ಗಂಗಾವತಿ: ಶಾರ್ಟ್ ಸಕ್ರ್ಯೂಟ್ ನಾಲ್ಕು ಅಂಗಡಿ ಭಸ್ಮ..!
ಘಟನಾ ಸ್ಥಳಕ್ಕೆ: ಮಾಜಿ,MLC ಶ್ರೀನಾಥ್ ಭೇಟಿ.
ತುಂಗಾವಾಣಿ.
ಗಂಗಾವತಿ: ಜ-24 ನಗರದ ಜುಲೈ ನಗರ ರಸ್ತೆಯಲ್ಲಿ ಬರುವ ಮಸ್ಜಿದ್ ಹತ್ತಿರದ ನಾಲ್ಕು ಅಂಗಡಿಗಳಿಗೆ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾದ ಘಟನೆ ತಡ ರಾತ್ರಿ ನಡೆದಿದೆ.
ಬೆಳಗಿನ ಜಾವ 2-30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು ಮೊದಲು ಹೊನ್ನೂರಸಾಬ ಎಂಬುವವರು ರಗ್ಜಿನ್ ಅಂಗಡಿಗೆ ತಗುಲಿದ ಬೆಂಕಿ ನಂತರದಲ್ಲಿ ಪಕ್ಕದ ದ್ವಿಚಕ್ರ ವಾಹನದ ಅಂಗಡಿಗೆ ತಗುಲಿ ನಂತರ ಆಸೀಫ್ ಹುಂಡೆಗಾರ ಕಾರ್ಪೆಂಟರ್ ಅಂಗಡಿಗೆ ವ್ಯಾಪಿಸಿದ ಬೆಂಕಿ ಅಂಗಡಿಯಲ್ಲಿ ಇದ್ದ ನಾನಾ ರೀತಿಯ ಬಡಿಗೆ ಕೆಲಸದ ಸಾಮಾಗ್ರಿಗಳು ಸುಟ್ಟು ಭಸ್ಮವಾಗಿವೆ,
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ,
ಹೊನ್ನೂರ್ ಸಾಬ, ಜಾವೀದ್.ಖಾಜಾಪಾಶಾ, ಆಸೀಫ್ ಹುಂಡೇಗಾರ ಇವರುಗಳಿಗೆ ಸೇರಿದ ಅಂಗಡಿಗಳು ಸುಮಾರು ಹದಿನೈದು ಲಕ್ಷಕ್ಕೂ ಹೆಚ್ಚು ಸಾಮಾಗ್ರಿಗಳು ಸುಟ್ಟು ಭಸ್ಮವಾಗಿದ್ದು ಇಲ್ಲಿನ ಜನಪ್ರತಿಸಿಧಿಗಳು ಸರ್ಕಾರದಿಂದ ಪರಿಹಾರ ಧನವನ್ನು ಒತ್ತಾಯಿಸಿದರು.
ಘಟನಾ ಸ್ಥಳಕ್ಕೆ ಮಾಜಿ MLC, ಶ್ರೀನಾಥ್, ಮತ್ತು ನಗರಸಭೆ ಸದಸ್ಯರಾದ ಉಸ್ಮಾನ್ ಬಿಚುಗತ್ತಿ, ಮೌಲಾಸಾಬ, ಗದ್ವಾಲ್ ಕಾಸಿಂಸಾಬ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಬ್ಬಾರ ಬಿಚುಗತ್ತಿ, ಭೇಟಿ ನೀಡಿ ಸಾಂತ್ವನ ಹೇಳಿದರು,
ನಗರ ಪೋಲಿಸ್ ಠಾಣೆಯ ಪಿ,ಐ, ವೆಂಕಟಸ್ವಾಮಿ ಮತ್ತು ಸಿಬ್ಬಂದಿ ಘಟನೆಯ ವಿವರ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.