ಗಂಗಾವತಿ ನಗರಕ್ಕೆ ಬೇಕಿದೆ ಸಿ ಸಿ ಕ್ಯಾಮರಾ ಭದ್ರತೆ.!
ಶಾಸಕರು ಇತ್ತ ಗಮನ ಹರಿಸುವರೇ.!?
ತುಂಗಾವಾಣಿ
ಗಂಗಾವತಿ ಸೆ 27 ಗಂಗಾವತಿ ನಗರವೂ ಕೊಪ್ಪಳ ಜಿಲ್ಲೆಯಲ್ಲೆ ಅತೀ ಹೆಚ್ಚಿನ ಜನಸಂದಣಿ ಇರುವ ನಗರವಾಗಿದೆ ಪ್ರತಿದಿನ ಸುಮಾರು ಒಂದು ಲಕ್ಷ ಜನ ನಗರಕ್ಕೆ ವಿವಿದ ಕೆಲಸ ಕಾರ್ಯಗಳಿಗೆ ಬಂದು ಹೋಗುತ್ತಾರೆ ಅದರಿಂದಾಗಿ ನಗರದ ಎಲ್ಲ ರಸ್ತೆಗಳು ಯಾವಾಗಲೂ ಜನನಿಬಿಡ ವಾಗಿ ರುತ್ತವೆ ಜೊತೆಗೆ ಹಬ್ಬಹರಿದಿನಗಳಲ್ಲಂತೂ ಎಲ್ಲಾ ಪ್ರಮುಖ ರಸ್ತೆಗಳೂ ಟ್ರಾಫಿಕ್ ಜಾಮ್ ಇರುತ್ತವೆ ಇಂತಹದರಲ್ಲಿ ಮುಖ್ಯರಸ್ತೆ, ವೃತ್ತಗಳಲ್ಲಿ ಹಾಗು ವಾರ್ಡುಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ತುಂಬಾ ಕಷ್ಟದ ಕೆಲಸವಾಗಿದೆ.
ಮಾಜಿ ಶಾಸಕ ಇಕ್ಬಾಲ್ ಅನ್ಸಾರಿಯವರು ತಮ್ಮ ಅವಧಿಯಲ್ಲಿ ನಗರದ ಎಲ್ಲ ವೃತ್ತಗಳು ಹಾಗು ಪ್ರಮುಖ ರಸ್ತೆಗಳಿಗೆ ಉನ್ನತ ಮಾದರಿಯ ಸಿಸಿ ಕ್ಯಾಮರಾಗಳ ಅಳವಡಿಕೆಗಾಗಿ ಸರಕಾರದಿಂದ ಮೂರು ಕೋಟಿ ಅನುದಾನವನ್ನು ಮೀಸಲಿಟ್ಟಿದ್ದರು ಆದರೆ ತಾಂತ್ರಿಕ ಕಾರಣದಿಂದಾಗಿ ಆ ಯೋಜನೆ ನೆನೆಗುದಿಗೆ ಬಿದ್ದಿದೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದ ಕರ್ನಾಟಕ ಬ್ಯಾಂಕನ್ನು ಕನ್ನ ಹಾಕಿ ಕೊಟ್ಯಾಂತರ ರೂಪಾಯಿಗಳ ಧನ ಕನಕ ದೋಚಿದ್ದು ಜಿಲ್ಲೆಯ ಜನತೆಗೆ ಕಳ್ಳಕಾಕರ ಭಯ ಕಾಡುತ್ತಿದೆ. ಗಾಂಧಿ ವೃತ್ತದಲ್ಲಿ ಮಾತ್ರ ಪೋಲಿಸ್ ಇಲಾಖೆಯಿಂದ ಕ್ಯಾಮರಾ ಅಳವಡಿಸಲಾಗಿದೆ
ಕಳೆದ ಮೂರು ವರ್ಷಗಳಿಂದ ತಾಂತ್ರಿಕ ಕಾರಣಗಳಿಂದಾಗಿ ನೆನೆಗುದಿಗೆ ಬಿದ್ದಿರುವ ಸಂಪೂರ್ಣ ನಗರ ಕವರ್ ಮಾಡುವ ಸಿಸಿ ಕ್ಯಾಮರಾ ಅಳವಡಿಕೆ ಯೋಜನೆಯ ಬಗ್ಗೆ ಹಾಲಿ ಶಾಸಕ ಪರಣ್ಣ ಮುನವಳ್ಳಿ ಗಮನ ಹರಿಸಿ ಶೀಘ್ರದಲ್ಲಿ ಎಲ್ಲ ವೃತ್ತ ಹಾಗು ರಸ್ತೆಗಳಿಗೆ ವಾರ್ಡುಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಕ್ರಮವಹಿಸಲು ಗಂಗಾವತಿ ನಗರಸಭೆ ಹಾಗು ನಗರಠಾಣೆ ಅಧಿಕಾರಿಗಳಿಗೆ ಸೂಚಿಸಿದ್ದೇ ಆದಲ್ಲಿ ನಗರದಲ್ಲಿ ಕಳ್ಳಕಾಕರ ಭಯದಿಂದಿರುವ ಜನತೆಗೆ ಭದ್ರತೆ ನೀಡಿದಂತಾಗುತ್ತದೆ ಎನ್ನುವುದು ತುಂಗಾವಾಣಿಯ ಆಶಯ.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.