ಕನಕಗಿರಿ MLA ಗೆ ಸೆಡ್ ಹೊಡೆದ RI..!?
ತುಂಗಾವಾಣಿ.
ಗಂಗಾವತಿ: ಪೆ-8 ತಾಲ್ಲೂಕಿನ ಮರಳಿ ಹೋಬಳಿಯ ಸ್ಟೋರಿ ಇದು,
ಕನಕಗಿರಿ ಶಾಸಕ ದಡೆಸೂಗುರು ಬಸವರಾಜಗೆ ಈ ಒಬ್ಬ ಅಧಿಕಾರಿ ಮಾತು ಕೇಳುತ್ತಿಲ್ಲ ಎಂದರೆ ಎಲ್ಲಿಗೆ ಬಂತು ಆಡಳಿತ ಅಂತ.!?
ಹೌದು ಈ ಮಾತು ನಾವು ಹೇಳುತ್ತಿಲ್ಲ ಮರಳಿ ಹೋಬಳಿಯ ಜನರ ಮಾತು.!
ಮರಳಿ ಹೋಬಳಿಯಲ್ಲಿ ಕಂದಾಯ ನಿರೀಕ್ಷಕರಾಗಿ ಕಾರ್ಯನಿರ್ವಹಿಸುವ ಹನುಮಂತಪ್ಪ, ಮರಳಿ ಹೋಬಳಿಯ ಸಾರ್ವಜನಿಕರಿಗೆ ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ, ಸಕಾಲದಲ್ಲಿ ಸಾರ್ವಜನಿಕ ಕೆಲಸವನ್ನು ಸರಿಯಾಗಿ ನಿರ್ವಹಿಸುತ್ತಲ್ಲ ಎಂದು ಸಾರ್ವಜನಿಕರಿಂದ ಹಲವಾರು ದೂರುಗಳು ಶಾಸಕ ದಡೆಸೂಗುರುಗೆ ಬಂದಿವೆ,
ಅದರಂತೆ ಶಾಸಕ ದಡೆಸೂಗುರು ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿ, ತಕ್ಷಣ ಇವರನ್ನು ಬೇರೆಡೆ ವರ್ಗಾವಣೆ ಮಾಡಿ, ಮರಳಿ ಹೋಬಳಿಗೆ ಇನ್ನೋಬ್ಬ ಕಂದಾಯ ನಿರೀಕ್ಷಕ ಮಹೇಶ್ ದಲಾಲ್ ಇವರನ್ನು ನಿಯೋಜನೆ ಮಾಡಿ ಎಂದು ಸ್ವತಃ ಶಾಸಕ ದಡೆಸೂಗುರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ದೂರು ಸಲ್ಲಿಸಿದ್ದರು,
ಶಾಸಕ ದಡೆಸೂಗುರು ಮನವಿಗೆ ಸ್ಪಂದಿಸಿದ ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ ಕಿಶೋರ್ ಸುರಳ್ಕರ್, ಮರಳಿ ಹೋಬಳಿಯ ಕಂದಾಯ ನಿರೀಕ್ಷಕ ಹನುಮಂತಪ್ಪ ರನ್ನು ಗಂಗಾವತಿ ತಹಶೀಲ್ದಾರ್ ಕಛೇರಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸುತ್ತಾರೆ.!
ಜಿಲ್ಲಾಧಿಕಾರಿಗಳ ಆದೇಶ ಪ್ರಶ್ನಿಸಿ ಕಂದಾಯ ನಿರೀಕ್ಷಕ ಹನುಮಂತಪ್ಪ, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಗೆ ದೂರು ಸಲ್ಲಿಸಿ, ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗಿದ್ದಾರೆ,
ಇದರಿಂದ ಕನಕಗಿರಿ ಶಾಸಕ ದಡೆಸೂಗುರು ಮತ್ತು ಜಿಲ್ಲಾಧಿಕಾರಿಗಳಿಗೆ ಇರಿಸು ಮುರಿಸು ಆಗಿರುವುದಂತೂ ಸತ್ಯ..!?
ಶಾಸಕರಿಗೆ ಮತ್ತು DC ಗೆ ಸೇಡ್ಡು ಹೊಡೆದು ಮರಳಿ ಹೋಬಳಿಯಲ್ಲೆ ಕಾರ್ಯ ನಿರ್ವಹಿಸುತ್ತಿರುವಿದು ನೋಡಿದ ಸ್ಥಳಿಯರು ಹೌದ್ದ ಹುಲಿಯ ಎಂದು ಮಾತನಾಡಿಕೊಳ್ಳುತ್ತಿದ್ದಾರೆ..!?
ಮರಳು ದಂಧೆಯ ಹಾರ್ಟ್ ಸ್ಪಾರ್ಟ್ ಮರಳಿ ಹೋಬಳಿ.!
ಮರಳಿ ಹೋಬಳಿಯಲ್ಲಿ ಯಾವುದೇ ರಾಜಧನ ಪಾವತಿಸದೆ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ಸಾಗಾಣಿಕೆ ನಿರಂತರ ನಡೆಯುತ್ತಿದೆ, ಸಾಕಷ್ಟು ಪ್ರಮಾಣದ ಮರಳು ಡಣಾಪುರ ಹೆಬ್ಬಾಳ ಮರಳಿ ಯಲ್ಲಿ ಸ್ಟಾಕ್ ಇರುವುದು ಗೊತ್ತಿರದ ಸಂಗತಿ ಏನಲ್ಲ, ಹೋಬಳಿಯ ಇಂಚಿಂಚೂ ಮಾಹಿತಿ ಈ RI ಹನುಮಂತಪ್ಪಗೆ ಗೊತ್ತು.!?
ದಂಧೆಕೊರರಿಗೆ RI ಹನುಮಂತಪ್ಪ ಕಡಿವಾಣ ಹಾಕಲು ಹಿಂದೇಟು ಹಾಕಿ ದಂಧೆಕೊರರಿಗೆ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಪದೆ ಪದೆ ಕೇಳಿಬರುತ್ತಾನೆ ಇವೆ.!?
ಕಳೆದ ನವಂಬರ್-22 ರಂದು,
ತುಂಗಾವಾಣಿ ವಿಸ್ತೃತವಾಗಿ ಮರಳು ದಂಧೆಯ ಬಗ್ಗೆ ಪ್ರಕಟಿಸಿತ್ತು, ರಾತೋರಾತ್ರಿ ಮರಳು ಅಡ್ಡೆಯ ಮೇಲೆ ದಾಳಿ ನೂರಾರು ಮೆಟ್ರಿಕ್ ಟನ್ ಮರಳು ವಶಪಡಿಸಿಕೊಂಡು ದಂಧೆಕೊರರ ಮೇಲೆ ಪ್ರಕರಣ ದಾಖಲಾಗಿತ್ತು.!?
ಇಷ್ಟೇಲ್ಲ ಬೆಳವಣಿಗೆ ನಡೆಯುತ್ತಿದೆ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಗಂಗಾವತಿ ತಹಶೀಲ್ದಾರ್ ಕಛೇರಿಗೆ ವರ್ಗಾವಣೆ ಮಾಡಿದರು KSAT ಕೋರ್ಟ್ ಗೆ ಹೋಗಿ ತಡೆಯಾಜ್ಞೆ ತಂದಿರುವುದು ಅನುಮಾನಕ್ಕೆ ಎಡೆ ಮಾಡಿದೆ.!? ಹಾಗೇಯೆ ಮುಂದಿನ ದಿನಮಾನದಲ್ಲಿ ಈ ವಿಷಯ ಯಾವ ಹಂತಕ್ಕೆ ತಲುಪುತ್ತೆ ಕಾದು ನೋಡಬೇಕಿದೆ..!?
ತುಂಗಾವಾಣಿ ಇದು ಸತ್ಯ ಸಮರ.