ಕಿಡ್ನ್ಯಾಪ್ ಸ್ಥಳ ಪರಿಶೀಲನೆ ಮಾಡಿದ ಗಂಗಾವತಿ ಟೌನ್ ಪೋಲಿಸರು..!
ತುಂಗಾವಾಣಿ.
ಗಂಗಾವತಿ: ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಹಿನ್ನೆಲೆ ಕುದುರೆ ವ್ಯಾಪಾರ ಕುದುರದಿದ್ದಾಗ ಪುಡಿ ರೌಡಿಗಳಿಂದ ಒತ್ತಾಯ ಪೂರ್ವಕವಾಗಿ ಕಿಡ್ನ್ಯಾಪ್ ಗೆ ಕೈ ಹಾಕುವ ಮೂಲಕ ಗಂಗಾವತಿ ನಗರ ಬೆಚ್ಚಿ ಬಿಳುವಂತೆ ಮಾಡಿದೆ ರಾಜಕೀಯ,
ನಗರಸಭೆ ಸದಸ್ಯ ಮನೋಹರ ಸ್ವಾಮಿ ತಂಗಿದ್ದ ನಗರದ ನಕ್ಷತ್ರ ಬಾರ್ ಆಂಡ್ ರೆಸ್ಟೋರೆಂಟ್ ನಲ್ಲಿ ಕಿಡ್ನ್ಯಾಪ್ ಆಗಿದ್ದರು, ಅವರನ್ನು ಯಾವ ರೀತಿಯಲ್ಲಿ ಕಿಡ್ನ್ಯಾಪ್ ಮಾಡಲಾಯಿತು ಎನ್ನುವ ಮಾಹಿತಿ ಪಡೆಯಲು ನಿನ್ನೆಯ ದಿನ ನಕ್ಷತ್ರ ಬಾರ್ ಆಂಡ್ ರೆಸ್ಟೋರೆಂಟ್ ಗೆ ಪಂಚನಾಮೆ ಮಾಡಲು ಬಂದ ನಗರ ಪಿ,ಐ, ವೆಂಕಟಸ್ವಾಮಿ ಮತ್ತು ಸಿಬ್ಬಂದಿ ರೆಸ್ಟೋರೆಂಟ್ ನ ಪರಿಶೀಲನೆ ನಡೆಸಿದರು, ಘಟನೆ ಸ್ಥಳದ ಎಲ್ಲಾ ಮಾಹಿತಿ ಪಡೆದುಕೊಂಡ ನಗರ ಪಿ,ಐ, ವೆಂಕಟಸ್ವಾಮಿ ಮೇಲಾಧಿಕಾರಿಗಳಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ,
ಪಂಚನಾಮೆ ಮಾಡಿ ತನಿಖೆ ತೀವ್ರ ಸ್ವರೂಪದಲ್ಲಿ ನಡೆಯಲಿದೆಯಾ ಅಥವಾ ರಾಜಕೀಯ ಒತ್ತಡಕ್ಕೆ ಮಣಿದು ಸಮಯ ವ್ಯರ್ಥ ವಾಗಲಿದೆಯಾ ಕಾದು ನೋಡ ಬೇಕಿದೆ.!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.