ಕಲ್ಲು ಕ್ವಾರಿಗೆ ದಾಳಿ,
ನಿಷೇದಿತ ಜಿಲೆಟಿನ್ ಕಡ್ಡಿಗಳು ವಶ.
ತುಂಗಾವಾಣಿ
ಗಂಗಾವತಿ ಫೆ-6 ಇಂದು ಗಂಗಾವತಿ ತಾಲೂಕಿನ ವೆಂಕಟಗಿರಿ ಹೊಬಳಿಯ ಸರ್ವೆ ನಂ-77 ರ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಪ್ರದೇಶಕ್ಕೆ ರಾಯಚೂರು ಕೊಪ್ಪಳ ಆಂತರಿಕ ಭಧ್ರತಾ ವಿಭಾಗದ ಅಧಿಕಾರಿಗಳು ದಾಳಿ ಮಾಡಿ ನಿಷೇಧಿತ ಸ್ಪೋಟಕಗಳಾದ ideal 216 ಜಿಲೆಟಿನ್ ಮದ್ದು ಕಡ್ಡಿಗಳನ್ನು ವಶಪಡಿಸಿಕೊಂಡಿದ್ದಾರೆ.
ವೆಂಕಟಗಿರಿ ರಾಂಪುರ ಮಲ್ಲಾಪುರ ಹಾಗು ಇತಿಹಾಸ ಪ್ರಸಿದ್ಧ ವಾನಭದ್ರೇಶ್ವರ ಪ್ರದೇಶಗಳಲ್ಲಿ ನಿಷೇದಿತ ಜಿಲೆಟಿನ್ ಸ್ಪೋಟಕ ಬಳಿಸಿ ಬೃಹತ್ ಕಲ್ಲು ಗಳನ್ನು ಸ್ಫೋಟಿಸುವ ಚಟುವಟಿಕೆ ಅವ್ಯಾಹತವಾಗಿ ನಡೆದಿದ್ದು, ಸ್ಪೋಟಕ ಬ್ಲಾಷ್ಟ್‌ನಿಂದಾಗಿ ಅಕ್ಕಪಕ್ಕದ ಹಳ್ಳಿಗಳ ಮನೆಗೋಡೆ ಬಿರುಕು ಮೂಡುತ್ತಿವೆ ಹಾಗು ಐತಿಹಾಸಿಕ ಸ್ಮಾರಕಗಳಿಗೂ ಧಕ್ಕೆ ಯಾಗುತ್ತಿದ್ದು, ಕಾಡಿನಲ್ಲಿರುವ ವನ್ಯಜೀವಿಗಳು ನಾಡಿಗೆ ಬರಲು ಪ್ರಾಂಭಿಸಿದ್ದವು ಚಿರತೆ ದಾಳಿಗೆ ಈಗಾಗಲೇ ನಾಲ್ಕ ಜನರು ಸಾವನ್ನಪ್ಪಿದ ಉದಾಹರಣೆಗಳು ಗಾಯಗೊಂಡವರು ಅನೇಕರು ಇದ್ದಾರೆ, ಇಂತಹ ಸ್ಪೋಟಕದ ಬಗ್ಗೆ ಸ್ಥಳೀಯರು ಅನೇಕ ಬಾರಿ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ದೂರು ಸಲ್ಲಿಸಿದರೂ ಸ್ಪೋಟಕ ಬಳಕೆಯ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಗಾಢವಾದ ನಿದ್ರೆಯಲ್ಲಿದೆ ಎಂದು ಸ್ಥಳೀಯರು ಆರೋಪವಿತ್ತು.!
ಈ ಬಗ್ಗೆ ಕಳೆದ ತಿಂಗಳು ” ಬೋರ್ ಬ್ಲಾಸ್ಟ್‌ಗೆ ನಲುಗುತ್ತಿದೆ ವೆಂಕಟಗಿರಿ.! ಎಂದು ಶೀರ್ಷಿಕೆ ಅಡಿಯಲ್ಲಿ ತುಂಗಾವಾಣಿಯಲ್ಲಿ ವಿಸ್ತೃತ ವರದಿ ಮಾಡಿತ್ತು,
ಕಾರ್ಯಚರಣೆ:
ಗಂಗಾವತಿ ಉಪವಿಭಾಗದ DYSP ಆರ್.ಉಜ್ಜಿನಕೊಪ್ಪ, ನೇತೃತ್ವದಲ್ಲಿ ಗ್ರಾಮಿಣ ಸಿಪಿಐ ಉದಯರವಿ, ಪಿಯಸ್ಐ ದೊಡ್ಡಪ್ಪ ಜೆ ಜೊತೆಯಲ್ಲಿ ಆಂತರಿಕ ಭದ್ರತಾ ವಿಭಾಗದ ಪಿಐ ಸತೀಶ್ ಕಣಿಮೇಶ್ವರ್ ಕಾರ್ಯಾಚರಣೆ ಮಾಡಿ ಸುಮಾರು ಇಪ್ಪತ್ತೈದು ಕೆಜಿಯಷ್ಟು ನಿಷೇದಿತ ಜಿಲೆಟಿನ್ ಕಡ್ಡಿಗಳನ್ನು ವಶಪಡಿಸಿಕೊಂಡು ಪ್ರಕಣ ದಾಖಲಿಸಿಕೊಂಡಿದ್ದಾರೆ.!
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.