ಬೋರ್ ಬ್ಲಾಸ್ಟ್ ಗೆ ನಲುಗುತ್ತಿದೆ ವೆಂಕಟಗಿರಿ.!
ಮುತ್ತಪ್ಪನ ಘನಾಂಧಾರಿ ಕೆಲಸ ಎಂಥದ್ದು ಗೊತ್ತಾ..?
ತುಂಗಾವಾಣಿ.
ಗಂಗಾವತಿ: ಜ-22 ತಾಲ್ಲೂಕಿನ ವೆಂಕಟಗಿರಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಜಯಶ್ರೀ ಕ್ರಷರ್ ಹಾಡು ಹಗಲೇ ಬೋರ್ ಬ್ಲಾಸ್ಟ್ ಮಾಡುತ್ತಿದ್ದರು ಕಣ್ಣ್ ಮುಚ್ಚಿ ಕುಳಿತಿದೆಯಾ ಗಣಿ ಇಲಾಖೆ ಮತ್ತು ತಾಲ್ಲೂಕು ಆಡಳಿತ ಎನ್ನುವ ಅನುಮಾನ ಕಾಡುತ್ತಿದೆ.!?
ಹೌದು ಶಿವಮೊಗ್ಗ ದಲ್ಲಿ ನಡೆದ ಜಿಲಿಟಿನ್ ಸ್ಪೋಟಕ ದಿಂದ ಎಷ್ಟು ಜನರು ಮೃತಪಟ್ಟಿದ್ದಾರೆ ಎನ್ನುವುದು ಇನ್ನೂ ಮಾಹಿತಿ ದೊರೆಯುತ್ತಿಲ್ಲ,
ಈಗ ಎಲ್ಲಾ ಕಡೆ ಜಾಲಾಡುತ್ತಿರುವ ಸರ್ಕಾರ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ವೆಂಕಟಗಿರಿ ಹೋಬಳಿಯ ಜಯಶ್ರೀ ಕ್ರಷರ್ ನವರು ಹಾಡು ಹಗಲೇ ಬೋರ್ ಕೊರೆದು ಅದರಲ್ಲಿ ಸಾಕಷ್ಟು ಪ್ರಮಾಣದ ಮದ್ದುಗಳನ್ನು ಇಟ್ಟು ಸ್ಪೋಟಿಸುತ್ತಾರೆ ಎಂದು ದೂರು ಸಲ್ಲಿಸಿದರು, ಗಣಿ ಇಲಾಖೆಯ ಹಿರಿಯ ಭೂ ವಿಜ್ಞಾನಿ ಮುತ್ತಪ್ಪ ಮಾತ್ರ ಅವರ ಪ್ರಸಾದಕ್ಕೆ ಸೋತು ಹೋಗಿದ್ದಾರೆ, ಇತ್ತ ಕಡೆ ಕಣ್ಣಾಯಿಸಿಯು ಸಹ ನೋಡುತ್ತಿಲ್ಲ.!?
ಹಗಲು ರಾತ್ರಿ ಎನ್ನದೆ ಬೋರ್ ಕೊರೆಯುವ ಮತ್ತು ಸ್ಪೋಟಿಸುವ ನಿರಂತರ ನಡೆದಿದೆ ಈ ಬಗ್ಗೆ ಅನೇಕ ದೂರುಗಳು ಕೊಟ್ಟರು ಕ್ಯಾರೆ ಅನ್ನದ ಮುತ್ತಪ್ಪ ಮುಕ್ಕಲು ಬಂದಿದ್ದಾನೆ ಅನಿಸುತ್ತೆ.!?
ಈ ಮುತ್ತಪ್ಪ ಈ ಹಿಂದೆ ಕೊಪ್ಪಳದಲ್ಲೇ ಇದ್ದ ಲೋಕಾಯುಕ್ತ ಕೇಸ್ ಸಹ ದಾಖಲಾಗಿತ್ತು ಆಗ ವರ್ಗವಾಗಿ ಹೋಗಿದ್ದ ಮುತ್ತಪ್ಪ ಮತ್ತೆ ಹಿರಿಯ ಭೂ ವಿಜ್ಞಾನಿ ಯಾಗಿ ಮತ್ತೆ ವಕ್ಕರಿಸಿದ್ದಾನೆ.!?
ಜಯಶ್ರೀ ಕ್ರಷರ್ ನ ಮಾಲೀಕ ಗಣಿ ಇಲಾಖೆಗೆ ಯಾವ ತರ ಮೈಂಟೈನ್ ಮಾಡ್ತಾರೆ ಎಂದ್ರೆ ಅಚ್ಚರಿ ಪಡ್ತಿರಾ.!? ಯಾವುದೇ ದೂರು ನೀಡಿದರು ಅದು ಅವರ ಟೇಬಲ್ ಗೆ ಹೋಗಿರ ಬಾರದು ಆತರ ಮೈಂಟೆನ್ ಮಾಡ್ತಾರೆ ಎಂದರೆ
ಅರ್ಥೈಸಿಕೊಳ್ಳಿ.!?
ಹಾಡು ಹಗಲೇ ಡೈನಮೈಟ್ ಸ್ಪೋಟಿಸುತ್ತಿದ್ದರು ಕ್ರಮ ಯಾಕಿಲ್ಲ.!?
ನೈಸರ್ಗಿಕ ಗುಡ್ಡಗಳಲ್ಲಿ ಬೋರ್ ಬ್ಲಾಸ್ಟ್ ಮಾಡುತ್ತಿರುವುದರಿಂದ ಬೆಟ್ಟ ಗುಡ್ಡಗಳಲ್ಲಿರುವ ಚಿರತೆ , ಕರಡಿ , ನವಿಲು ಮುಳ್ಳುಹಂದಿ ಮೊಲ ಓತಿಕ್ಯಾತ ಕೋತಿಗಳು ಹಾವುಗಳು ಸೇರಿದಂತೆ ಅನೇಕ ಪ್ರಾಣಿ ಪಕ್ಷಿಗಳು ವಿವಿಧ ಪ್ರಭೇದದ ಜೀವ ಸಂಕುಲಕ್ಕೆ ಧಕ್ಕೆಯಾಗುತ್ತಿದ್ದು ಬೋರ್ ಬ್ಲಾಸ್ಟ್ ಸ್ಫೋಟಕ ಶಬ್ದಗಳಿಂದ ಜೀವಸಂಕುಲಕ್ಕೆ ಧಕ್ಕೆಯಾಗುವುದಲ್ಲೆ ಸುತ್ತಮುತ್ತಲಿನ ಹೊಲಗಳ ಮೇಲೆ ಸ್ಫೋಟಿಸಿದ ಕಲ್ಲುಗಳು ಬಿಳುತ್ತಿರುವುದು ಜನರು ದನಕರುಗಳನ್ನ ಮೇಯಿಸಲು ಬರುವ ಜನರು ಜೀವ ಅಪಾಯದಲ್ಲಿದೆ , ವನ್ಯ ಮೃಗಗಳು ನಾಡಿಗೆ ಬರುತ್ತಿವೆ, ಬೋರ್ ಬ್ಲಾಸ್ಟ್ ಮಾಡುವ ಜಯಶ್ರೀ ಸ್ಪೂನ್ ಕ್ರಷರ್ ಮಾಲೀಕತ್ವದ ಕ್ವಾರಿಯ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಒತ್ತಾಯಿಸುತ್ತಿದ್ದಾರೆ .!
ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಮಿಂಚಿನ ವೇಗದ ಕಾರ್ಯ ಮಾಡುತ್ತಿದ್ದರೆ ಗಣಿ ಇಲಾಖೆ ಮಾತ್ರ ಮಾಸದ ನೋಟಿಗೆ ಮಲಿಗಿರುವುದಂತೂ ಸತ್ಯ.!?
ಜಿಲ್ಲಾಡಳಿತ ಈ ಕ್ರಷರ್ ವಿರುದ್ಧ ಯಾವ ಕ್ರಮ ಕೈಗೊಳ್ಳಲಿದೆ ಕಾದು ನೋಡಬೇಕಿದೆ..!?
ಮುಂದಿನ ಸಂಚಿಕೆಯಲ್ಲಿ ಇನ್ನಷ್ಟು ಮುತ್ತಪ್ಪನ ಕಹಾನಿಗಳಿವೆ ಬರಲಿವೆ ಕಾದು ನೋಡಿ..!?
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.