ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹ ಇಮ್ಮಡಿ.!
ತುಂಗಾವಾಣಿ.
ಗಂಗಾವತಿ ನ 2 ಗಂಗಾವತಿ ನಗರಸಭೆ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಕ್ಷಣಗಣನೆ ಆರಂಭವಾಗಿದ್ದು ಕಳೆದ ಹಲವು ದಿನಗಳಿಂದ ನಾಪತ್ತೆಯಾಗಿ ರಾಜಕೀಯ ಹೈಡ್ರಾಮಕ್ಕೆ ಕಾರಣವಾಗಿದ್ದ ಬಿಜೆಪಿಯಿಂದ ಬಂಡಾಯ ವೆದ್ದಿರುವ ವಾರ್ಡ ನಂ 26 ಸದಸ್ಯೆ ಸುಧಾ ಸೋಮನಾಥ ಇಂದು ಕಾಂಗ್ರೆಸ್ ಬಣದೊಂದಿಗೆ ಗುರುತಿಸಿಕೊಂಡಿದ್ದು ಕಾಂಗ್ರೆಸ್ ಕಾರ್ಯಕರ್ತ ಉತ್ಸಾಹ ಇಮ್ಮಡಿಗೊಳಿಸಿದೆ.
35 ಸದಸ್ಯ ಬಣದ ನಗರಸಭೆಗೆ ಕೊಪ್ಪಳ ಸಂಸದರು ಹಾಗು ಗಂಗಾವತಿ ಶಾಸಕರ ಒಂದೊಂದು ಮತ ಸೇರಿ 37 ಮತಗಳು ಬರಲಿವೆ.
ಬಿಜೆಪಿಯ ಚಿನ್ಹೆಯಿಂದ ಗೆದ್ದಿದ್ದ 14 ಸದಸ್ಯರಲ್ಲಿ ಒಬ್ಬರು ಕಾಂಗ್ರೆಸ್ ಬಣದೊಂದಿಗೆ ಗುರುತಿಸಿಕೊಂಡಿದ್ದು ಬಿಜೆಪಿಯಲ್ಲಿ 13 ಜನ ಸದಸ್ಯರು ಉಳಿದಿದ್ದು ಜೆಡಿಎಸ್ ನ ಒಬ್ಬ ಸದಸ್ಯ, ಹಾಗು ಶಾಸಕ ಸಂಸದರು ಸೇರಿ ಒಟ್ಟು 16 ಮತಗಳು ಬಿಜೆಪಿ ಬಣದಲ್ಲಿ ಮೇಲ್ನೋಟಕ್ಕೆ ಕಂಡು ಬರುತ್ತಿವೆ ಪಕ್ಷೇತರರಾಗಿ ಗೆದ್ದಿರುವ ಇಬ್ಬರು ಸದಸ್ಯರ ನಡೆ ನಿಗೂಡವಾಗಿದೆ
ಚುನಾವಣೆ ಗೆಲ್ಲಲು ಕನಿಷ್ಠ 19 ಮತಗಳ ಅವಶ್ಯಕತೆ ಇದ್ದು ಕಾಂಗ್ರೆಸ್ ಪಕ್ಷದ ಚಿನ್ಹೆ ಯಿಂದ ಗೆದ್ದಿರುವ 17 ಜೆಡಿಎಸ್ ಪಕ್ಷದ ಒಬ್ಬರು ಹಾಗು ಬಿಜೆಪಿಯಿಂದ ಬಂಡಾಯವೆದ್ದಿರುವ ಒಬ್ಬ ಸದಸ್ಯೆ ಸೇರಿ ಕಾಂಗ್ರೆಸ್ ಬಣಕ್ಕೆ ನಿಶ್ಚಳ ಬಹುಮತ ಮೇಲ್ನೋಟಕ್ಕೆ ಕಂಡು ಬರುತ್ತಿದ್ದು ಕಳೆದ ಹದಿನೈದು ವರ್ಷಗಳಿಂದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕೈಯಲ್ಲಿರುವ ಗಂಗಾವತಿ ನಗರಸಭೆಯು ಮತ್ತೆ ಕಾಂಗ್ರೆಸ್ ತೆಕ್ಕೆಗೆ ಬೀಳುವ ಸಂಭಾವನೆ ಹೆಚ್ಚಾಗಿ ಕಾಂಗ್ರೆಸ್ ಪಾಳಯದಲ್ಲಿ ಉತ್ಸಾಹ ಇಮ್ಮಡಿಯಾಗಿದೆ.
ಚುನಾವಣೆಯ ಅಂತಿಮ ಕ್ಷಣದಲ್ಲಿ ಏನಾಗಲಿದೆಯೋ ? ಯಾವ ಸದಸ್ಯರು ಯಾರಿಗೆ ಮತ ಹಾಕಲಿದ್ದಾರೋ ? ಗ್ರೇಡ್ ಒನ್ ಹಾಗು ಕೇಂದ್ರ ಸರಕಾರದ ಅಮೃತ್ ಸಿಟಿ ಯೋಜನೆ ಆಯ್ಕೆಯಾಗಿರುವ ಗಂಗಾವತಿ ನಗರಸಭೆಗೆ ಅಧ್ಯಕ್ಷರು ಯಾರಾಗಲಿದ್ದಾರೆ ? ಇನ್ನರಡು ಗಂಟೆಯಲ್ಲಿ ನಿರ್ಧಾರವಾಗಲಿದೆ.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.