ಒಂದು ಭತ್ತದ ಹೊರೆಯ ಜೊತೆ ಒಂದು ಕಮಲ ವಿಡಿದ ಕೈ ಗೆ ನಗರಸಭೆ ಅಧಿಕಾರ ಭಾಗ್ಯ.!
ತುಂಗಾವಾಣಿ
ಗಂಗಾವತಿ ನ2 ಭಾರಿ ಕುತೂಹಲ ಹಾಗು ಹೈಡ್ರಾಮಾಗಳಿಗೆ ವೇದಿಕೆಯಾಗಿದ್ದ ಗಂಗಾವತಿ ನಗರಸಭೆ ಅಧ್ಯಕ್ಷೀಯ ಗಾದಿಯನ್ನು ಪಡೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದ್ದು ನೂತನ ಅಧ್ಯಕ್ಷೆಯಾಗಿ ಮಾಲಾಶ್ರೀ ಸಂದೀಪ್ ಹಾಗೂ ಉಪಾಧ್ಯಕ್ಷೆಯಾಗಿ ಸುಧಾ ಸೋಮನಾಥ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಪಕ್ಷವು ಗಂಗಾವತಿ ನಗರಸಭೆ ಅಧಿಕಾರ ಚುಕ್ಕಾಣಿ ಹಿಡಿದಿದೆ.
ಜೆಡಿಎಸ್ ಪಕ್ಷದಿಂದ ಗೆದ್ದ ಸದಸ್ಯ ಜಬ್ಬಾರ್ ಬಿಜ್ಜುಗತ್ತಿ ಹಾಗು ಬಿಜೆಪಿಯಿಂದ ಗೆದ್ದ ಸದಸ್ಯೆ ಸುಧಾ ಸೋಮನಾಥ ರವರ ಮತದ ಜೊತೆ ತಮ್ಮ 17 ಸದಸ್ಯರು ಸೇರಿ 19 ಸದಸ್ಯರ ಬಲದೊಂದಿಗೆ ಕಾಂಗ್ರೇಸ್ ಗಂಗಾವತಿ ನಗರಸಭೆ ಅಧಿಕಾರ ಚುಕ್ಕಾಣಿ ಹಿಡಿದಿದೆ.
ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದ ಹಾಗು ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದೂ ಕೂಡ ಗಂಗಾವತಿ ನಗರಸಭೆ ಅಧಿಕಾರ ಪಡೆಯುವಲ್ಲಿ ಬಿಜೆಪಿ ಸೋತಿದೆ.
35 ಸದಸ್ಯ ಬಲದ ನಗರಸಭೆಗೆ ಸಂಸದ ಹಾಗು ಶಾಸಕರು ಸೇರಿ 37 ಮತಗಳಿದ್ದು 17 ಕಾಂಗ್ರೆಸ್ 14 ಬಿಜೆಪಿ 2 ಜೆಡಿಎಸ್ ಹಾಗು 2 ಪಕ್ಷೇತರ ಸದಸ್ಯರನ್ನು ಹೊಂದಿರುವ ಸ್ಥಳೀಯ ಆಡಳಿತವನ್ನು ಜೆಡಿಎಸ್ ಪಕ್ಷದಿಂದ ತಮ್ಮ ಸದಸ್ಯರು ಬಿಜೆಪಿಗೆ ಮತ ನೀಡುವಂತೆ ವಿಪ್ ಜಾರಿಯಾಗಿದ್ದರೂ ಕಾಂಗ್ರೆಸ್ ಪಕ್ಷದ ಚಾಣಾಕ್ಷ ನಡೆಯಿಂದ ಒಂದು ಜೆಡಿಎಸ್ ಹಾಗು ಒಬ್ಬ ಬಿಜೆಪಿಯ ಮಹಿಳಾ ಸದಸ್ಯೆಯನ್ನು ತಮ್ಮತ್ತ ಸೆಳೆದುಕೊಳ್ಳುವಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬಣ ಯಶಸ್ವಿಯಾಗಿದ್ದು ಕಳೆದ ಹದಿನೈದು ವರ್ಷಗಳಿಂದ ಅಧಿಕಾರದಲ್ಲಿರುವ ಇಕ್ಬಾಲ್ ಅನ್ಸಾರಿ ಬಣಕ್ಕೆ ಮತ್ತೆ ಅಧಿಕಾರ ಸಿಕ್ಕಿದೆ.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.