ತಪ್ಪೊಪ್ಪಿಕೊಂಡ ಅಪಹರಣಕಾರರು.!?
ತುಂಗಾವಾಣಿ
ಕೊಪ್ಪಳ ನ 1 ನಗರಸಭೆ ಸದಸ್ಯನ ಅಪಹರಣಕ್ಕೆ ಸಂಬಂಧಿಸಿದಂತೆ ಒಂದು ವಿಡಿಯೋ ತುಣುಕು ಹೊರಬಿದ್ದಿದ್ದು ವಿಡಿಯೋದಲ್ಲಿ ಅಪಹರಣದ ಆರೋಪಿಗಳಾದ ರಾಕೇಶ್ , ಬಸವರಾಜ ಮಲ್ಲಪ್ಪ, ಹಾಗು ಶರಣಬಸು ಅವರನ್ನು ವಿಚಾರಣೆ ನಡೆಸುತ್ತಿರುವ ದೃಶ್ಯಾವಳಿ ಇದ್ದು ಈ ವಿಡಿಯೋದಲ್ಲಿ ಆರೋಪಿತರು ನಗರಸಭೆ ಚುನಾವಣೆ ಪ್ರಯುಕ್ತ ಎದುರು ಪಕ್ಷದ ಸದಸ್ಯನನ್ನು ಎತ್ತಿಕೊಂಡು ಹೋಗಲು ಸೂಚನೆ ಮೇಲೆ ಸದಸ್ಯ ಮನೋಹರ ಸ್ವಾಮಿಯನ್ನು ಅಪಹರಿಸಿದ್ದಾಗಿ ಪೋಲಿಸರ ಮುಂದೆ ಒಪ್ಪಿಕೊಳ್ಳುತ್ತಿರುವ ದೃಶ್ಯ ಕಂಡುಬಂದಿದೆ.
ಯಮನೂರಗ ಚೌಡ್ಕಿ, ಕೆಲೋಜಿ ಸಂತೋಷ,ರಾಚಪ್ಪ ಸಿದ್ದಾಪುರ, ಪರಶುರಾಮ ಮಡ್ಡೆರ್, ಚೌಡ್ಕಿ ರಮೇಶ, ಸೂಚನೆ ಮೇರೆಗೆ ಕಾಂಗ್ರೆಸ್ ಪಕ್ಷದ ಸದಸ್ಯ ನನ್ನು ಅಪಹರಿಸಿ ಅಜ್ಞಾತ ಸ್ಥಳಕ್ಕೆ ಕರೆದೊಯ್ಯುತ್ತಿದ್ದೆವು ಎಂದು ಆರೋಪಿಗಳು ಹೇಳಿದ್ದಾರೆ.
ಅ 29 ರ ರಾತ್ರಿ ಹತ್ತು ಮೂವತ್ತರ ಸುಮಾರಿಗೆ ಗಂಗಾವತಿ ನಗರದ ಖಾಸಗಿ ಹೋಟೆಲ್ ನಲ್ಲಿ ಊಟ ಮಾಡುತ್ತಿದ್ದ ಕಾಂಗ್ರಸ್ ಪಕ್ಷದ ನಗರಸಭಾ ಸದಸ್ಯ ಮನೊಹರ ಸ್ವಾಮಿ ಮುದೆನೂರ್ ರನ್ನು ಅಪಹರಿಸಲಾಗಿತ್ತು ಗಂಗಾವತಿ ಹಾಗು ಹಳಿಯಾಳ ಪೊಲಿಸ್ ಠಾಣೆಲ್ಲಿ ಈ ಸಂಬಂಧ ಪ್ರತ್ಯೇಕ ದೂರುಗಳು ದಾಖಲಾಗಿದ್ದು ಮೂವರು ಆರೋಪಿಗಳು ಫೋಲಿಸ್ ತೆಕ್ಕೆಯಲ್ಲಿ ಇದ್ದು ಒಬ್ಬ ಆರೋಪಿ ತಲೆ ಮರಿಸಿಕೊಂಡಿದ್ದಾನೆ,
ಆದರೆ ಆರೋಪಿಗಳು ಹೇಳಿರುವ ಪ್ರಕಾರ ಯಮನೂರ ಚೌಡ್ಕಿ, ಕೆಲೋಜಿ ಸಂತೋಷ್, ರಾಚಪ್ಪ ಸಿದ್ದಾಪುರ, ರಮೇಶ್ ಚೌಡ್ಕಿ ಹಾಗು ಪರಶುರಾಮ್ ಮಡ್ಡೇರ್ ಇವರುಗಳ ಕುಮ್ಮಕ್ಕಿನಿಂದ ಕಾಂಗ್ರೆಸ್ ಸದಸ್ಯನನ್ನು ಅಪಹರಿಸಿರುವುದು ಎಂದು ಪೊಲೀಸರ ಮುಂದೆ ಆರೋಪಿತರು ಒಪ್ಪಿಕೊಂಡಿರುವುದು ಕಂಡು ಬರುತ್ತಿದೆ. ಏನೇ ಇರಲಿ ಸಮಗ್ರ ತನಿಖೆಯಾದಾಗ ಮಾತ್ರ ಸತ್ಯಾ ಸತ್ಯತೆ ಹೊರ ಬಿಳಿಲಿದೆ..!
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.
ನಾಡಿನ ಸಮಸ್ತ ಜನತೆಗೆ
ಕರ್ನಾಟಕ ರಾಜ್ಯೋತ್ಸವದ ಶುಭಾಷಯಗಳು