ನೂತನ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಾಗಿ ಗಂಗಪ್ಪ ಅಧಿಕಾರ ಸ್ವೀಕಾರ.
ತುಂಗಾವಾಣಿ
ಕೊಪ್ಪಳ: ಜ-13 ಈ ಹಿಂದೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ಸಿದ್ದರಾಮೇಶ್ವರ ರವರು ಹೊಸಪೇಟೆಗೆ ಸಹಾಯಕ ಆಯುಕ್ತರಾದ ವರ್ಗಾ ವಾದ ಹಿನ್ನೆಲೆ ಅವರ ಸ್ಥಾನಕ್ಕೆ ಗಂಗಪ್ಪ ರವರು ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಾಗಿ ನೇಮಕವಾಗಿದ್ದಾರೆ,
ಗಂಗಪ್ಪರವರು ಈ ಹಿಂದೆ ಗಂಗಾವತಿ, ಸಿಂಧನೂರು, ಕುಷ್ಟಗಿ, ಬಾಗಲಕೋಟೆ ಭಾಗದಲ್ಲಿ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿದ್ದರು, ತುಂಗಾವಾಣಿ ಯೊಂದಿಗೆ ಮಾತನಾಡಿದ ಅವರು ಜ:11 ರಂದು ಅಧಿಕಾರ ವಹಿಸಿಕೊಂಡಿರುವೆ, ಜಿಲ್ಲೆಯ ನಗರಸಭೆಗಳು ಪಟ್ಟಣ ಪಂಚಾಯತಿಗಳ ಸಮಸ್ಯೆಗಳ ಬಗ್ಗೆ ಯೋಜನೆ ರೂಪಿಸಲಾಗುವುದು, ಸಮಗ್ರ ಅಭಿವೃದ್ಧಿಗೆ ಅಧಿಕಾರಿಗಳು, ಜನಪ್ರತಿಸಿಧಿಗಳು, ಸಾರ್ವಜನಿಕರು, ಸಹಕರಿಸಬೇಕು ಎಂದು ತಿಳಿಸಿದರು.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.