Breaking News

ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಎರಡೂ ಪಕ್ಷಗಳಿಂದ ನಾಮಪತ್ರ ಸಲ್ಲಿಕೆ.

ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಎರಡೂ ಪಕ್ಷಗಳಿಂದ ನಾಮಪತ್ರ ಸಲ್ಲಿಕೆ.

ತುಂಗಾವಾಣಿ
ಗಂಗಾವತಿ ನ 2 ಭಾರಿ ಕುತೂಹಲ ಕೆರಳಿಸಿರುವ ಗಂಗಾವತಿ ನಗರಸಭೆ ಅಧ್ಯಕ್ಷೀಯ ಚುನಾವಣೆಗೆ ಎರಡೂ ಪಕ್ಷಗಳು ತಮ್ಮ ಉಮೇದುವಾರಿಕೆ ಸಲ್ಲಿಸಿವೆ.
ಇಂದು ಬೆಳಿಗ್ಗೆ 11 ಗಂಟೆಯಿಂದ 12 ಗಂಟೆಯವರೆಗೆ ಇರುವ ನಾಮಪತ್ರ ಸಲ್ಲಿಕೆಯ ಸಮಯದಲ್ಲಿ ಬಿಜೆಪಿಯಿಂದ ಜಯಶ್ರೀ ವಿಶ್ವನಾಥ ಸಿದ್ದಾಪುರ ನಾಮಪತ್ರ ಸಲ್ಲಿಸಿದ್ದರೆ ಉಪಾಧ್ಯಕ್ಷ ಸ್ಥಾನಕ್ಕೆ ಹೀರಾಬಾಯಿ ಅವರು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಮಾಲಾಶ್ರಿ ಸಂದೀಪ್ ಅವರು ನಾಮಪತ್ರ ಸಲ್ಲಿಸಿದ್ದರೆ ಬಿಜೆಪಿಯಿಂದ ಬಂಡಾಯ ಎದ್ದಿರುವ ಸುಧಾ ಸೋಮನಾಥ ಉಪಾಧ್ಯಕ್ಷ ಸ್ಥಾನಕ್ಕೆ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.


ನಗರಸಭೆ ಅಧ್ಯಕ್ಷೀಯ ಚುನಾವಣೆ ಸಂಬಂಧ ಗಂಗಾವತಿ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಕೊಪ್ಪಳ ಜಿಲ್ಲಾಧಿಕಾರಿಗಳು ನಗರದಾದ್ಯಂತ ನಿಷೇದಾಜ್ಙೆ ಜಾರಿ ಮಾಡಿದ್ದು ಸುಮಾರು 400 ಕ್ಕಿಂತ ಹೆಚ್ಚಿನ ಪೋಲಿಸ್ ಸಿಬ್ಬಂದಿಯನ್ನು ಕಾನೂನು ಸುವ್ಯವಸ್ಥೆಗಾಗಿ ಕೊಪ್ಪಳ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ನಿಯೋಜಿಸಿದ್ದಾರೆ.

ಕಾಂಗ್ರೇಸ್ ಅಭ್ಯರ್ಥಿಗಳ ಪರವಾಗಿ ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸಿನ ನಗರಸಭೆ ಸದಸ್ಯರುಗಳಾದ ಶ್ಯಾಮಿದ್ ಮನಿಯಾರ್, ಗದ್ವಾಲ್ ಖಾಸಿಂಸಾಬ, ಮುಸ್ತಾಖ್, ದುಷ್ಕರ್ಮಿಗಳಿಂದ ಅಪಹರಣಕ್ಕೆ ಒಳಗಾಗಿದ್ದ ಸದಸ್ಯ ಮನೋಹರಸ್ವಾಮಿ ಹಿರೇಮಠ ಪೋಲಿಸ್ ಸರ್ಪಾಗಾವಲಿನಲ್ಲಿ ಸಭಾಂಗಣಕ್ಕೆ ಆಗಮಿಸಿದ್ದರು.


ಇತ್ತ ಬಿಜೆಪಿ ಅಭ್ಯರ್ಥಿಗಳ ಪರವಾಗಿ ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್ ಪಕ್ಷದ ನಗರಸಭಾ ಸದಸ್ಯ ಎಂಡಿ ಉಸ್ಮಾನ್, ರಮೇಶ್ ಚೌಡ್ಕಿ, ರಾಘವೇಂದ್ರ ಶೆಟ್ಟಿ, ಇತರರು ಆಗಮಿಸಿದ್ದರು.
ಮಧ್ಯಾನ್ಹ ಎರಡು ಗಂಟೆಗೆ ಚುನಾವಣಾ ಸಭೆ ಪ್ರಾರಂಭವಾಗಲಿದ್ದು ಎರಡು ಮೂವತ್ತಕ್ಕೆ ಮುಗಿದು ಫಲಿತಾಂಶ ಹೊರಬೀಳಲಿದೆ.

ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.

Check Also

ಗಂಗಾವತಿ ನಗರ ಪಿ,ಐ, ವೆಂಕಟಸ್ವಾಮಿ ಅನಗತ್ಯ ರಾಜಕೀಯ ಮಾಡ್ತಿದ್ದಾರೆ. ಶಾಸಕ ರಾಘವೇಂದ್ರ ಹಿಟ್ನಾಳ ಆರೋಪ.!

ಗಂಗಾವತಿ ನಗರ ಪಿ,ಐ, ವೆಂಕಟಸ್ವಾಮಿ ಅನಗತ್ಯ ರಾಜಕೀಯ ಮಾಡ್ತಿದ್ದಾರೆ.! ಶಾಸಕ ರಾಘವೇಂದ್ರ ಹಿಟ್ನಾಳ ಆರೋಪ.! ತುಂಗಾವಾಣಿ. ಕೊಪ್ಪಳ: ನಗರದ ಖಾಸಗಿ …