ ತಪ್ಪಿಸಿದ್ದರು, ಬೆಳಗಿನ ಜಾವ ಜ್ಞಾನ ಬಂದಾಗ ಅವರಿಂದ ತಪ್ಪಿಸಿಕೊಂಡು ಹಳಿಯಾಳ ಪೋಲಿಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ,
ಎನ್ನುವ ಮಾಹಿತಿ ದೃಢವಾಗಿದೆ, ನಂತರ ಒಂದು ವಾಹನದಿಂದ ಇನ್ನೊಂದು ವಾಹನಕ್ಕೆ ಸ್ವಿಫ್ಟ್ ಮಾಡುತ್ತಾ ಕರೆದು ಕೊಂಡು ಹೋಗಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ ಎಂದು ಬಲ್ಲ ಮೂಲಗಳ ಮಾಹಿತಿ ಪ್ರಕಾರ ತಿಳಿದು ಬಂದಿದೆ..!!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.