Breaking News

ಕಾರಟಗಿ: ನೂತನ PSI ಆಗಿ L. ಅಗ್ನಿ ಅಧಿಕಾರ ಸ್ವೀಕಾರ.!

ಕಾರಟಗಿ: ನೂತನ PSI ಆಗಿ L. ಅಗ್ನಿ ಅಧಿಕಾರ ಸ್ವೀಕಾರ.!


ತುಂಗಾವಾಣಿ.
ಕಾರಟಗಿ :ಜ-6 ಪಟ್ಟಣದ ಪಿಎಸ್‌ಐ ಅವಿನಾಶ್ ಕಾಂಬ್ಳೆ ಅವರನ್ನು ಕರ್ತವ್ಯ ಲೋಪದ ಆದಾರದ ಮೇಲೆ ಅಮಾನತ್ತು ಆಗಿದ್ದ ಹಿನ್ನೆಲೆ ತೆರವಾದ ಸ್ಥಾನಕ್ಕೆ ನೂತನ PSI ಎಲ್, ಅಗ್ನಿಯವರು ಅಧಿಕಾರ ಸ್ವೀಕಾರ ಮಾಡಿದ್ದಾರೆ,

ಈ ಮೊದಲು ಬೀದರ್ ನಲ್ಲಿ, ಮತ್ತು ರಾಯಚೂರಿನ ಪಶ್ಚಿಮ ವಲಯ, ಮತ್ತು ಮಾರ್ಕೆಟ್ ಯಾರ್ಡ್, ದೇವದುರ್ಗ ದಲ್ಲಿ ಸೇವೆ ಸಲ್ಲಿಸಿದ ಇವರು ಖಡಕ್ ಅಧಿಕಾರಿ ಎಂಬ ಹೆಸರನ್ನು ಸಾರ್ವಜನಿಕ ವಲಯದಲ್ಲಿ ಪಡೆದಿದ್ದಾರೆ. ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನವರು,
ತುಂಗಾವಾಣಿಯೊಂದಿಗೆ ಮಾತನಾಡಿದ ಅಗ್ನಿಯವರು ಇದೇ ಮೊದಲ ಬಾರಿಗೆ ಕಾರಟಗಿಯಲ್ಲಿ ಅಧಿಕಾರವನ್ನು ಸ್ವೀಕರಿಸಿದ್ದು ಸಾರ್ವಜನಿಕರ ಸಹಕಾರ ಬಹು ಮುಖ್ಯವಾಗಿದೆ ಎಂದು ತಿಳಿಸಿದ ಅವರು ಕಾರಟಗಿ ತಾಲ್ಲೂಕಿನಾಧ್ಯಂತ ಮಟ್ಕಾ, ಇಸ್ಪೀಟು, ಮರಳುನಂತ ಅನೇಕ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಬಂದಿದ್ದು ಅವುಗಳಿಗೆ ಕಡಿವಾಣ ಹಾಕುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೆವೆ ಎಂದು ತಿಳಿಸಿದರು.!

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Check Also

63 PDO ಗಳು 15 ಕಾರ್ಯದರ್ಶಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಅದೇಶ, ಕೊಪ್ಪಳ ಜಿಲ್ಲೆಯ ಪಿಡಿಓಗಳು ಯಾರು ಗೊತ್ತೇ…!?

63 PDO ಗಳು 15 ಕಾರ್ಯದರ್ಶಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಅದೇಶ, ಕೊಪ್ಪಳ ಜಿಲ್ಲೆಯ ಪಿಡಿಓಗಳು ಯಾರು ಗೊತ್ತೇ…!? ತುಂಗಾವಾಣಿ. …