Breaking News

ಸ್ಥಳಿಯ ಸಂಸ್ಥೆ ಅಧಿಕಾರಿಗಳ ವರ್ಗಾವಣೆ. ಗಂಗಾವತಿಯ ಕಂದಾಯ ಅಧಿಕಾರಿ ಸೇರಿ ಆರು ಸಿಬ್ಬಂದಿ ಬೇರೆಡೆ ನಿಯೋಜನೆ.

ಸ್ಥಳಿಯ ಸಂಸ್ಥೆ ಅಧಿಕಾರಿಗಳ ವರ್ಗಾವಣೆ.
ಗಂಗಾವತಿಯ ಕಂದಾಯ ಅಧಿಕಾರಿ ಸೇರಿ ಆರು ಸಿಬ್ಬಂದಿ ಬೇರೆಡೆ ನಿಯೋಜನೆ.

ತುಂಗಾವಾಣಿ
ಕೊಪ್ಪಳ ನ 4 ಸ್ಥಳೀಯ ಸಂಸ್ಥೆಗಳಿಗೆ ಚುನಾಯಿತ ಪ್ರತಿನಿಧಿಗಳ ಆಡಳಿತ ಬಂದ ಬೆನ್ನಲ್ಲೇ ಸ್ಥಳೀಯ ಸಂಸ್ಥೆಗಳ ಅಧಿಕಾರಿ ಸಿಬ್ಬಂದಿಗಳ ವರ್ಗಾವಣೆ ಮಾಡಲಾಗಿದೆ.


ಕೊಪ್ಪಳ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿ ಜಿಲ್ಲೆಯಲ್ಲಿ ಹತ್ತಾರು ವರ್ಷಗಳಿಂದ ಬೀಡುಬಿಟ್ಟಿರುವ ಸ್ಥಳೀಯ ಅಧಿಕಾರಿಗಳಿಂದಾಗಿ ನಿಶ್ಚಿತ ಪ್ರಗತಿ ಸಾದಿಸದೇ ಹಾಗು ನಾಗರೀಕ ಸೌಲಭ್ಯ ಕಲ್ಪಿಸುವಲ್ಲಿ ಹಿನ್ನಡೆಯಾಗಿವ ಹಿನ್ನೆಲೆಯಲ್ಲಿ ಅನೇಕ ಅಧಿಕಾರಿಗಳನ್ನು ಜಿಲ್ಲೆಯ ಬೇರೆ ಬೇರೆ ನಗರ ಹಾಗು ಪುರಸಭೆಗಳಿಗೆ ನಿಯೋಜಿಸಲಾಗಿದೆ

ಸಿದ್ದರಾಮೇಶ್ವರ ಯೋಜನಾ ನಿರ್ದೇಶಕರು ನಗರಾಭಿವೃದ್ಧಿ ಕೋಶ ಕೊಪ್ಪಳ,

ಅದರಂತೆ ಗಂಗಾವತಿ ನಗರಸಭೆಯ ಕಂದಾಯ ಅಧಿಕಾರಿ ಜೆ ನಾಗರಾಜ, ಕಂದಾಯ ನಿರೀಕ್ಷಕ ರಾಘವೇಂದ್ರ, ಕರವಸೂಲಿಗಾರ ಆದೆಪ್ಪ, ರವಿಕುಮಾರ, ಭೀಮಣ್ಣ ಹಾಗು ದ್ವಿತೀಯ ದರ್ಜೆ ಸಹಾಯಕ ನಾಗೆಂದ್ರರನ್ನು ವಿವಿದ ನಗರ/ಪುರಸಭೆಗಳಿಗೆ ವರ್ಗಾಯಿಸಿಲಾಗಿದೆ,

ಆದರೆ ಕಳೆದ ಇಪ್ಪತ್ತು ವರ್ಷಗಳಿಂದ ಗಂಗಾವತಿ ನಗರಸಭೆ ಕಾರ್ಯನಿರ್ವಹಿಸುತ್ತಿರುವ ನಗರಸಭೆ ವ್ಯವಸ್ಥಾಪಕ ಷಣ್ಮುಖರನ್ನು ಬೇರೆಡೆ ನಿಯೋಜಿಸದೇ ಇರುವುದು ಸಾರ್ವಜನಿಕರಲ್ಲಿ ಅನೇಕ ಅನುಮಾನಗಳು ಮೂಡಿತ್ತಿವೆ.
ದ್ವಿತೀಯ ದರ್ಜೆ ಸಹಾಯಕನಾಗಿ ಗಂಗಾವತಿ ನಗರಸಭೆಗೆ ವರ್ಗವಾಗಿ ಬಂದ ಷಣ್ಮುಖ ಬಡ್ತಿಯಾಗಿ ಪ್ರಥಮ ದರ್ಜೆ ಸಹಾಯಕ ನಾಗಿ ಈಗ ಮತ್ತೊಮ್ಮೆ ಬಡ್ತಿಯಾಗಿ ನಗರಸಭೆ ವ್ಯವಸ್ಥಾಪಕನಾಗಿ ಒಂದೆ ಕಾರ್ಯಾಲಯದಲ್ಲಿ ಕೆಲಸ ನಿರ್ವಹಿಸುತ್ತಿರುವುದು ಹಾಗು ನಗರಸಭೆ ಕಾರ್ಯಾಲಯದ ಸಿಬ್ಬಂದಿಗಳ ಮೇಲೆ ಹಿಡಿತವಿಲ್ಲದೇ ನಿಶ್ಚಿತ ಪ್ರಗತಿ ಸಾದಿಸದೇ ಉದಾಸೀನ ತೋರುತ್ತಿರುವ ವ್ಯವಸ್ಥಾಪಕ ಷಣ್ಮುಖ ರನ್ನು ಬೇರೆಡೆ ವರ್ಗಾಯಿಸದೇ ಇರುವುದು ನಾಗರೀಕರ ಅನುಮಾನಕ್ಕೆ ಕಾರಣವಾಗಿದೆ. ಕಳೆದ ಇಪ್ಪತ್ತು ವರ್ಷಗಳಿಂದ ಒಂದೆ ಕಾರ್ಯಾಲಯದಲ್ಲಿ ಬೀಡುಬಿಟ್ಟಿರು ವ್ಯವಸ್ಥಾಪಕ ಷಣ್ಮುಖನ ವರ್ಗಾವಣೆ ಯಾವಾಗ ಅಂತ ನಗರದ ನಾಗರೀಕರ ಪ್ರಶ್ನೆಯಾಗಿದೆ.

ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.

Check Also

ಕಾರಟಗಿ ತಹಶಿಲ್ದಾರ ಶ್ರೀಮತಿ ಕವಿತಾ ವರ್ಗಾವಣೆ ಹಿಂದೆ ಯಾರ ಕೈವಾಡ.?

ಕಾರಟಗಿ ತಹಶಿಲ್ದಾರ ಶ್ರೀಮತಿ ಕವಿತಾ ವರ್ಗಾವಣೆ ಹಿಂದೆ ಯಾರ ಕೈವಾಡ.? ತುಂಗಾವಾಣಿ ಕೊಪ್ಪಳ ಸೆ 27 ಕಾರಟಗಿ ಹಾಗು ಗಂಗಾವತಿ …