ಅಡ್ಡ ಮತದಾನ ಮಾಡಿದ ಬಿಜೆಪಿ ಸದಸ್ಯೆ ವಿರುದ್ದ ಆಕ್ರೋಶ.!
ತುಂಗಾವಾಣಿ.
ಗಂಗಾವತಿ ನ-3 ನಿನ್ನೆ ನಡೆದ ಗಂಗಾವತಿ ನಗರಸಭೆ ಅಧ್ಯಕ್ಷೀಯ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಬಿಜೆಪಿ ಅಭ್ಯರ್ಥಿ ಸೋಲಲು ಕಾರಣ ವಾಗಿರುವ ಬಿಜೆಪಿ ಸದಸ್ಯೆ ವಿರುದ್ದ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜಯಶ್ರೀ ಸಿದ್ದಾಪುರ ರವರ ಮಗ ಹಾಗು ನಗರಸಭೆ ಸ್ಥಾಯಿ ಸಮಿತಿ ಮಾಜಿ ಚೇರ್ಮನ್ ಆಗಿರುವ ರಾಚಪ್ಪ ಸಿದ್ದಾಪುರ ಆಕ್ರೋಷ ವ್ಯಕ್ತಪಡಿಸಿದ್ದಾರೆ,
ತಮ್ಮ ಫೇಸ್ಬುಕ್ ಪೋಷ್ಟನಲ್ಲಿ ಬಿಜೆಪಿಯ ಸದಸ್ಯೆ ಬೆನ್ನಿಗೆ ಚೂರಿ ಹಾಕಿದ್ದರಿಂದ ಇಂದು ಬಹುಮತ ಇದ್ದರೂ ಗಂಗಾವತಿ ನಗರಸಭೆ ಯಲ್ಲಿ ಸೋಲು. ಮುಂದಿನ ದಿನಗಳಲ್ಲಿ ಬಿಜೆಪಿ ಆಡಳಿತಕ್ಕೆ ಬರಲಿದೆ ಎಂದು ಪೋಷ್ಟ್ ಮಾಡಿದ್ದು ಪೋಷ್ಟ್ ಗೆ ಸಂಬಂದಿಸಿದಂತೆ ಪರ ಮತ್ತು ವಿರೋಧ ಚರ್ಚೆಗಳು ನಡೆಯುತ್ತಿವೆ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಚಾಣಕ್ಷತನವನ್ನು ಹಲವರು ಕೊಂಡಾಡುತ್ತಿದ್ದು ಪಕ್ಷಕ್ಕೆ ದ್ರೋಹ ಬಗೆದ ಸದಸ್ಯ ವಿರುದ್ದ ಸೂಕ್ತ ಕ್ರಮಕೈಗೊಳ್ಳಬೇಕೆಂದೂ ಕೂಡ ಬಿಜೆಪಿ ಬೆಂಬಲಿಗರು ಒತ್ತಾಯ ಮಾಡುತ್ತಿದ್ದಾರೆ.
https://m.facebook.com/story.php?story_fbid=3399434586819740&id=100002596975624&sfnsn=wiwspmo
ನಿನ್ನೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಯಶ್ರೀ ಸಿದ್ದಾಪುರ ಕಾಂಗ್ರೇಸಿನ ಅಭ್ಯರ್ಥಿ ಮಾಲಾಶ್ರೀ ಸಂದೀಪ್ ವಿರುದ್ದ ಕೇವಲ ಒಂದು ಮತದ ಅಂತರದಲ್ಲಿ ಸೋಲುಂಡಿದ್ದರು, ಮುಂದಿನ ದಿನಗಳಲ್ಲಿ ಇನ್ನೂ ಏನೇನು ಹೇಳಿಕೆಗಳು ಬರುತ್ತವೆ ಯಾರು ಯಾರು ಆತ್ಮಾವ ಲೋಕನ ಮಾಡಿ ಕೊಳ್ಳುತ್ತಾರೆ ಕಾದು ನೋಡ ಬೇಕಿದೆ..!!
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.