ಗ್ರಾಮೀಣಕ್ಕೆ ಸೀಮಿತವಾದ ಪರಣ್ಣ
ನಗರವೇನಿದ್ದರೂ ಅನ್ಸಾರಿ ಕೈಯಲ್ಲೇ.
ತುಂಗಾವಾಣಿ
ಗಂಗಾವತಿ ನ 2 ಕಳೆದ ವರ್ಷಗಳಿಂದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕೈಯಲ್ಲಿರುವ ಗಂಗಾವತಿ ನಗರಸಭೆ ಆಡಳಿತವನ್ನು ತಮ್ಮ ತೆಕ್ಕೆಗೆ ಪಡೆಯಲು ಹವಣಿಸುತ್ತಿರುವ ಹಾಲಿ ಶಾಸಕರಿಗೆ ಈಗ ಮತ್ತೊಮ್ಮೆ ನಿರಾಸೆಯಾಗಿದ್ದು ಶಾಸಕ ಪರಣ್ಣ ಮುನವಳ್ಳಿ ಯವರು ಕೇವಲ ಗ್ರಾಮೀಣ ಭಾಗಕ್ಕೆ ಸೀಮಿತ ಆದರೆ ನಗರ ಪ್ರದೇಶ ವೇನಿದ್ದರೂ ಅನ್ಸಾರಿ ಕೈಎಲ್ಲೆ ಅಂತ ಸಾಬೀತಾಗಿದೆ.
ನಗರಸಭೆಯ ಕಳೆದ ಸಾರಿಯ ಎರಡನೇ ಅವಧಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ವೇಳೆ ಕೂಡ ಅಂದಿನ ಕಾಂಗ್ರೆಸ್ ಸಚಿವ ಶಿವರಾಜ ತಂಗಡಗಿ, ಮಾಜಿ ಶಾಸಕ ಹೆಚ್ ಆರ್ ಶ್ರೀನಾಥ ರವರ ಜೊತೆ ಅಂದಿನ 5 ಜನ ಜೆಡಿಎಸ್ ಸದಸ್ಯರನ್ನು ಬಂಡಾಯ ವೆಬ್ಬಿಸಿ ಮಾಡಿದ್ದ ತಂತ್ರವೂ ವಿಫಲವಾಗಿತ್ತು ಅಂದೂ ಕೂಡ ಕೇವಲ ಒಂದು ಮತದ ಅಂತರದಲ್ಲಿ ಇಕ್ಬಾಲ್ ಅನ್ಸಾರಿ ಬಣ ಗೆದ್ದು ನಗರಸಭೆಯ ಅಧಿಕಾರ ತಮ್ಮ ಬಳಿ ಉಳಿಸಿಕೊಂಡಿತ್ತು ಈಗಲೂ ಸಹ ಶಾಸಕ ಸಂಸದರ ಮತ ಹಾಕಿದ ಮೇಲೆ ಕೇವಲ ಒಂದು ಮತದ ಅಂತರದಲ್ಲೇ ಸೋತು ಮತ್ತೆ ನಗರಸಭೆ ಅಧಿಕಾರ ಪಡೆಯುವಲ್ಲಿ ವಿಫಲವಾಗಿದ್ದು ಮುಂದಿನ ಎರಡುವರೆ ವರ್ಷಗಳ ಕಾಲ ನಗರಸಭೆ ಆಡಳಿತ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕೈಯಲ್ಲೆ ಉಳಿದು ಎಂದಿಗೂ ನಗರಸಭೆ ಆಡಳಿದ ನಂದೆ ಎಂದೂ ಬೀಗುವಂತೆ ಮಾಡಿದೆ.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.