ಕಿಸ್ಸಿಂಗ್ ತಹಶೀಲ್ದಾರ್ ಗುರುಬಸ್ಯಾ ಅಮಾನತ್ತು.
ತುಂಗಾವಾಣಿ
ಕೊಪ್ಪಳ ನ 27 ಜಿಲ್ಲಾಧಿಕಾರಗಳ ಕಾರ್ಯಾಲಯದ ನಗರಾಭಿವೃದ್ಧಿ ಕೋಶದಲ್ಲಿ ತಹಶಿಲ್ದಾರನಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೆ ಎಂ ಗುರುಬಸವರಾಜ ನನ್ನು ಸರ್ಕಾರ ಅಮಾನತ್ತು ಮಾಡಿ ಆದೇಶ ಹೊರಡಿಸಿದೆ.
ಕಳೆದ ಆಗಷ್ಟ ತಿಂಗಳಿನಲ್ಲಿ ಈತನ ಮೇಲೆ ಸಹ ಸಿಬ್ಬಂದಿಯ ಜೊತೆ ಅನುಚಿತ ವರ್ತನೆ ಹಾಗು ಲೈಂಗಿಕ ಕಿರುಕುಳದ ವಿಡಿಯೋ ವೈರಲ್ ಆಗಿ ಕುಷ್ಟಗಿ ಪೋಲಿಸ್ ಠಾಣೆಯಲ್ಲಿ ನೊಂದ ಮಹಿಳೆಯಿಂದ ಪ್ರಕರಣ ದಾಖಲಾಗಿತ್ತು. ತುಂಗಾವಾಣಿಯಲ್ಲಿ ” ತಹಶಿಲ್ದಾರ ಗುರುಬಸ್ಯಾನ ಕಾಮುಕ ಆಟ ಬಯಲು ” ಎಂಬ ಶೀರ್ಷಿಕೆಯಲ್ಲಿ ಕಾಮುಕ ಅಧಿಕಾರಿ ಗುರುಬಸವರಾಜನ ಕೃತ್ಯ ಬಯಲು ಮಾಡಿತ್ತು.
ಕೊಪ್ಪಳ ಜಿಲ್ಲಾಧಿಕಾರಿಗಳು ಹಾಗು ಕುಷ್ಟಗಿ ಪೋಲಿಸರು ಸಲ್ಲಿಸಿದ ವರದಿ ಆಧಾರದ ಮೇಲೆ ಇಲಾಖಾ ವಿಚಾರಣೆ ಬಾಕಿ ಇರಿಸಿ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್ ನಾಗರಾಜು ಅಮಾನತ್ತು ಆದೇಶ ಹೊರಡಿಸಿದ್ದಾರೆ.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.