ಅಧಿಕಾರ ಇಲ್ಲದ ಶಿಕ್ಷೆ ನಾ..!?
ನೂತನ ತಹಶೀಲ್ದಾರ್ ವರ್ಣಿತ್ ನೇಗಿ.
ತುಂಗಾವಾಣಿ.
ಗಂಗಾವತಿ: ಜ-16 ತಾಲ್ಲೂಕಿಗೆ ನೂತನ ತಹಶೀಲ್ದಾರಾಗಿ ವರ್ಣಿತ್ ನೇಗಿ, ಭಾ,ಆ,ಸೇ ರವರನ್ನು ಪರೀಕ್ಷಾರ್ಥ ಅಧಿಕಾರಿಯಾಗಿ ಸ್ವತಂತ್ರ ಅಧಿಕಾರ ಚಲಾಯಿಸಲು VK ಸುರಳ್ಕರ್ ಆದೇಶ ಹೊರಡಿಸಿದ್ದಾರೆ,
ಈ ಹಿಂದೆ ಪ್ರಸ್ತುತ ಇರುವ ಗಂಗಾವತಿ ತಹಶೀಲ್ದಾರ್ ರೇಣುಕಾ ರವರ ಲಂಚಾವತಾರದ ವಿಸ್ತೃತ ವರದಿ ತುಂಗಾವಾಣಿ ಭಿತ್ತರಿಸಿತ್ತು, ಇದುವರೆಗೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ, ಜಿಲ್ಲಾಧಿಕಾರಿಗಳು ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಕ್ಕೆ ಭೇಟಿ ನೀಡಿದಾಗ ಮಾಧ್ಯಮದವರು ಮತ್ತು ಸಾರ್ವಜನಿಕರ ಪ್ರಶ್ನೆ ಒಂದೆ ಆಗಿತ್ತು.!
ಸಾಹೇಬ್ರೆ ಲಂಚಾವತಾರದ ಆರೋಪ ಹೊತ್ತಿರುವ ಗಂಗಾವತಿ ತಹಶಿಲ್ದಾರರ ಮೇಲೆ ಯಾವ ಕ್ರಮ ಕೈಗೊಂಡಿದ್ದಿರಿ ಎಂದು..!?
ಸರಕಾರ ಕ್ರಮ ಕೈಗೊಳ್ಳಲು ವಿಳಂಬ ಮಾಡುತ್ತಿರುವುದರಿಂದ ಜಿಲ್ಲಾಧಿಕಾರಿಗಳು ಈ ನಿರ್ಧಾರಕ್ಕೆ ಬಂದ್ರಾ ಎನ್ನುವ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡಿದೆ.!? ಲಂಚಾವತಾರಕ್ಕೆ ಅಧಿಕಾರ ಇಲ್ಲದ ಶಿಕ್ಷೆ ನಾ..!?
ಎಂದು ಜನ ಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದಾರೆ.!?
ಇತ್ತ ಗಂಗಾವತಿ ಶಾಸಕರಾದ ಪರಣ್ಣ ಮನವಳ್ಳಿ ಯವರಿಂದಲೂ ಸಹ ಲಂಚಾವತಾರದ ಆರೋಪ ಹೊತ್ತಿರುವ ಗಂಗಾವತಿ ತಹಶಿಲ್ದಾರರ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.!
ಏನೆ ಇರಲಿ ಮುಂದಿನ ದಿನಮಾನದಲ್ಲಿ ಸರಕಾರ ಯಾವ ಕ್ರಮ ಕೈಗೊಳ್ಳತ್ತದೆ ಕಾದು ನೋಡಬೇಕಿದೆ.?
ತುಂಗಾವಾಣಿ
ಇದು ಸತ್ಯ 🔥 ಸಮರ