ಬೈಕ್ ಕಳ್ಳನ ಬಂಧನ.
ಕದ್ದ ಬೈಕ್‌ಗಳು ಜಪ್ತಿ.
ತುಂಗಾವಾಣಿ
ಗಂಗಾವತಿ ಫೆ 04 ಗಂಗಾವತಿ ಗ್ರಾಮೀಣ ಠಾಣೆಯ ಪೋಲಿಸರು ಕಾರ್ಯಾಚರಣೆ ನಡೆಸಿ ಒಬ್ಬ ಬೈಕ್ ಕಳ್ಳನನ್ನು ಬಂಧಿಸಿದ್ದು ಅವನು ಕಳ್ಳತನ ಮಾಡಿ ಒತ್ತೆಇಟ್ಟಿದ್ದ ಹತ್ತು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಎಂದು ಗ್ರಾಮೀಣ ಪೋಲಿಸ್ ಠಾಣೆ ಆವರಣದಲ್ಲಿ ನಡೆದ ಪತ್ರಿಕಾ ಗೊಷ್ಟಿಯಲ್ಲಿ ಆರೋಪಿತನ ಹೆಸರು ಹಾಗು ಚೆಹರೆ ಬಹಿರಂಗ ಪಡಿಸದೆ ಮಾಹಿತಿ ನೀಡಿದ್ದಾರೆ.
ಮೇಲಾಧಿಕಾರಿಗಳ ಸೂಚನೆಯಂತೆ ಆರೋಪಿಗಳ ವಯಕ್ತಿಕ ಮಾಹಿತಿ ನೀಡುತ್ತಿಲ್ಲ ವೆಂದು ಪೋಲಿಸರು ತಿಳಿಸಿದ್ದಾರೆ.
ದಿ 4 ರ ಗುರುವಾರ ಮುಂಜಾನೆ ಗಸ್ತು ಕರ್ತವ್ಯದಲ್ಲಿದ್ದ ಎಎಸ್ಐ ವೆಂಕಟೇಶ್ ಚಹ್ವಾಣ, ಪೇದೆ ಪಕೀರಪ್ಪ ಹಾಗು ಮಂಜುನಾಥ್ ರವರು ಗಂಗಾವತಿ ತಾಲೂಕಿನ ದಾಸನಾಳ ಗ್ರಾಮದ ಹತ್ತಿರ ಅನಮಾನಾಸ್ಪದವಾಗಿ ತಿರುಗುತ್ತಿದ್ದ ಒಬ್ಬ ವ್ಯಕ್ತಿಯನ್ನು ಹಿಡಿದು ಠಾಣೆಗೆ ಕರೆತಂದು ವಿಚಾರಿಸಿದ್ದು ದಾಸನಾಳ ಗ್ರಾಮದವನಾಗಿದ್ದು ಇಟ್ಟಂಗಿ ಭಟ್ಟಿಯಲ್ಲಿ ಕೆಲಸ ಮಾಡುವ ಆತನು ಹಾಗು ಆತನ ಇನ್ನೊಬ್ಬ ಗೆಳೆಯ ಸೇರಿ ದ್ವಿಚಕ್ರ ವಾಹನಗಳನ್ನು ಕದ್ದು ಒತ್ತೆಇಟ್ಟು ಖರ್ಚು ಮಾಡುತ್ತೇವೆ ಅಂತ ಒಪ್ಪಿಕೊಂಡಿದ್ದಾನೆ ಅಂತ ಪ್ರಕಟಣೆ ನೀಡಿದ್ದು ಆರೋಪಿತನ ಮೇಲೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಕಲಂ 41(ಡಿ) ರ/ವಿ ಸಿ ಆರ್ ಪಿ ಸಿ ಹಾಗೂ ಐಪಿಸಿ 379 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತಲೆಮರಿಸಿಕೊಂಡಿರುವ ಇನ್ನೊಬ್ಬ ಆರೋಪಿತನನ್ನು ಬಂಧಿಸಲು ಪೋಲಿಸರು ಬಲೆ ಬೀಸಿದ್ದಾರೆ.!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.
ವಿಶೇಷ ಸೂಚನೆ:
ತುಂಗಾವಾಣಿ ನ್ಯೂಸ್ ನಲ್ಲಿ ಯಾವುದೆ ಸಿಬ್ಬಂದಿ/ಏಜೆಂಟ್ ರನ್ನು ನೇಮಿಸಿಕೊಂಡಿರುವುದಿಲ್ಲ ಯಾರಾದರೂ ತುಂಗಾವಾಣಿ ಪತ್ರಿಕೆ/ನ್ಯೂಸ್ ನವರು ಎಂದು ಹೇಳಿಕೊಂಡು ಬಂದರೆ ಕೂಡಲೇ ಈ ನಂಬರ್ ಗೆ ಮಾಹಿತಿ ಕೊಡಿ.
9164449191
ಧನ್ಯವಾದಗಳು