Breaking News

ಕೊಪ್ಪಳ: DC ಆದೇಶ, ಭಾರಿ ದಂಡ ವಸೂಲಿ. ಅಸಲಿಗೆ ಹೆದ್ದಾರಿಯಲ್ಲಿ ಏನ್ ನಡೆಯಿತು.?

ಕೊಪ್ಪಳ: DC ಆದೇಶ, ಭಾರಿ ದಂಡ ವಸೂಲಿ.
ಅಸಲಿಗೆ ಹೆದ್ದಾರಿಯಲ್ಲಿ ಏನ್ ನಡೆಯಿತು.?


ತುಂಗಾವಾಣಿ.
ಕೊಪ್ಪಳ: ಪೆ-5 ಜಿಲ್ಲೆಯಲ್ಲಿ ಅಕ್ರಮವಾಗಿ ಕಲ್ಲು ಕಂಕರ್ ಬಳಕೆ ಮಾಡಿದ್ದು, ಅದರ ದಂಡವನ್ನು ಕಟ್ಟದೆ ಮಂಡುತನ ಮಾಡಿದ ಓರಿಯಂಟಲ್ ಸ್ಟ್ರಕ್ಚರಲ್ ಇಂಜಿನಿಯರಿಂಗ್ ಪ್ರೈ.ಲೀ ಕಂಪನಿ ಟೋಲ್ ಜಪ್ತಿಗೆ ಜಿಲ್ಲಾಧಿಕಾರಿ ವಿಕಾಸ ಕಿಶೋರ್ ಸುರಳ್ಕರ್ ಖಡಕ್ ಆದೇಶ ಹೊರಡಿಸಿದ್ದರು,

ಆದೇಶದ ಪ್ರತಿಯೊಂದಿಗೆ ಟೋಲ್ ಜಪ್ತಿ ಮಾಡಲು ತೆರಳಿದ ಉಪವಿಭಾಗದ ಸಹಾಯಕ ಆಯುಕ್ತ ನಾರಾಯಣರಡ್ಡಿ ಕನಕರಡ್ಡಿ ಮತ್ತು ತಂಡ ಕೇವಲ ಎರಡು ಘಂಟೆಗಳಲ್ಲಿ ದೊಡ್ಡ ಮೊತ್ತದ ₹75,88,650-/ ವಸೂಲಿಯಾದ ಘಟನೆ ನಡೆದಿದೆ,

ಹೌದು GMR – OSE ಹುನಗುಂದ ಹೊಸಪೇಟೆ ಹೈವೆ ಪ್ರ,ಲಿಂ, ಕಂಪನಿಯು ಅಕ್ರಮವಾಗಿ ಹೆದ್ದಾರಿಗೆ ಕಲ್ಲು ಕಂಕರ್ ಬಳಕೆ ಮಾಡಿತ್ತು, ಇದು ಲೋಕಾಯುಕ್ತ ಸಂಸ್ಥೆಯಲ್ಲಿ ದೂರು ದಾಖಲಾಗಿತ್ತು, ಆದರೆ ವಸೂಲಿ ಮಾಡಲು ಗಣಿ ಇಲಾಖೆ ಹಿಂದೆಟು ಹಾಕಿತ್ತು ಎನ್ನಲಾಗುತ್ತಿದೆ.!?

ದೊಡ್ಡ ಮೊತ್ತದ ಹಣವನ್ನು ವಸೂಲಿ ಮಾಡಲು ಜಿಲ್ಲಾಧಿಕಾರಿಗಳಿಗೆ ಹಲವು ಸಂಘ ಸಂಸ್ಥೆಗಳು ಮನವಿ ಸಲ್ಲಿಸಿದ್ದರು ಇದನ್ನು ಮನಗಂಡ ಕೊಪ್ಪಳದ ಜಿಲ್ಲಾಧಿಕಾರಿ ಸುರಳ್ಕರ್ ವಸೂಲಿ ಇಲ್ಲ ಜಪ್ತಿ ಮಾಡಲು ಆದೇಶ ಮಾಡಿ ಅದರ ನೇತ್ರತ್ವ AC ನಾರಾಯಣರಡ್ಡಿ ಯವರಿಗೆ ವಹಿಸಿದ್ದರು, ಆದೇಶದ ಪ್ರತಿ ಪಡೆದ AC ಯವರು ಕೆಲವೇ ಘಂಟೆಗಳಲ್ಲಿ ₹75,88,650-/ ಲಕ್ಷ ರೂ, ವಸೂಲಿ ಮಾಡಿ ಏಳು ವರ್ಷದ ಪ್ರಕರಣಕ್ಕೆ ತಿಲಾಂಜಲಿ ಇಟ್ಟಿದ್ದಾರೆ,
ಕೊಪ್ಪಳ ಮತ್ತು ಕುಷ್ಟಗಿ ತಹಶೀಲ್ದಾರರು, ಹಾಗು ಗಣಿ ಇಲಾಖೆಯ ಅಧಿಕಾರಿಗಳು ಪೋಲಿಸ್ ಇಲಾಖೆ ಅಧಿಕಾರಿಗಳ ತಂಡ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.!

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Get Your Own News Portal Website 
Call or WhatsApp - +91 84482 65129

Check Also

ಮಟಮಟ ಮಧ್ಯಾನ್ಹ ಮನೆಗಳ್ಳತನ. ನಗನಾಣ್ಯ ದೋಚಿದ ಕಳ್ಳರು.!

ಮಟಮಟ ಮಧ್ಯಾನ್ಹ ಮನೆಗಳ್ಳತನ. ನಗನಾಣ್ಯ ದೋಚಿದ ಕಳ್ಳರು.! ತುಂಗಾವಾಣಿ ಗಂಗಾವತಿ ಜ-28 ಗಂಗಾವತಿ ನಗರದ ಹೃದಯ ಭಾಗದಲ್ಲಿರುವ ಯಾವತ್ತು ಜನನಿಬಿಡವಾಗಿರುವ …